ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಛೋಟಿ ಬೆಹರ್ ಗಜ಼ಲ್
ಬದುಕಿಗಾಗಿ ರೆಕ್ಕೆ ಬಡಿದು ದಣಿದೆನು ನಾನು
ಆಸರೆಗಾಗಿ ಕಾದು ಬಳಲಿ ಬೆಂಡಾದೆನು ನಾನು
ವಿಧಿಯ ಆಟ ಬಲ್ಲವರು ಯಾರಿಹರು ಹೇಳು
ಒಲ್ಲದ ಬಾಳಿಗೆ ಬಾಗಿ ಮಣಿದೆನು ನಾನು
ನನ್ನೆದೆಯ ಅಳಲು ನುಂಗಿ ಕಲ್ಲಾಗಿ ಬಿಟ್ಟೆ
ಮಸುಕು ಮರೆಗೆ ಮನದಿ ಕುದಿದೆನು ನಾನು
ಹೆಪ್ಪಾದ ಕನಸು ಕರಗದೆ ಮಂಕಾಗಿ ಉಳಿದಿದೆ
ಹಸಿವಿನ ಕಿಚ್ಚಿನಲಿ ಬೇಯುತ ತಣಿದೆನು ನಾನು
ಕಾಲನ ಸುಳಿಯಲಿ ಸಿಕ್ಕು ನುಗ್ಗಾದೆ ಬೇಗಂ
ಜಗದ ವಂಚನೆಗೆ ನಗುತ ಮಿಡಿದೆನು ನಾನು
ಹಮೀದಾ ಬೇಗಂ ದೇಸಾಯಿ
ಬದುಕಿನ ವೇದನೆಯ ಗಝಲ್, ಬಹಳ ಭಾವುಕವಾಗಿ ಮೂಡಿಬಂದಿದೆ.
ಧನ್ಯವಾದಗಳು ಮೆಚ್ಚುಗೆಗೆ.
ಹಮೀದಾ ಬೇಗಂ. ಸಂಕೇಶ್ವರ.