ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರಮೇಶ್ ನೆಲ್ಲಿಸರ

ಸ್ಮಶಾನ

ನಿಯಮಗಳನ್ನಿಲ್ಲಿ ಯಾರೂ
ಪಾಲಿಸಿಲ್ಲ
ಬಿದ್ದುಕೊಂಡಿದ್ದಾರೆ ಅಡ್ಡಾದಿಡ್ಡಿ
ಗೋರಿಗಳ ಮೇಲೆ ಕಲ್ಲುಗಳೇ ಇಲ್ಲ
ಇನ್ನೂ ಉದ್ದುದ್ದ ಸಾಲುಗಳನು ಎಲ್ಲಿ ಕೆತ್ತುವುದು?
ವಿಳಾಸವಿಲ್ಲದ ಶಾಂತ ಶವಗಳು

ಆಗಾಗ ಮೇಣದ ಬತ್ತಿಗಳ ಬೆಳಕು,
ಪ್ರಾರ್ಥನೆ ಹವನಗಳಿಲ್ಲಿ ಕಾಣಸಿಗದು
ಹರಕು ಚಾಪೆಗಳಡಿ ಭಾವನೆಗಳು
ಬೆರೆತುಹೋಗಿವೆ


ರಮೇಶ್ ನೆಲ್ಲಿಸರ

ಕವಿ ಪರಿಚಯ:

ಮೂಲತಃ ತೀರ್ಥಹಳ್ಳಿಯ ಮಂಡಗದ್ದೆ ಊರು, ಪ್ರಸ್ತುತ ಹೊಸನಗರ ತಾಲ್ಲೂಕಿನ ಯಡೂರು ಪ್ರೌಢಶಲೆಯಲ್ಲಿ ಆಂಗ್ಲಭಾಷಾ ಸಹಶಿಕ್ಷಕ. ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಕಥೆ- ಕವನಗಳು ಪ್ರಕಟವಾಗಿವೆ, ಹಲವು ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿರುತ್ತದೆ.

About The Author

Leave a Reply

You cannot copy content of this page

Scroll to Top