ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ
ಪೂರ್ವ ಮುಂಗಾರು
ಮುಂಗಾರು ಪೂರ್ವ ಮಳೆ
ಆಗಮನ ಪೂರ್ವ ಮಿಂಚು
ಗುಡುಗು ತೊಳೆದು ಕೊಳೆ
ಕಸಕಡ್ಡಿ ಮನಸ್ಸಿನ ರಾಡಿ ಕಳೆದು ಆಹ್ಲಾದ .
ಕಾದ ಕಾವಲಿಗೆ
ನೊಂದ ಮನಸ್ಸಿಗೆ ಹಿತ!
ಪೂರ್ವ ಮುಂಗಾರು
ಸುರಿವ ದಿಕ್ಕು ದಿಶೆ ಗೊತ್ತಿಲ್ಲ
ಯಾವ ಮುಹೂರ್ತಕ್ಕೆ ಎಲ್ಲಿ
ಎಷ್ಟು ಭಾರಿಯಾಗಿ ಸೊಗಸು
ಸುರಿಸುತ್ತೊ ಗೊತ್ತಿಲ್ಲ
ಎಷ್ಟು ಭಾರಿಯಾಗಿ ಮನಸು
ತಣಿಸುತ್ತೊ ಗೊತ್ತಿಲ್ಲ
ಅಥವ
ಬರಿ ಗುಡುಗುಡು ಎಂದು
ದೂರದಾಕಾಶದಲ್ಲಷ್ಟೆ ಮಿಂಚಿ
ಆನೆಕಲ್ಲಿನ
ಮತ್ತಷ್ಟು ಹೊಡೆತಕ್ಕೆ ಸಾಕ್ಷಿಯೋ ಗೊತ್ತಿಲ್ಲ!
ಪೂರ್ವ ಮುಂಗಾರಿಗೂ
ಮುಂಗುರಳ ತನುವಿಗೂ
ಅಂಥ
ವ್ಯತ್ಯಾಸವಿಲ್ಲ.
ಅವಳು
ಬಂದಾಗ ಸಾಂತ್ವನ
ಬಾರದಾಗ ಕಂಪನ
ಮತ್ತೆ ಪೂರ್ವ ಮುಂಗಾರು
ಬರುತ್ತೇನೆಂದು ಮೆರೆದು
ಬಾರದೇ
ಪಕ್ಕದೂರಿನಲ್ಲೆ ಮಳೆ ಸುರಿಸಿ
ಇಲ್ಲಿ ನಮ್ಮಲ್ಲೆ ಬರೆ ಕೊಳೆ !
ಕಸ ಕಡ್ಡಿ ಮನದ ರಾಡಿ.
ಆಹ್ಲಾದವಿಲ್ಲ
ಸಂಜೆಯ ನೆಮ್ಮದಿಯೂ ಇಲ್ಲ
ಥೇಟ್ ಅವಳೇ !!
ಡಾ.ಡೋ.ನಾ.ವೆಂಕಟೇಶ
ಕವಿ ಪರಿಚಯ:
ಲೇಖಕರು ಕಳೆದ 47 ವರ್ಷ ಗಳಿಂದ ವೈದ್ಯ ವೃತ್ತಿಯಲ್ಲಿದ್ದಿ,
ಸುಮಾರು 55 ವರ್ಷಗಳಿಂದ ಕವನ ಬರೆಯುವ ಹವ್ಯಾಸವಿದೆ. ಆಗಿನ ಪ್ರಜಾವಾಣಿ, ಕನ್ನಡ ಪ್ರಭ ಗಳ ವಾರದ ವಿಶೇಷ ಪುರವಣಿಗಳಲ್ಲಿ ತಿಂಗಳಿಗೆರಡು ಬಾರಿಯಾದರೂ ಇವರ ಕವನಗಳುಪ್ರಕಟವಾಗುತ್ತಿದ್ದವು!
ಕುವೆಂಪು ರವರ 67th ಜನ್ಮ ದಿನಕ್ಕೆ ಹೊರ ತಂದ “ಕವಿಗಳು ಕಂಡ ಕುವೆಂಪು “ದಲ್ಲಿಯ ಇವರ ಕವನ ವಿಮರ್ಶಕರ ಅತಿ ಪ್ರಶಂಸೆಗಳ ಪಾತ್ರ.
ಜತೆಗೆ ಅಡಿಗರ “ಸಾಕ್ಷಿ” ಯಲ್ಲೂ ಿವರಬರಹಗಳು ಪ್ರಕಟವಾಗಿದ್ದವು
ಯಾವುದೇ ಸಂಕಲನ ಈ ವಯಸ್ಕರಲ್ಲಿ ಹೊರತರುವ ಇರಾದೆ, ಶಕ್ತಿ ಖಂಡಿತ ಇಲ್ಲ
ಉತ್ತಮ ಕವಿತೆ, ಅಭಿನಂದನೆಗಳು ಸರ್
ಧನ್ಯವಾದಗಳು ತಮಗೆ !
Koop chaan Bhavoji
Thank you!