ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ-ಗಝಲ್

ಕಾವ್ಯ ಸಂಗಾತಿ

ಗಝಲ್

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಭೋಗವ ತ್ಯಜಿಸಿ ಯೋಗದ
ಹಾದಿಯಲಿ ನೆಮ್ಮದಿಯ ಪಡೆದೆಯಾ/
ಕಾಯವ ದಂಡಿಸಿ ವ್ಯಾಯಾಮ
ಮಾಡುತಲಿ ಅರೋಗ್ಯದಿ ನಡೆದೆಯಾ//

ಬೇಡವಾದ ಅನ್ಯರ ವಿಷಯಕ್ಕೆ
ತಲೆಹಾಕಿದರೆ ಗೌರವ ದಕ್ಕುವುದೇ/
ಕುಹಕ ಬುದ್ಧಿಯಲಿ ಕೆಣಕುತ
ಕೆಟ್ಟದಾದ ವಿಚಾರವ ಹಡೆದೆಯಾ//

ಗಾವಿನ ನುಡಿಯಿಂದ ಸವಿಯ
ಗಾಣವಿಲ್ಲದ ಗಾವರ ಮಿಡಿಯುವುದೇ/
ಗಾಡವ ನೀಡುತ ಗಾಗಳ
ಮಾಡುತ ಸ್ನೇಹವ ಒಡೆದೆಯಾ//

ಮತ್ಸರ ಬೇಧಭಾವ ಒಳಗಿಟ್ಟು
ಶಾಂತಿಯೆಂದರೆ ಬನದಲ್ಲಿ ಸುಮವಾಗುವುದೇ/
ಸೇಡಿನ ಸಂಚಿನಲಿ ಮೈಯುರಿ
ಮುನ್ನಡೆಗೆ ಸಂಘರ್ಷದಿ ತಡೆದೆಯಾ//

ಬೇಡದವರ ಸಂಗಡ ದೂರವಿದ್ದು
ಸಾಗಿದರೆ ಸುಖವುಂಟು ಕಟ್ಟೆ/
ಸ್ವಾರ್ಥಕ್ಕೆ ಹಂಬಲಿಸಿ ಹಬ್ಬಿದ್ದ
ಮಮತೆಯ ವೃಕ್ಷವ ಕಡಿದೆಯಾ//


ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಸಾಹಿತಿ ಕಲಾವಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಜಾಭೂಷಣ ಪ್ರಶಸ್ತಿ ಪುರಸ್ಕೃತರು
ಅಂಚೆ ಜೀವ -ವಿಮೆ ಮಂಡ್ಯಪ್ರಕಟಿತ ಕೃತಿಗಳು :ಮನಸ್ಸು ನಕ್ಕಾಗ, ಮನಸು ಮಲ್ಲಿಗೆ ನವಿರು, ಸಿರಿಸಂಪಿಗೆ, ಅಂತಃಕರಣ ಮೀಮಾಂಸಾ ಪುಸ್ತಕ, ಮನದ ಮಿಡಿತ ಗಝಲ್ ಪುಸ್ತಕ ಸಿದ್ಧತೆಯಲ್ಲಿದೆ..,ಹೀಗೆ ಹಲವು ಪತ್ರಿಕೆ ಪುಸ್ತಕಗಳಲ್ಲಿ ಸಾವಿರಕ್ಕೂ ಹೆಚ್ಚು ಕವನ ಲೇಖನಗಳು ಪ್ರಕಟಿತಗೊಂಡಿದೆ.

Leave a Reply

Back To Top