ಡಾ.ಬಾಳಾಸಾಹೇಬ ಲೋಕಾಪುರವರ ಚಾರಿತ್ರಮೇರು ‘ಅತ್ತಿಮಬ್ಬೆ’ ಎಂಬ ಕೃತಿಯ ಅವಲೋಕನ-ಡಾ. ಪ್ರಿಯಂವದಾ ಮ ಹುಲಗಬಾಳಿ

ಪುಸ್ತಕ ಸಂಗಾತಿ

ಡಾ.ಬಾಳಾಸಾಹೇಬ ಲೋಕಾಪುರವರ ಚಾರಿತ್ರಮೇರು ‘ಅತ್ತಿಮಬ್ಬೆ’ ಎಂಬ ಕೃತಿಯ ಅವಲೋಕನ-ಡಾ. ಪ್ರಿಯಂವದಾ ಮ ಹುಲಗಬಾಳಿ

ಅತ್ತಿಮಬ್ಬೆ’ ಕಾದಂಬರಿಯ ಅವಲೋಕನ
‘ಬಿಳಿಯರಳೆಯಂತೆ ಗಂಗಾ
ಜಳದಂತೆಸೆವಜಿತಸೇನ ಮುನಿಪತಿಯ ಗುಣಾ
ವಳಿಯಂತೆ ನೆಗಳ್ದ ಕೊಪಣಾ
ಚಳದಂತೆ ಪವಿತ್ರಮತ್ತಿಮಬ್ಬೆಯ ಚರಿತಂ’


ಕನ್ನಡ ನಾಡಿನ ಇತಿಹಾಸದಲ್ಲಿ ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಂತ ಧೀರದಿಟ್ಟ ಮಹಿಳೆ ಅತ್ತಿಮಬ್ಬೆ. ‘ದಾನ ಚಿಂತಾಮಣಿ ‘,’ಚಾರಿತ್ರ ಮೇರು’ ಎಂಬ ಬಿರುದಾಂಕಿತದಿಂದ ಹೆಸರಾದವರು ಅತ್ತಿಮಬ್ಬೆ. ಕವಿಚಕ್ರವರ್ತಿ ರನ್ನ ಕನ್ನಡ ನಾಡಿನ ಕೀರ್ತಿಜ್ಯೋತಿಯಾಗಿ ಬೆಳಗಲು ಪ್ರೋತ್ಸಾಹ ನೀಡಿದ, ಆಶ್ರಯ ನೀಡಿದ ಧೀಮಂತ ಮಹಿಳೆ ಅತ್ತಿಮಬ್ಬೆ. ಪೊನ್ನನ ‘ಶಾಂತಿಪುರಾಣ’ದ ಸಾವಿರ ಸಾವಿರ ಹಸ್ತ ಪ್ರತಿಗಳನ್ನು ಮಾಡಿ ನಾಡಿನ ಜನತೆಗೆ ತಲುಪಿಸಿದ ಅತ್ತಿಮಬ್ಬೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾಳೆ. ರನ್ನನ ಆಶ್ರಯದಾತೆ ಶಾಂತಿಪುರಾಣವನ್ನ ಬರಸಿ ಹಂಚಿದವಳು ಎಂಬುದಷ್ಟೇ ತಿಳಿದಿರುವ ನಮಗೆ ಅವಳ ಕುರಿತಾದ ಸುದೀರ್ಘ ಪರಿಚಯವನ್ನು ಮಾಡಿಸುವ ಕಾದಂಬರಿ ಡಾ. ಬಾಳಾಸಾಹೇಬ ಲೋಕಾಪುರವರ ಚಾರಿತ್ರಮೇರು ‘ಅತ್ತಿಮಬ್ಬೆ’ ಎಂಬ ಕೃತಿ.
ಅತ್ತಿಮಬ್ಬೆಯ ಕುರಿತು ಕಾದಂಬರಿ ಕಾವ್ಯ ಗಳಿದ್ದರೂ ದಾನಚಿಂತಾಮಣಿ ಅತ್ತಿಮಬ್ಬೆ ಬದುಕಿನ ಚಿತ್ರಣವನ್ನು ಕೊಡುವ ಮತ್ತೊಂದು ಕಾದಂಬರಿಯನ್ನು ನಾಡಿಗೆ ನೀಡಬೇಕೆಂಬ ಹಂಬಲದಿಂದ ಡಾ. ಲೋಕಾಪುರವರು ಈ ಕೃತಿಯನ್ನು ನಾಡಿನ ಓದುಗ ಬಳಗಕ್ಕೆ ನೀಡಿದ್ದಾರೆ.
ಇಂದು ನಾವು ಕನ್ನಡ ಸರಸ್ವತ ಲೋಕದಲ್ಲಿ ಅದರಲ್ಲೂ ಪಂಪ ಯುಗದ ಕವಿಗಳನ್ನು ಗುರುತಿಸುವ ಸಂದರ್ಭದಲ್ಲಿ ರತ್ನತ್ರಯ ರಂದು ಪಂಪ ಪೊನ್ನ ರನ್ನರನ್ನು ಕರೆಯುತ್ತೇವೆ ಅವರಲ್ಲಿ ಒಬ್ಬನಾದ ಕವಿಚಕ್ರವರ್ತಿ ರನ್ನ ‘ಗದಾಯುದ್ಧ’ ಹಾಗೂ ‘ಅಜಿತ ತೀರ್ಥಂಕರ ಪುರಾಣ’ ಎಂಬುದು ಎರಡು ಮಹಾಕಾವ್ಯಗಳನ್ನು ನಮಗೆ ನೀಡಿದ್ದಾನೆ. ಜಂಬುಖಂಡಿಯ ಮುಧುವೊಳಲ್ ಅಂದರೆ ಈಗಿನ ಬಾಗಲಕೋಟೆ ಜಿಲ್ಲೆಯ ಮುಧೋಳದ ಪ್ರದೇಶದವನಾದ ರನ್ನ ಬಹುದೊಡ್ಡ ಕವಿಯಾಗಬೇಕಾದರೆ ಅದಕ್ಕೆ ಕಾರಣ ಅತ್ತಿಮಬ್ಬೆ ಹಾಗೂ ಚಾವುಂಡರಾಯ ಎಂದು ಇತಿಹಾಸವೇ ಹೇಳುತ್ತದೆ ಚಾವುಂಡರಾಯ ಮತ್ತು ಅತ್ತಿಮಬ್ಬೆ ಇರದಿದ್ದರೆ ರನ್ನನಂತಹ ಕವಿರತ್ನವನ್ನು ನಾವು ಕಾಣಲು ಸಾಧ್ಯವಿರಲಿಲ್ಲ ಇಂತಹ ಮಹಾನ್  ಸಾಹಿತ್ಯ ಲೋಕದ ವಜ್ರವೊಂದನ್ನು ಹೊಳೆಯುವಂತೆ ಮಾಡಿದವರು ಅತ್ತಿಮಬ್ಬೆ.
ಇತಿಹಾಸ ಪ್ರಸಿದ್ಧ ಲಕ್ಕುಂಡಿ ಅತ್ತಿಮಬ್ಬೆ ನಡೆದಾಡಿದ ಪವಿತ್ರಧರೆ. ನಾಗಿದೇವ, ಅಣ್ಣಿಗದೇವ, ಅತ್ತಿಮಬ್ಬೆ, ಕವಿರನ್ನರು ಅಡ್ಡಾಡಿದ ನೆಲದಲ್ಲಿ ಸಂಚರಿಸಿ ರನ್ನನ ಶಾಸನಗಳು ದೊರೆತ ಕ್ಷೇತ್ರಗಳ ಸಂದರ್ಶನ ಮಾಡಿ ಭಾವನಾತ್ಮಕವಾಗಿ ಕಾದಂಬರಿಯನ್ನು ರಚಿಸಿದ್ದಾರೆ. ಕಾದಮಬರಿಯಲ್ಲಿ ಇನ್ನೊಂದು ವಿಶೇಷತೆಇದೆ ಪೊನ್ನನ ಶಾಂತಿಪುರಾಣದ ಪದ್ಯಗಳನ್ನು, ಜೈನ ಧರ್ಮದ ತತ್ವಗಳನ್ನ ಒಡ ಮೂಡಿಸುವ ಶ್ಲೋಕಗಳನ್ನು, ರನ್ನನ ಶಾಸನದ ಸಾಲುಗಳನ್ನು ಕಾದಂಬರಿಗಳಲ್ಲಿ ಸಾಂದರ್ಭಿಕವಾಗಿ ತಂದು ಕಾದಂಬರಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ.
ವೆಂಕಿ ಮಂಡಲದ ಪುಂಗನೂರಿನ ಒಡೆಯನಾದ  ನಾಗಮಯ್ಯ ಆತನ ಅಶ್ವದಳದ ಮುಖ್ಯಸ್ಥ ಜಿನರಾಜನ ಸಂಭಾಷಣೆಯೊಂದಿಗೆ ಪ್ರಾರಂಭವಾಗುವ ಕಾದಂಬರಿ ಬಾಹುಬಲಿ ಆತ್ಮಸ್ಥೈರ್ಯ ಮಹತ್ವಗಳನ್ನು ಜನ ಚಂದ್ರ ಮುನಿಗಳ ಸೌಮ್ಯ ಸ್ವಭಾವವನ್ನು ಇವೆಲ್ಲವುಗಳನ್ನು ಚರ್ಚಿಸುತ್ತಾ ರಾಮಯ್ಯನ ಮನದಲ್ಲಿ ಪರಿನಿಸ್ಕ್ರಮಣದ ಬಿಜಾಂಕರವಾಗುವುದನ್ನು ಚಿತ್ರಿಸುತ್ತಾರೆ. ನಾಗಮಯ್ಯರ ಮಕ್ಕಳಾದ ಮಲ್ಲಪ್ಪಯ್ಯ ಪೊನ್ನಮಯ್ಯ ಮಲ್ಲಪಯ್ಯ ಮತ್ತು ಅಪ್ಪಕಬ್ಬೆಯ ಮಗಳೇ ಅತ್ತಿಮಬ್ಬೆ ಬಾಲ್ಯದಿಂದಲೂ ಅವಳು ಧಾರ್ಮಿಕ ಓದಿನಲ್ಲಿ ನಿರತರಾಗಿದ್ದರು ಎನ್ನುವುದನ್ನು ಕಾದಂಬರಿಕಾರರು ಓದುಗರಿಗೆ ಮನವರಿಕೆ ಮಾಡಿಕೊಡುತ್ತಾರೆ. ಅತ್ತಿಮಬ್ಬೆ ಹಾಗೂ ಗುಂಡಮಬ್ಬೆ ಇಬ್ಬರು ದಲ್ಲಪನ ಮಗ ನಾಗದೇವ ನನ್ನ ವಿವಾಹವಾಗುವ ಸಂದರ್ಭವಂತೂ ಬಹು ಆಸಕ್ತಿದಾಯಕವಾಗಿ ಚಿತ್ರಣಗೊಂಡಿದೆ ಕವಿ ರನ್ನನ ಜೀವನದ ಬಹುಮುಖ್ಯಘಟ್ಟವನ್ನು ಕಾದಂಬರಿಯಲ್ಲಿ ತಂದದ್ದು ಹೆಮ್ಮೆ ಮೂಡಿಸುತ್ತದೆ. ರನ್ನನ ಬದುಕಿನ ಚಿತ್ರಣವಿರಲಾರದೆ ಅತ್ತಿಮಬ್ಬೆಯ ಜೀವನ ಚರಿತ್ರೆ ಅಪೂರ್ಣ ಏನೋ ಎನ್ನುವಷ್ಟರ ಮಟ್ಟಿಗೆ ಈ ಭಾಗ ಓದುಗರಲ್ಲಿ ಗೌರವ ಮೂಡಿಸುತ್ತದೆ. ರನ್ನನ ತಂದೆ ತಾಯಿ ಜಿನವಲ್ಲಭ, ಅಬ್ಬಲಬ್ಬೆಯರ ಪ್ರೀತಿ ವಾತ್ಸಲ್ಯ ಈ ಕಾದಂಬರಿಯಲ್ಲಿ ಮೂಡಿ ಬಂದದ್ದು ವಿಶೇಷ.
  ರನ್ನನ ವಿದ್ಯಾಭ್ಯಾಸದ ಸಂದರ್ಭದಲ್ಲಿ ಪಾರ್ಶ್ವಜಿನ ಭಟಾರರಿಂದ ವಿದ್ಯಾರ್ಥಿಗೆ ಇರಬೇಕಾದ 5 ಲಕ್ಷಣಗಳನ್ನು ಹೇಳಿಸುತ್ತಾರೆ. ‘ಕಾಕದೃಷ್ಟಿ ಬಕಂ ಧ್ಯಾನ ಸ್ವಾನ ನಿದ್ರಾ ತತೈವಚ
ಅಲ್ಪಹಾರಿ ಗ್ರಹತ್ಯಾಗಿ ವಿದ್ಯಾರ್ಥಿ ಪಂಚಲಕ್ಷಣಃ’ ಹಾಗೆ ಎಂತಹ ದೃಷ್ಟಿ ಬಕಪಕ್ಷಿಯ ಹಾಗೆ ಧ್ಯಾನ ನಾಯಿ ಅಂತಹ ನಿದ್ದೆ ಕಡಿಮೆ ತಿನ್ನುವುದು ಮತ್ತು ಮನೆ ಬಿಟ್ಟು ಬೇರೆಡೆಗೆ ಹೋಗಿ ವಿದ್ಯಾರ್ಥಿ ಮಾಡುವುದು ಇವುಗಳನ್ನ ವಿದ್ಯಾರ್ಥಿ ಪಾಲಿಸಬೇಕು ಎಂದು ಈ ಶ್ಲೋಕ ಹೇಳುತ್ತದೆ. ಕಾದಂಬರಿ ಓದುವ ವಿದ್ಯಾರ್ಥಿಗಳಿಗೂ ಈ ಶ್ಲೋಕ ಮನಮುಟ್ಟುತ್ತದೆ.  ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಲಕಾಡಿನ ಗಂಗವಾಡಿಗೆ ಹೋಗಿ ಚಾವುಂಡರಾಯರನ್ನು ಕಾಣಬೇಕೆಂಬ ಉತ್ಸಾಹದಲ್ಲಿರುವ ಮಗನಿಗೆ ತಾಯಿ ಮಾಡಿ ಕಟ್ಟುವ ಬುತ್ತಿಯ ವರ್ಣನೆಯಂತೂ ಬಹು ಸೊಗಸಾಗಿ ಮೂಡಿಬಂದಿದೆ.  ಸೀತಕ ರೊಟ್ಟಿ, ಹೂರಿಗೆ, ಹಾಲು ಗವಳಿ, ಗಾರಿಗೆ ಹೀಗೆ ಜೈನ ಕುಟುಂಬಗಳ  ಮನೆಯಲ್ಲಿನ ತಿಂಡಿ ತಿನಿಸುಗಳ ಹೆಸರುಗಳ ಪರಿಚಯವು ನಮಗಾಗುತ್ತದೆ.
ಶೈವನಾದ ನಾಗದೇವನನ್ನು ವಿವಾಹವಾಗುವ ಸಂದರ್ಭದಲ್ಲಿ ಜೈನ ಧರ್ಮ ಶೈವ ಧರ್ಮಗಳು ಪತಿ ಪತ್ನಿಯರಲ್ಲಿ ಬಿರುಕು ಉಂಟು ಮಾಡಿದರೆ ಎಂಬ ತಾಯಿಯ ಮನಸ್ಸಿನ ಸಂಶಯವನ್ನು ಬಹು ಜಾಣತನದಿಂದ ಅತ್ತಿಮಬ್ಬೆ ನಿವಾರಿಸುತ್ತಾಳೆ. ಅಮಿತಗತಿ ಆಚಾರ್ಯರ ಸಾಮೂಹಿಕ ಪಾಠದಲ್ಲಿ ಬರುವ ಶ್ಲೋಕ ಒಂದನ್ನು ಹೇಳುತ್ತಾಳೆ ‘ಶಾಂತಂ ಶುದ್ಧಂ ಶಿವಂ ಅನಾದ್ಯಂ ಅನಂತಂ
ತಂದೇವಮಾಪ್ತಂ ಶರಣಂ ಪ್ರಪದ್ಯೇ’
ಮಾನ್ಯಖೇಟದ ನಾಗದೇವ ಅತ್ತಿಮಬ್ಬೆ ಗುಂಡಮಬ್ಬೆಯ ರನ್ನ ವಿವಾಹವಾಗಿ ತನ್ನರಮನೆಗೆ ಕರೆತರುತ್ತಾನೆ. ಈ ಸಂದರ್ಭದಲ್ಲಿ ಕಾದಂಬರಿಕಾರರು ಲಕ್ಕುಂಡಿ, ಕೋಪನಾಚಲ, ಅಣ್ಣಿಗೇರಿ, ಬನವಾಸಿ, ಪುಲಿಗೆರೆ ಈ ಪ್ರದೇಶಗಳ ಕುರಿತಾಗಿಯೂ ಹೇಳುತ್ತಾರೆ.ನಾಗದೇವ ಅತ್ತಿಮಬ್ಬೆಯರ ಪವಿತ್ರ ಪ್ರೇಮದ ಸಂಕೇತವಾಗಿ ಅಣ್ಣಿಗದೇವ ಜನಿಸುತ್ತಾನೆ. ಅಣ್ಣಿಗದೇವನನ್ನು ಪ್ರೀತಿಯಿಂದ ಸಾಕತೊಡಗಿದವಳು ಗುಂಡಮಬ್ಬೆ . ಅತ್ತಿಮಬ್ಬೆ ಮಗನ ಜವಾಬ್ದಾರಿಯನ್ನು ಸಹೋದರಿಗೆ ಒಪ್ಪಿಸಿ ತಾನು ಧಾರ್ಮಿಕ ಕಾರ್ಯಗಳಲ್ಲಿ ನಿರತಳಾಗುತ್ತಾಳೆ. ಇದೇ ಸಂದರ್ಭದಲ್ಲಿ ಯುದ್ಧದಲ್ಲಿ ನಾಗದೇವ ಮರಣ ಹೊಂದುತ್ತಾನೆ ಆಗ ಗುಂಡಮಬ್ಬೆ ಸಹಗಮನ ಮಾಡುತ್ತಾಳೆ.
ಶ್ರವಣಬೆಳಗೊಳದಲ್ಲಿ ಚಾವುಂಡರಾಯನಿಂದ ನಿರ್ಮಾಣಗೊಂಡ ಗೊಮ್ಮಟ ಮೂರ್ತಿಯ ಮೊದಲ ಮಹಾಮಸ್ತಕಾಭಿಷೇಕ ದರ್ಶನ ಪ್ರಸಂಗವನ್ನು ವಿವರಿಸುವ ಕಾದಂಬರಿಕಾರರು ಅಲ್ಲಿ ಯಾವ ಯಾವ ನಾಡಿನಿಂದ ಯಾವ ಯಾವ ಮಹಾನುಭಾವರು ಬಂದಿದ್ದರು ಅನ್ನುವ ವಿವರಣೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ.
ಅತ್ತಿಮಬ್ಬೆ ಬಸದಿಗಳನ್ನ ನಿರ್ಮಾಣ ಮಾಡಿದ್ದು ಪೊನ್ನನ ‘ಶಾಂತಿ ಪುರಾಣ’ದ ಹಸ್ತ ಪ್ರತಿಗಳನ್ನು ಮಾಡಿ ಹಂಚಿದ್ದು ರನ್ನನಿಗೆ ಆಶ್ರಯ ನೀಡಿದ್ದು ರನ್ನ ತನ್ನ ಜೀವನದಲ್ಲಿ ಅತ್ತಿಮಬ್ಬೆಯ ಪಾತ್ರ ಎಷ್ಟು ಮಹತ್ವವಾದದ್ದು ಎಂದು ನಿರೂಪಿಸುವ ಅಂಶಗಳೆಲ್ಲವೂ ಈ ಕಾದಂಬರಿಯಲ್ಲಿ ಮೂಡಿಬಂದಿವೆ. ಅತ್ತಿಮಬ್ಬೆಯ ಕುರಿತಾದ ಕಾವ್ಯಗಳ ಸಾಲುಗಳನ್ನು ಉಲ್ಲೇಖಿಸಿ ಮೂರು ಭಾಗಗಳನ್ನು ಮಾಡಿ ಕಥೆಯನ್ನ ಹೆಣೆದಿದ್ದಾರೆ. ಮಹಾಕವಿ ರನ್ನ ಕಾವ್ಯ ರಚಿಸುವ ಸಂದರ್ಭದಲ್ಲಿ ಅತ್ತಿಮಬ್ಬೆಯೊಂದಿಗೆ ಚರ್ಚಿಸಿದ ಸನ್ನಿವೇಶ ವಿದ್ವತ್ಪೂರ್ಣ ಸನ್ನಿವೇಶ ಹೀಗೆ ಅತ್ತಿಮಬ್ಬೆಯ ಕಾರ್ಯಗಳೊಂದಿಗೆ ರನ್ನನ ಕೌಶಲ್ಯವು ಈ ಕಾದಂಬರಿಯಲ್ಲಿ ಮೂಡಿಬಂದಿದೆ ಕಾದಂಬರಿಯನ್ನ ಓದಿದಾಗ ನಮಗೊಂದು ಹೊಸ ಲೋಕದ ಪರಿಚಯವಾಗುತ್ತದೆ ಅಲ್ಲಲ್ಲಿ ಕುತೂಹಲವನ್ನ ಮೂಡಿ ಸುತ್ತ ಓದಿಸಿಕೊಂಡು ಹೋಗುವ ಕಾದಂಬರಿ ಈ ಕಾಲಘಟ್ಟದ ಒಳ್ಳೆಯ ಐತಿಹಾಸಿಕ ಕಾದಂಬರಿ ಇದಾಗಿದೆ ತುಮಕೂರಿನ ಎಸ್ ಪಿ ಪದ್ಮಪ್ರಸಾದ್ ಅವರ ಮುನ್ನುಡಿ, ಕತೆಗಾರ ಅಮರೇಶ ನಗುಡೋಣಿಯವರ ಬೆನ್ನುಡಿ, ಲೇಖಕರ ಮಾತುಗಳು ಕಾದಂಬರಿಯ ಸಂಕ್ಷಿಪ್ತ ಪರಿಚಯವನ್ನು ಮಾಡಿಸುತ್ತವೆ. ಸುಂದರವಾದ ಮುಖಪುಟ ಹೊಂದಿದ ಅತ್ತಿಮಬ್ಬೆ ಕಾದಂಬರಿ ಚರಿತ್ರೆ ಮೇರು ಕೃತಿಯನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಡಿಸೆಂಬರ್ 17ರಂದು ಲೋಕಾಪುರವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರ ಒಂಬತ್ತು ಕೃತಿಗಳು ಬಿಡುಗಡೆ ಗೊಂಡವು ಅದರಲ್ಲಿ ಅತ್ತಿಮಬೇಕಾದ ಬರಿಯು ಒಂದು ಸಾಹಿತ್ಯಪ್ರಿಯರಷ್ಟೇ ಅಲ್ಲ ಪ್ರತಿಯೊಬ್ಬರು ಓದಬೇಕಾದಂತ ಕಾದಂಬರಿ ಇದಾಗಿದೆ.
ಡಾ. ಬಾಳಸಾಹೇಬ ಲೋಕಾಪುರ ಅವರು ನಮ್ಮ ನಾಡಿನ ಖ್ಯಾತ ಕಾದಂಬರಿಕಾರರು, ಕಥೆಗಾರರು, ಸಂಶೋಧಕರು ಆಗಿದ್ದಾರೆ. ಕೇಂದ್ರಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸದಸ್ಯರಾಗಿ ತಮ್ಮ ಉತ್ತಮ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ, ಸಾಹಿತ್ಯದ ವಾತಾವರಣವನ್ನು ಈ ಭಾಗದಲ್ಲಿ ಪಸರಿಸುವಂತೆ ಮಾಡುವುದರಲ್ಲಿ ಡಾ. ಬಾಳಾಸಾಹೇಬ ಲೋಕಾಪೂರ ಅವರ ಕಾರ್ಯ ಮಹತ್ವದ್ದಾಗಿದೆ. ‘ಹುತ್ತ’, ‘ಕೃಷ್ಣೆ ಹರಿದಳು’, ‘ಉಧೋ ಉಧೋ’, ‘ಬಿಸಿಲುಪುರ’, ‘ಅಮಟೂರು ಬಾಳಪ್ಪ’ ದಂತಹ ಶ್ರೇಷ್ಠ ಕಾದಂಬರಿಗಳು ಅವರಿಗೆ ಕೀರ್ತಿಯನ್ನ ತಂದುಕೊಟ್ಟ ಕಾದಂಬರಿಗಳಷ್ಟೇ ಅಲ್ಲ ಅಥಣಿ ಪರಿಸರದ ಉತ್ತರ ಕರ್ನಾಟಕದ ಭಾಷೆಯನ್ನು ನಾಡಿಗೆ ಪರಿಚಯಿಸಿದಂತವುಗಳು. ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಲೋಕಾಪುರ ಸರ್ ಅವರು ಸ್ನೇಹಜೀವಿಗಳು. ಇಂತಹ ಶ್ರೇಷ್ಠ ಕಾದಂಬರಿಕಾರರ ಕೃತಿ ಪ

——————————


ಡಾ. ಪ್ರಿಯಂವದಾ ಮ ಹುಲಗಬಾಳಿ


           

Leave a Reply

Back To Top