ಮೇ-ದಿನದ ವಿಶೇಷ
ರೇಖಾ ಸುದೇಶ್ ರಾವ್
ಶ್ರಮಿಕ ಕಾರ್ಮಿಕ
ಕಾರ್ಮಿಕರ ಬದುಕಿಗಾಗಿ ಅನವರತ ಹೋರಾಟ
ಸವಾಲುಗಳೆದುರಿಸಲು ನಿರಂತರ ಓಡಾಟ
ಬೇಡಿಕೆಗಳಿಗಾಗಿ ಮೊರೆ ಇಟ್ಟಾಗ ಶತ್ರುಗಳ ಕಾಟ
ಮೌಲ್ಯದ ಏರಿಕೆಗಾಗಿ ಮಾಲೀಕರ ಆರ್ಭಟ
ಚಿಣ್ಣರು ಕಸದ ತೊಟ್ಟಿಯ ವಸ್ತು ಆರಿಸುವ ಹೊತ್ತು
ಉದರ ಪೋಷಣೆಗಾಗಿ ಬೇಕಿದೆ ಕೈತುತ್ತು
ಉರಿ ಬಿಸಿಲಲ್ಲಿ ಬಳಲಿದರು ಇಲ್ಲಿಲ್ಲ ಬೇಸರ
ಬಾಲರು ಕಲಿಕೆಯಾಟದ ಮೋಜಿಲ್ಲದೆ ದುಡಿವ ಕರ
ಹೆಣ್ಣು ದುಡಿಮೆಯಲಿ ಸಬಲಳು
ಸರ್ವ ವಿಧದಲ್ಲೂ ಗಂಡಿಗೆ ಸಮಾನಳು
ಗುಲಾಮಳಲ್ಲ ಎನ್ನುವ ಜಾಯಮಾನದವಳು
ಅಡುಗೆ ಗೃಹ ಕೃತ್ಯಗಳೊಂದಿಗೆ ಹೊರ ಜಗತ್ತನ್ನು ದುಡಿಯುವಳು
ರೈತರು ಸೂರ್ಯನ ರಣಬಿಸಿಲಿಗೆ ಬೆವರ ಸುರಿಸಿ
ಸಂಕಷ್ಟಗಳ ಸರಮಾಲೆ ಬಿರುಗಾಳಿ ಬೀಸಿ
ಸಿಡಿಲು ಗುಡುಗು ಮಿಂಚಿನ ಸುಳಿಯಲಿ ಸಿಲುಕಿ
ಮೇಲ್ದರ್ಜೆ ಅಧಿಕಾರಿಗಳಿಂದ ಅವಮಾನಗಳ ಸಹಿಸಿ
ದುಡಿಮೆಯಿಂದ ದಾರಿದ್ರೆ ದೂರ ದೂರೀಕರಿಸಿ
ನಮ್ಮೊಳಗಿನ ಸೋಮಾರಿತನವ ಅಳಿಸಿ
ಸಮರಸದ ಕಾಯಕದಿ ಯಶಸ್ವಿ ಗಳಿಸಿ
ನೊಂದ ಕಾರ್ಮಿಕ ವರ್ಗಕ್ಕೆ ನ್ಯಾಯವನ್ನು ಕೊಡಿಸಿ-
ರೇಖಾ ಸುದೇಶ್ ರಾವ್