ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ಅನ್ಕೋಲಾಜಿಸ್ಟ್ ವಿ. ಶಾಂತಾ (1927)

ವಿ. ಶಾಂತಾರವರು ಅನ್ಕೋಲಾಜಿಸ್ಟ್ ಮತ್ತು ಆದಾ ್ಯಕ್ಯಾನ್ಸರ್ ಇನ್ಸ್ಟಿಟ್ಯೂಷನ್‍ನ ಅಧ್ಯಕ್ಷರಾಗಿದ್ದರು. ಇವರು 11 ಮಾರ್ಚ್ 1927ರಂದು ಚೈನೈನಲ್ಲಿ ಜನಿಸಿದರು. ಇವರು ಒಂದು ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದರು. ಇವರ ಕುಟುಂಬದಲ್ಲಿ ಇಬ್ಬರು ನೋಬೆಲ್ ಪ್ರಶಸ್ತಿ ವಿಜೇತರು ಅವರಲ್ಲಿ ಸರ್ ಸಿ. ವಿ ರಾಮನ್ ಮತ್ತು ಎಸ್. ಚಂದ್ರಶೇಖರರವರು, ಭೌತ ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದಿರುವರಾಗಿದ್ದಾರೆ.

ಶಾಂತಾರವರು ಆಗಿನ ನ್ಯಾಷನಲ್ ಗಲ್ರ್ಸ್ ಹೈಸ್ಕೂಲ್ (ಈಗ ಇದನ್ನು ಲೇಡಿ ಶಿವಸ್ವಾಮಿ ಅಯ್ಯರ್ ಗಲ್ರ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಎಂದು ಮರುನಾಮಕರಣ ಮಾಡಲಾಗಿದೆ)ನಲ್ಲಿ ಶಿಕ್ಷಣ ಪಡೆದಿದ್ದಾರೆ. ಓದುವಾಗ ಯಾವಾಗಲೂ ತಾನು ಒಬ್ಬ ವೈದ್ಯೆಯಾಗಬೇಕೆಂಬ ಬಯಕೆಯನ್ನು ಹೊಂದಿದ್ದರು. ಅದಂತೆಯೇ 1949ರಲ್ಲಿ ಮದ್ರಾಸ್ ವೈದ್ಯಕೀಯ ಕಾಲೇಜಿನಿಂದ ಡಿ.ಜಿ.ಒ ಮತ್ತು 1955ರಲ್ಲಿ ಎಂ.ಡಿ ಪದವಿಯನ್ನು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಪಡೆದರು.

1954ರಲ್ಲಿ ಡಾ|| ಮುತ್ತು ಸ್ವಾಮಿರೆಡ್ಡಿಯವರು ಕ್ಯಾನ್ಸರ್ ಸಂಸ್ಥೆಯನ್ನು ಸ್ಥಾಪಿಸಿದರು. ಅದೇ ಸಮಯದಲ್ಲಿ ಶಾಂತಾರವರು ಕೂಡ ತಮ್ಮ ಎಂ.ಡಿ ಪದವಿಯನ್ನು ಮುಗಿಸಿದ್ದರು. ಶಾಂತಾರವರು ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲ್ಲಿ ಉತ್ತೀರ್ಣರಾಗಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇರಿಕೊಂಡರು. 1940 ಮತ್ತು 1950ರ ದಶಕಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಸ್ತ್ರೀರೋಗಕ್ಕೆ ಅಥವಾ ಪ್ರಸೂತಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಶಾಂತಾರವರು ಉಳಿದ ಹೆಣ್ಣು ಮಕ್ಕಳಿಗಿಂತ ಭಿನ್ನವಾಗಿ ಆಲೋಚನೆಯನ್ನು ಮಾಡಿದರು. ಅದಕ್ಕೆ ಅವರು ಅನ್ಕೋಲಾಜಿಸ್ಟ್ ಆಗಲು ನಿರ್ಧರಿಸಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಕೊಂಡರು. ಅನ್ಕೋಲಾಜಿಸ್ಟ್ ಆಗುವುದು ಕುಟುಂಬ ವರ್ಗದವರಿಗೆ ಇಷ್ಟವಿಲ್ಲದೇ ಅವರ ವಿರೋಧವನ್ನು ಎದುರಿಸಿದರು. ವಿರೋಧದ ನಡುವೆಯು ಮನಸ್ಸನ್ನು ಬದಲಾಯಿಸದೇ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡು ಅದೇ ವೃತ್ತಿಯಲ್ಲಿ ಮುಂದುವರೆದರು.

ಶಾಂತಾರವರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕ್ಯಾನ್ಸರ್ ಆಸ್ಪತ್ರೆಗೆ ಸೇರಿಕೊಂಡಾಗ ಕೇವಲ 12 ಹಾಸಿಗೆಗಳ ಕಾಟೇಜ್ ಆಸ್ಪತ್ರೆಯಾಗಿತ್ತು. ಕೆಲವೇ ಉಪಕರಣಗಳಿಂದ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿತ್ತು. ಈ ಆಸ್ಪತ್ರೆಯಲ್ಲಿ ಕೇವಲ ಇಬ್ಬರೇ ವೈದ್ಯರು. ಒಬ್ಬರು ಶಾಂತಾ ಇನ್ನೊಬ್ಬರು ಕೃಷ್ಣಮೂರ್ತಿ. ಶಾಂತಾರವರು ಮೂರು ವರ್ಷಗಳ ಕಾಲ ಗೌರವ ಸಿಬ್ಬಂದಿಯಾಗಿ ಕೆಲಸ ಮಾಡಿದರು. ನಂತರ ಶಾಂತಾರವರಿಗೆ ತಿಂಗಳಿಗೆ 200 (ಎರಡು ನೂರು) ರೂಪಾಯಿ ಸಂಬಳ ನೀಡುವುದಾಗಿ ಹೇಳಿದಾಗ ಆಸ್ಪತ್ರೆಯ ಕ್ಯಾಂಪಸ್ಸಿನೊಳಗೆ ವಾಸಿಸಲು ಪ್ರಾರಂಭಿಸಿದರು. ಶಾಂತಾರವರು ಏಪ್ರಿಲ್13 – 1955ರಂದು ಕ್ಯಾಂಪಸ್ಸಿನೊಳಗೆ ಸೇರಿಕೊಂಡಿದ್ದು ಇಂದಿನವರೆಗೂ ಅಲ್ಲಿಯೇ ಕೆಲಸವನ್ನು ನಿರ್ವಹಿಸುತ್ತಿರುವರು.

ಶಾಂತಾರವರು ತಮಿಳುನಾಡು ಆರೋಗ್ಯ ಯೋಜನಾ ಆಯೋಗದ ಸದಸ್ಯರಾಗಿದ್ದುಕೊಂಡಾಗ ಕ್ಯಾನ್ಸರ್ ರೋಗವನ್ನು ಮೊದಲೇ ಹೇಗೆ ಪತ್ತೆ ಹಚ್ಚಬೇಕು ಮತ್ತು ಸಾರ್ವಜನಿಕರಲ್ಲಿ ಇರುವ ಮನೋಭಾವನೆಯನ್ನು ಬದಲಾಯಿಸಲು ಪ್ರಯತ್ನಿಸಿದರು. ಕ್ಯಾನ್ಸರ್ ಕುರಿತು ಜನರಲ್ಲಿದ್ದ ತೀವ್ರ ಭಯ ಹತಾಶಯವನ್ನು ಹೋಗಲಾಡಿಸಲು ಪ್ರತ್ನಿಸುವುದರ ಜೊತೆಗೆ ಕ್ಯಾನ್ಸರ್ ಪದಬಳಕೆಯೇ ಸರಿಯಿಲ್ಲ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಇಂದಿನ ವೈದ್ಯಕೀಯ ವ್ಯವಸ್ಥೆಯು ವಾಣೀಜ್ಯೀಕರಣಗೊಂಡಿರುವ ಸಮಯದಲ್ಲಿ ಡಾ|| ಶಾಂತಾರವರು “ಎಲ್ಲ್ಲರಿಗೂ ಸೇವೆ” ಎಂಬ ನೀತಿಯನ್ನು ಅನುಸರಿಸಿಕೊಂಡು ಸೇವೆಯನ್ನು ನೀಡುತ್ತಿರುವರು. ಅವರು ಒಂದು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವ ರೋಗಿಗಳಿಗೆ ಪ್ರತಿಶತ 60%ರಷ್ಟು ಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿರುವರು. 93 ವಯಸ್ಸಿನ ಶಾಂತಾರವರು ಇನ್ನೂ ಕೂಡ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿರುವರು.

ಶಾಂತಾರವರಿಗೆ ದೊರೆತ ಪ್ರಶಸ್ತಿಗಳು:

ಶಾಂತಾರವರಿಗೆ  ದೊರೆತ ಪ್ರಶಸ್ತಿಗಳು:
1. 1986ರಲ್ಲಿ ಪದ್ಮಶ್ರೀ ಪ್ರಶಸ್ತಿ
2. 2005ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ
3. 2006ರಲ್ಲಿ ಪದ್ಮಭೂಷಣ ಪ್ರಶಸ್ತಿ.
4. 2016ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ
ಶಾಂತಾರವರು ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್‍ನ ಚುನಾಯಿತ ಫೆಲೋ ಆಗಿದ್ದಾರೆ. ಹಾಗೆಯೇ 2016ರಲ್ಲಿ ಲೈಫ್ ಟೈಮ್ ಅಚಿವ್ ಮೆಂಟ್ ಅವಾರ್ಡ್‍ನ್ನು ಸಹ ಪಡೆದುಕೊಂಡಿದ್ದಾರೆ


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top