ಕಥಾ ಸಂಗಾತಿ
ಮನಃಪರಿವರ್ತನೆ
ಅನಸೂಯ ಜಹಗೀರದಾರ
ಆಕೆ ಅಪಘಾತವೊಂದರಲ್ಲಿ ಗಂಡನನ್ನು ಕಳೆದುಕೊಂಡು ತನ್ನ ಜೀವನವನ್ನೆಲ್ಲ ಇದ್ದೊಬ್ಬ ಮಗನ ಪೋಷಣೆ ಶಿಕ್ಷಣದಲ್ಲಿ ಕಳೆಯುತ್ತ ತನ್ನ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಳು. ಹೀಗೆ ದಿನಗಳು ಸರಿದವು.
ಒಂದು ದಿನ…
ಮಗ ವಿಧವೆಯೊಬ್ಬಳ ಕೈಹಿಡಿದ. ಅವಳ ಆಶಿರ್ವಾದಕ್ಕಾಗಿ ದಂಪತಿಗಳು ಆಕೆಯಲ್ಲಿ ಬಂದರು. ಮುದ್ದಿನ ಮಗ..! ಆದರ್ಶ ಪಾಲಿಸಿದ್ದ ಪ್ರೀತಿ ಮಮತೆಯನ್ನು ನಿಭಾಯಿಸಿದ್ದ. ಒಂದರೆ ಕ್ಷಣ ಕುಪಿತಳಾದರೂ ಆಕೆಗೆ ತಾನು ಕಳೆದ ದಿನಗಳು ನೆನಪಾದವು. ಹಲವರ ವ್ಯಂಗ್ಯ ಕುಹಕನುಡಿ ಕೇಳುತ್ತ ತನ್ನ ಯೌವನ ಜಾರಿದ ಕ್ಷಣಗಳು ಕಣ್ಮುಂದೆ ಬಂದಿತು.
ಕಣ್ಣುಗಳು ಅಶ್ರು ಸುರಿಸಿದವು.
ಅವಳಿಗರಿವಿಲ್ಲದೆ ಕೈಗಳು ಅವರನ್ನು ತಬ್ಬಿದವು.
ಹಾರೈಕೆಯ ನುಡಿಗಳು ಹೊಮ್ಮಿ ಬಂದವು.
ಸೊಸೆ ಮಗನ ಮುಖದಲಿ ದೈನ್ಯತೆ, ಧನ್ಯತೆ ಮತ್ತು ಕೃತಜ್ಞತಾ ಭಾವ ಒಡಮೂಡಿತು.ಒಂದು ಅವಲೋಕನ ಪರಿವರ್ತನೆ ಮಾಡಿತ್ತು.
ಸ್ವಂತ ಅನುಭವವೇ ಜೀವನದ ದೊಡ್ಡ ಪಾಠ.ಚಿಕ್ಕ ಕಥೆಯಾದರೂ ಚೆನ್ನಾಗಿದೆ.