ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಮುನಿಸೇಕೆ ??
ನಾನೀಗ ಗಡಣದಿಂದ
ಬೇರ್ಪಟ್ಟು
ಬೆದರಿ ಹೆದರಿ
ನಿಂತ ಒಂಟಿ ಹರಿಣಿ..
ಕೋಪ ನಿನ್ನದೇ
ಇರಬಹದುದು
ನೋವು ಮಾತ್ರ
ನನ್ನದು !!
ಕಣ್ಣಕೆರೆ ಬತ್ತುತ್ತಿದೆ
ನೀರ ಸುರಿಸಿ
ಎದೆಯೊಡೆದು
ಎದೆಯುಸಿರು
ಉದ್ವಿಗ್ನ ವಾಗುತ್ತಿದೆ
ದಿನವೂ ನಿನ್ನ ನೆನಸಿ
ಮನಮುರಿದು
ಒಲುಮೆ ತೊರೆದು
ಹೋಗಬೇಡ
ಇಷ್ಟಪಟ್ಟ ಒಲುಮೆಯ
ಕಷ್ಟಕ್ಕೆ ದೂಡಬೇಡ
ನೀನೇ ಕೊಡಿಸಿದಬೆಳ್ಳಿ
ಗೆಜ್ಜೆ ಘಲ್ಲೆನ್ನುತ್ತಿಲ್ಲ
ನಂಗೇಕೋ ಭಯ
ವಾಗುತ್ತಿದೆ ನಲ್ಲ !!
ಕಾಡುವ ಈ ಹಾಳು…ಶಕೆ
ಕಾದ ಹೆಂಚಾಗಿದೆ ಮನದ ಬಯಕೆ
ವಿರಹ ದುರಿಯೋ ಲಗ್ಗೆಯೂರಿದೆ !!
ಬಾಯಾರಿದೆ
ಬಯಕೆಗೆ
ನಿದ್ದೆಯ ನೆನಪಿಲ್ಲ
ಕಣ್ಣಿಗೆ
ಬಂದುಬಿಡು ಮುನಿಸ
ಮರೆತು
ಕಾಯುವೆನು ನಾನೂ
ಜಗವ
ಮರೆತು
ನನ್ನ ನಂಬಿಕೆ
ಹುಸಿಗೊಳಿಸ ಬೇಡ ಸಖ
ಸಾವಿಗೇನುಗೊತ್ತು
ಒಲುಮೆಯ ಸುಖ