ಕಾವ್ಯ ಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ಚುಟುಕುಗಳು
೧
ನಿತ್ಯ
ಏರುತ್ತಲೇ ಇದೆ
ಚಿನ್ನದ ದರ
ಉರಿಸುತ
ಜನ ಸಾಮಾನ್ಯರ
ಉದರ
೨
ಮುಚ್ಚುವ
ಜಾಗೆಯೊಂದನು ಬಿಟ್ಟು
ಎಲ್ಲವೂ
ಬೆತ್ತಲೆ
ಬುದ್ಧಿ ಹೇಳುವವರ
ಮಾತಿಗಿಲ್ಲ
ಕಿಂಚಿತ್ತೂ
ಬೆಲೆ
೩
ಅವನೆಂದ;
ಚಂದ ನೋಡು ಸಖಿ
ನಿನ್ನ ಒಲವು ತುಂಬಿದ
ಈ ನೋಟ!
ಅವಳೆಂದಳು;
ಇಲ್ಲ ಅಂದವರಾರು ಪ್ರಿಯ
ತುಂಬುತಿರು ಆಗಾಗ
ನನ್ನ ಉಡಿಗೆ ನೋಟು!!
ಸುಂದರವಾಗಿ ಮೂಡಿ ಬಂದಿವೆ
ಚುಟುಕಿನಲ್ಲೇ ಕುಟುಕುವ ಕಲೆ ಚೆನ್ನಾಗಿದೆ.
ಸುಂದರ ಕವಿತ್ವ.