ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ವೈದ್ಯೆ ಬಾನೂ ಜೆಹಂಗೀರ್ ಕೊಯಾಜಿ (1917-2004)

ಬಾನೂ ಜೆಹಂಗೀರ್ ಕೊಯಾಜಿ ಅವರು ಭಾರತೀಯ ವೈದ್ಯೆ, ಕುಟುಂಬ ಯೋಜನೆ, ಜನಸಂಖ್ಯಾ ನಿಯಂತ್ರಣ ಕಾರ್ಯಕರ್ತೆಯಾಗಿದ್ದರು. ಇವರು ಮುಂಬೈಯ ಪಾರ್ಸಿ ಕುಟುಂಬದಲ್ಲಿ 7ನೇ ಸೆಪ್ಟೆಂಬರ್ 1917 ರಲ್ಲಿ ಜನಿಸಿದರು. ಇವರ ತಂದೆ ಪೆಸ್ಟೊಂಜಿ ಕಪಾಡಿಯಾ. ತಂದೆ ಪ್ರಶಿದ್ಧ ಸಿವಿಲ್ ಇಂಜಿನಿಯರ್ ಆಗಿದ್ದರು. ಬಾನೂ ಅವರನ್ನು ಚಿಕ್ಕವರಿದ್ದಾಗ ಪುಣೆಯಲ್ಲಿ ವಾಸಿಸುತ್ತಿದ್ದ ಅಜ್ಜಿಯ ಮನೆಗೆ ಇರಲು ಕಳುಹಿಸಿದರು. ಅಜ್ಜಿ ಮನೆಯಲ್ಲಿ ಯಾವುದೇ ಕಷ್ಟವಿಲ್ಲದೆ ಸುಖವಾಗಿ ಬೆಳೆದರು. ಇವರ ಕುಟುಂಬದವರು ನಿರಂತರವಾಗಿ ಪುಣೆಯ ಅಜ್ಜಿ ಮನೆಗೆ ಭೇಟಿ ನೀಡುತ್ತಿದ್ದರು.

ಬಾನೂ ಅವರು ತಮ್ಮ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದಾಗ ಸೆಂಟ್ ವಿನ್ಸೆಂಟ್ ಕಾಲೇಜಿನಲ್ಲಿ ಮೆಟ್ರಿಕ್ಯೂಲೇಟ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ನ್ನು ಗಳಿಸಿದರು. ಶಾಲಾ ಶಿಕ್ಷಣದ ನಂತರ ಬಾನೂ ಅವರು ಸೀನಿಯರ್ ಕೇಂಬ್ರಿಡ್ಜ್ನಲ್ಲಿ ಸತತವಾಗಿ ಐದು ಬಾರಿ ಡಿಸ್ಟಿಂಗ್‌ಶನ್ ಪಡೆದರು. ಮುಂಬೈನ ಸೆಂಟ್ ಕ್ಷವಿರ‍್ಸ್ ಕಾಲೇಜನಲ್ಲಿ ಪ್ರಿಮೆಡಿಕಲ್ ಕೋರ್ಸ್ನ್ನು ಮಾಡಿದರು. ನಂತರ ಗ್ರಾಂಟ್ ಮೆಡಿಕಲ್ ಕಾಲೇಜನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದರು. ಬಾನೂ ಅವರು 1940ರಲ್ಲಿ ಎಂ.ಡಿ ಪದವಿಯನ್ನು ಪಡೆದು, ಸ್ತಿçÃರೋಗತಜ್ಞೆಯಾಗಲು ಡಾ. ಶಿರೋಡ್ಕರ್ ಹತ್ತಿರ ತರಬೇತಿಯನ್ನು ಪಡೆದರು. ಆದರೆ ಪುಣೆಗೆ ಮರಳಿದಾಗ ಸಾಮಾನ್ಯವಾಗಿ ಫಿಜಿಶಿಯನ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

1937 ರಲ್ಲಿ ಬಾನೂ ಅವರು ಮಹಾಬಲೇಶ್ವರಕ್ಕೆ ಭೇಟಿ ನೀಡಿದಾಗ ಜೆಹಂಗೀರ್ ಕೊಯಾಜಿಗೆ ಭೇಟಿಯಾದರು. ಜೆಹಂಗೀರ್ ಅವರು ಇಂಜಿನಿಯರ್ ಆಗಿದ್ದರು. ಪರಸ್ಪರ ಪರಿಚಯವಾಗಿ ಐದು ವರ್ಷಗಳ ಬಳಿಕ ಫೆಬ್ರುವರಿ 24, 1941ರಲ್ಲಿ ಮದುವೆಯಾದರು. ಈ ದಂಪತಿಗಳಿಗೆ ಕುರುಸ್ ಎಂಬ ಗಂಡು ಮಗು 1943ರಲ್ಲಿ ಜನಿಸಿತು. ಇವರು ಪುಣೆಯಲ್ಲಿಯೇ ಮನೆ ನಿರ್ಮಿಸಿಕೊಂಡು ಅಲ್ಲಿಯೆ ನೆಲೆಸಿದರು.
1944ರಲ್ಲಿ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆ (ಕೆಇಎಂ)ಯಲ್ಲಿ ಒಬ್ಬ ಸಾಮರ್ಥ್ಯವಿರುವ ಸ್ತಿçÃರೋಗ ತಜ್ಞೆಯ ಅಗತ್ಯವಿದ್ದಾಗ ಡಾ. ಎಡುಲಿಜಿ ಕೊಯಾಜಿಯವರು ಡಾ. ಬಾನೂ ಅವರ ಹೆಸರನ್ನು ಶಿಫಾರಸ್ಸು ಮಾಡಿದರು. ಹಾಗಾಗಿ ಅಲ್ಲಿ ವೈದ್ಯೆಯಾಗಿ ಸೇರಿಕೊಂಡರು. ಆರು ತಿಂಗಳಗಳ ಬಳಿಕ ಬಾನೂ ಅವರು ಮುಖ್ಯ ವೈದ್ಯಕೀಯ ಅಧಿಕಾರಿ ಹುದ್ದೆಯನ್ನು ಅಲಂಕರಿಸಿದರು. ಬಾನೂರವರು ಸೇರಿಕೊಂಡಾಗ ಕೇಲವ 40 ಹಾಸಿಗೆಗಳಿದ್ದ ಆಸ್ಪತ್ರೆಯನ್ನು 1999ರಲ್ಲಿ 550 ಹಾಸಿಗೆಗಳಾಗಿ ಬೆಳೆಸಿದರು. ಬಾನೂರವರು ಕೆಇಎಂ ಅನ್ನು ಬೋಧನಾ ಆಸ್ಪತ್ರೆ ಮತ್ತು ಒಂದು ಸಂಶೋಧನಾ ಸಂಸ್ಥೆಯಾಗಿ ಪರಿವರ್ತಿಸಿದರು. ಜೊತೆಗೆ ಬಿಜೆ ವೈದ್ಯಕೀಯ ಕಾಲೇಜಿನೊಂದಿಗೆ ಸಂಬAಧವನ್ನು ಬೆಳೆಸಿ ಕೊಂಡಿದ್ದರು.
ಬಾನೂರವರು 1972ರಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉಪಯೋಗವಾಗಲು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿ ಪಡೆಸಿದರು. 1977ರಲ್ಲಿ ಗ್ರಾಮೀಣ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಒಂದು ಕಾರ್ಯಕ್ರಮವನ್ನು ಹಾಕಿಕೊಂಡರು. ಬಾನೂ ಅವರು ಸುಮಾರು 600 ಜನ ಬಾಲಕಿಯರಿಗೆ ನೈರ್ಮಲ್ಯ, ಕುಟುಂಬ ಯೋಜನೆ ಮತ್ತು ಪೋಷಣೆ ಕುರಿತು ಅರಿವು ಮೂಡಿಸಿದರು. ಇದರ ಮೂಲಕ ಗ್ರಾಮೀಣ ಜನ ಸಮುದಾಯಕ್ಕೆ ತನ್ನ ಕೊಡುಗೆಯನ್ನು ನೀಡಿದರು. ಕಾಲಾನಂತರದಲ್ಲಿ ಬಾನೂರವರು ಮಾಡುತ್ತಿದ್ದ ಕೆಲಸವನ್ನು ಗಮನಿಸಿ ಅದೇ ರೀತಿಯಲ್ಲಿ ದೇಶದಾದ್ಯಂತ ಅವರ ಮಾದರಿಯ ಕೆಲಸವನ್ನು ಸರ್ಕಾರ ಮತ್ತು ಇತರ ಸಂಸ್ಥೆಗಳು ಅಳವಡಿಸಿಕೊಂಡವು. ಮಹಿಳೆಯರಲ್ಲಿ ಮತ್ತು ಬಾಲಕಿಯರಲ್ಲಿ ಶಿಕ್ಷಣದ ಕೊರತೆ ಮತ್ತು ಉದ್ಯೋಗದ ಕೊರತೆ ಮತ್ತು ಕೌಶಲ್ಯದ ಕೊರತೆಯನ್ನು ಕಂಡುಕೊAಡ ಇವರು 1988ರಲ್ಲಿ ‘ಯುವ ಮಹಿಳಾ ಆರೋಗ್ಯ ಮತ್ತು ಅಭಿವೃದ್ಧಿ ಯೋಜನೆಯನ್ನು’ ಪ್ರಾರಂಭಿಸಿದರು. ಈ ಯೋಜನೆಯ ಅಡಿಯಲ್ಲಿ ಯುವತಿಯರಿಗೆ ಓದುವುದು, ಕಸೂತಿ ಕೌಶಲ್ಯಗಳನ್ನು ಕಲಿಸುವುದು. ಜೊತೆಗೆ ಜಾತಿ ಮತ್ತು ಲಿಂಗದ ಕುರಿತು ಅರಿವು ಮೂಡಿಸುವ ಗುರಿಯನ್ನು ಹೊಂದಿದ್ದರು.

ಬಾನೂರವರು ಡಬ್ಲೂಎಚ್‌ಓನ ಸೈಂನ್‌ಟಿಫಿಕ್ ಆಂಡ್ ಟೆಕ್‌ನಿಕಲ್ ಗ್ರೂಪ್ ಇನ್ ಹ್ಯೂಮನ್ ರಿಪ್ರೊಡೆಕ್ಷನ್‌ನ ಸದಸ್ಯರಾಗಿದ್ದರು. ವುಮೆನ್ಸ್ ಹೆಲ್ತ್ ಆಂಡ್ ಡವಲಪ್‌ಮೆಂಟ್ ಆಂಡ್ ಹೆಲ್ತ್, ಮ್ಯಾನ್ ಪಾವರ್ ಆಂಡ್ ಡವಲಪ್‌ಮೆಂಟ್ ಆಟ್ ಡಬ್ಲೂಎಚ್‌ಓನಲ್ಲಿ ಸಲಹೆಗಾರರಾಗಿದ್ದರು. ಬಾನೂರವರು ಮಹಾರಾಷ್ಟç ಸರ್ಕಾರ, ಭಾರತ ಸರ್ಕಾರ, ವಿಶ್ವ ಬ್ಯಾಂಕ್, ಪೋರ್ಡ್ ಫೌಂಡೆಶನ್, ಯುಎನ್‌ಎಫ್‌ಪಿಎ ಮತ್ತು ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಅನೇಕ ಸಂಸ್ಥೆಗಳಿಗೆ ಸಲಹಾಗಾರರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ ಮ್ಯಾನೇಜ್‌ಮೆಂಟ್ ಕೌನ್ಸಿಲ್ ಮತ್ತು ಪುಣೆ ಯುನಿವರ್ಸಿಟಿಯಲ್ಲಿ ಎಮೆರಿಟಸ್ ಸದಸ್ಯರಾಗಿದ್ದರು. ಇವರು ಕುಟುಂಬ ಯೋಜನೆ, ನಗರ ಮತ್ತು ಗ್ರಾಮೀಣ ಆರೋಗ್ಯ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ.

ಬಾನೂ ಅವರಿಗೆ ಸಾಹಿತ್ಯದಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದರು. ಸಕಲ್ ಗ್ರೂಫ್ ಆಫ್ ನ್ಯೂಜ್ ಪೇಪರ್ಸ್ನ ನಿರ್ದೇಶಕಿಯಾಗಿ 30 ವರ್ಷಗಳ ಕಾಲ ಕೆಲಸ ಮಾಡಿರುವರು. ಬಾನೂ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗೌರವ ಪದವಿಗಳನ್ನು ಪುಣೆ ಯುನಿವರ್ಸಿಟಿಯಿಂದ ಮತ್ತು ಎಸ್‌ಎನ್‌ಡಿಟಿ ಯುನಿವರ್ಸಿಟಿಯಿಂದ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಂಗೀತದಲ್ಲಿಯೂ ಆಸಕ್ತಿಯನ್ನು ಹೊಂದಿದ್ದರು. ಅಜ್ಜಿಯ ಮನೆಯಲ್ಲಿದ್ದಾಗ ಸಂಗೀತ ಮತ್ತು ಪಿಯಾನೊ ನುಡಿಸುವುದನ್ನು ಕಲಿತಿದ್ದರು.
2004 ರಲ್ಲಿ ನಿಧನರಾದ ಬಾನೂ ಅವರಿಗೆ 1989ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1992ರಲ್ಲಿ ಪುಣ್ಯಭೂಷಣ ಪ್ರಶಸ್ತಿ ನೀಡಿದ್ದಾರೆ. 1993ರಲ್ಲಿ ಸಾರ್ವಜನಿಕ ಸೇವೆಗಾಗಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


………..
ಡಾ.ಸುರೇಖಾ‌ ರಾಠೋಡ್

ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top