ರೋಹಿಣಿ ಯಾದವಾಡ ಹಾಯ್ಕುಗಳು

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

ಹಾಯ್ಕುಗಳು

೧) ಮರೆತಳಾಕೆ
ನೊಂದ ಮನಸ್ಸಿನಲ್ಲಿ
ಉಂಡ ನೋವನು

೨) ಕಲಿಸಿದಾಕೆ
ನೋವ ನುಂಗಿ ಬಾಳುವ
ಕಲೆಗಾರಿಕೆ

೩) ಪ್ರೇಮದ ಪಾಠ
ಹೇಳಿದ ನನ್ನವನು
ಮನದೊಡೆಯ

೪) ಉಳಿಸಿದಾತ
ಸಾಯ ಹೊರಟವಳ
ತಡೆದು ನಿಂತು

೫) ಸುಖಿಸಿದಾತ
ಮನವ ಸಂತೈಸುತ
ಪ್ರೀತಿಯ ಹಂಚಿ

೬) ಬೆಳೆಸಿದಾಕೆ
ತುತ್ತು ಉಣಿಸುತಲಿ
ಮಾತೃ ವಾತ್ಸಲ್ಯೆ

೭) ಕರುಣಾಮಯಿ
ಅಮ್ಮನೆಂಬ ಪದಕೆ
ಸಾಕ್ಷಿಕರಿಸಿ

೮) ಅಪ್ಪ ಆಕಾಶ
ಕಣಳ್ತೆಗೆ ಸಿಗದು
ಬಟ್ಟಾಬಯಲು

೯) ವಯಸ್ಸಾದಕೆ
ನನ್ನ ಅಜ್ಜಿ ಅವಳು
ಅನುಭವಸ್ಥೆ

೧೦) ಮನೆ ಹಿರಿಯ
ನನ್ನ ಅಜ್ಜ ಅವರು
ಜ್ಞಾನ ಕಣಜ.

——————

ರೋಹಿಣಿ ಯಾದವಾಡ

ಹಾಯ್ಕುಗಳು

Leave a Reply

Back To Top