ಮಾಜಾನ್ ಮಸ್ಕಿ-ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

many keys to open the right door

ನಗುನಲ್ಲಿಯೇ ಮನ ಸೆಳೆದು ನೋಡಬೇಡ ಮೊನಾಲಿಸಾ
ಸರಿಸಾಟಿ ಇಲ್ಲದ ಮೋಹಕತೆಯಲ್ಲೇ ಕಾಡಬೇಡ ಮೊನಾಲಿಸಾ

ನಿನ್ನ ನೋಡಿದಾಗಿನಿಂದ ಹೃದಯ ಬಾನಿಂದ ಪ್ರೀತಿಯ ಸುರಿಮಳೆ
ಭಾವನೆಗಳನ್ನು ಕೆರಳಿಸುವ ನವಿರಾದ ನವಿಲು ನಾಟ್ಯಬೇಡ ಮೊನಾಲಿಸಾ

ನನ್ನೋಲುಮೆಯ ಬಾನಂಗಳದಲ್ಲಿ ಚುಕ್ಕೆಗಳಾಗಿ ಕಾಡುತ್ತಿವೆ ನಿನ್ನಯ ನಯನ
ತೀರದ ಕನಸುಗಳು ನನಸಾಗಿಸಲು ಮರೆಯಬೇಡ ಮೊನಾಲಿಸಾ

ತುಂಬು ಗಲ್ಲದ ಡಿಂಪಲ್ ನಲ್ಲಿ ಅಡಗಿದೆ ನನ್ನಯ ಛಾಯೆ ಗೆಳತಿ
ಅವಿತು ಕುಳಿತಿರುವ ದಿಲ್ ಗೆ ಬೇಟೆ ಆಡಬೇಡ ಮೊನಾಲಿಸಾ

ನಿನ್ನ ಕಣ್ಣ್ ಬಿಜಲಿಗೆ ಸೋನಿ ಮಳೆಯಲ್ಲಿಯೂ ಬೆವರುತ್ತಿರುವೆ “ಮಾಜಾ”
ಹಿತವಾದ ಮಳೆ ಹನಿ ಸುರಿಯಲಿ ಆರ್ಭಟ ಮಾಡಬೇಡ ಮೋನಾಲಿಸಾ


Leave a Reply

Back To Top