ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ಬಿಸಿಲ ಝಳಕೆ ತತ್ತರಿಸಿದೆ ಒಡಲು

ಬಿಸಿಲ ಝಳಕೆ ತತ್ತರಿಸಿದೆ ಶಿವರಾತ್ರಿಗೆ ಶಿವ ಶಿವ ಅಂತಾ ಚಳಿ ಹೊರಟು ಹೋಗಿ, ಬೇಸಿಗೆ ಶುರುವಾಗುತ್ತದೆ ಅಂತ ನನ್ನಮ್ಮ ಹೇಳಿದ್ದ ನೆನಪು. ಈ ವರ್ಷದ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತಾಪವನ್ನು ಅನುಭವಿಸಿದವರೇ ಬಲ್ಲರು. ನೀರನ್ನು ಕುಡಿದಷ್ಟು‌ ಬಾಯಾರಿಕೆ ನಿಲ್ಲದು.ವಿಚಿತ್ರ ಹವಾಮಾನದಿಂದ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಒಂದಲ್ಲ ಒಂದು ಕಾರಣದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಎಲ್ಲ ಆಸ್ಪತ್ರೆಗಳು ರೋಗಿಗಳಿಂದ ತುಂಬಿದೆಯೆಂದರೆ ತಪ್ಪಾಗದು.ಕರೋನ ಕಂಗೆಡಿಸಿದ್ದು ಒಂದೆಡೆಯಾದರೆ, ಅದರ ರೂಪಾಂತರ ಪಳೆಯುಳಿಕೆಗಳು ಇನ್ನೊಂದು ತರದಲ್ಲಿ ಬಾಧಿಸುತ್ತಿದೆ.ಬಿಸಿಲಿನ ಝಳಕ್ಕೆ ತತ್ತರಿಸುವ ಮುನ್ಸೂಚನೆ ಬಂದಂತಾಗಿದೆ.ಜೀವ ಜಗತ್ತಿನಲ್ಲಿ ಮೂರು ಕಾಲಗಳು ಅನಿವಾರ್ಯ. ಯಾವ ಕಾಲ‌ವೂ ಅತೀಯಾದರೆ ಬದುಕು‌ ದುಸ್ತರ.ಹಾಗಿದ್ದಾಗ ಈ ಬಿಸಿಲಿಗೆ ಕಾರಣಿಕರ್ತರು ಯಾರು? ಇಷ್ಟೊಂದು ಬಿಸಿಲು ಬರಲು ಕಾರಣ? ಎಂಬ ಪ್ರಶ್ನೆ ಮೇಲ್ನೋಟಕ್ಕೆ ಸರಳ.ರವಿಗಿಂತ ಉದಾ.ಬೇಕಾ? ಇಡೀ ಬ್ರಹ್ಮಾಂಡದ ಸೌರಶಕ್ತಿಯೇ ಮೂಲ.ಇದೊಂದೆ ಜಗತ್ತಿನ ಅಸ್ತಿತ್ವಕ್ಕೆ ಮೂಲಾಧಾರ.

ಬಿಸಿಲು ಎಂದರೆ ಸೂರ್ಯನು ಹೊರಸೂಸಿದ ವಿದ್ಯುತ್ಕಾಂತೀಯ ವಿಕಿರಣದ ಒಂದು ಭಾಗ, ವಿಶೇಷವಾಗಿ ಅತಿಗೆಂಪು,ಗೋಚರ ಮತ್ತು ನೇರಳಾತೀತ ಬೆಳಕು. ಭೂಮಿಯ ಮೇಲೆ, ಬಿಸಿಲು ವಾತಾವರಣದ ಮೂಲಕ ಸೋಸಲ್ಪಡುತ್ತದೆ, ಮತ್ತು ಸೂರ್ಯನು ದಿಗಂತದ ಮೇಲಿದ್ದಾಗ ಸೂರ್ಯಪ್ರಕಾಶವಾಗಿ ಪ್ರಕಟವಾಗುತ್ತದೆ. ನೇರ ಸೌರ ವಿಕಿರಣವು ಮೋಡಗಳಿಂದ ಪ್ರತಿಬಂಧಗೊಳ್ಳದಿದ್ದಾಗ,ಅದು ಬಿಸಿಲಾಗಿ ಅನುಭವಿಸಲ್ಪಡುತ್ತದೆ. ಬಿಸಿಲು ಎಂದರೆ ಪ್ರಕಾಶಮಾನ ಬೆಳಕು ಮತ್ತು ವಿಕಿರಣ ಶಾಖದ ಸಂಯೋಜನೆ.ಮೋಡಗಳು ಇದನ್ನು ಪ್ರತಿಬಂಧಿಸಿದಾಗ ಅಥವಾ ಇದು ಇತರ ವಸ್ತುಗಳಿಂದ ಪ್ರತಿಫಲಿತವಾದಾಗ ಚದುರಿದ ಬೆಳಕಾಗಿ ಅನುಭವಿಸಲ್ಪಡುತ್ತದೆ. ಒಂದು ಪ್ರದೇಶವು ಸೂರ್ಯನಿಂದ ಚದರ ಮೀಟರ್‍ಗೆ ಕನಿಷ್ಠಪಕ್ಷ ೧೨೦ ವಾಟ್ ನೇರ ಉಜ್ಜ್ವಲತೆಯನ್ನು ಪಡೆಯುವ ಸಂಚಿತ ಸಮಯ ಎಂಬ ಅರ್ಥಸೂಚಿಸಲು ಬಿಸಿಲಿನ ಅವಧಿ ಪದವನ್ನು ವಿಶ್ವ ಪವನಶಾಸ್ತ್ರ ಸಂಸ್ಥೆಯು ಬಳಸುತ್ತದೆ.

ಬಿಸಿಲಿನಲ್ಲಿನ ನೇರಳಾತೀತ ವಿಕಿರಣವು ಸಕಾರಾತ್ಮಕ ಮತ್ತು ನಕಾರಾತ್ಮಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆ, ಏಕೆಂದರೆ ಇದು ವಿಟಮಿನ್ ಡಿ,ಥ್ರೀ ಮತ್ತು ಒಂದು ವಿಕೃತಿಕಾರಿಯ ಪ್ರಧಾನ ಮೂಲವಾಗಿದೆ. ಸೂರ್ಯನ ಮೇಲ್ಮೈಯಿಂದ ಭೂಮಿಯನ್ನು ತಲುಪಲು ಬಿಸಿಲು ಸುಮಾರು ೮.೩ ನಿಮಿಷ ತೆಗೆದುಕೊಳ್ಳುತ್ತದೆ. ಸೂರ್ಯನ ಕೇಂದ್ರದಿಂದ ಆರಂಭಗೊಳ್ಳುವ ಮತ್ತು ಆವೇಶಹೊಂದಿದ ಕಣವು ಎದುರಾದ ಪ್ರತಿ ಬಾರಿಯೂ ದಿಕ್ಕು ಬದಲಾಯಿಸುವ ಒಂದು ಫ಼ೋಟಾನ್ ಮೇಲ್ಮೈ ಮುಟ್ಟಲು ೧೦,೦೦೦ ರಿಂದ ೧೭೦,೦೦೦ ವರ್ಷಗಳು ತೆಗೆದುಕೊಳ್ಳುವುದು. ಸಸ್ಯಗಳು ಮತ್ತು ಇತರ ಸ್ವಪೋಷಕ ಜೀವಿಗಳು ಬೆಳಕಿನ ಶಕ್ತಿಯನ್ನು ಜೀವಿಗಳಗಳಿಗೆ ಬಲ ಒದಗಿಸಲು ಬಳಸಲ್ಪಡಬಹುದಾದ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಲು ಪ್ರಕ್ರಿಯೆಯಾದ ದ್ಯುತಿಸಂಶ್ಲೇಷಣೆಯಲ್ಲಿ ಬಿಸಿಲು ಒಂದು ಮುಖ್ಯ ಅಂಶವಾಗಿದೆ.

ಸೂರ್ಯನ ವಿಕಿರಣದ ವರ್ಣಪಟಲವು ಕೃಷ್ಣಕಾಯದ ವರ್ಣಪಟಲಕ್ಕೆ ಹತ್ತಿರವಾಗಿದೆ ಮತ್ತು ಸುಮಾರು ೫,೮೦೦ ಕೆಲ್ವಿನ್‍ನಷ್ಟು ಉಷ್ಣಾಂಶ ಹೊಂದಿದೆ. ಸೂರ್ಯವು ವಿದ್ಯುತ್ಕಾಂತೀಯ ವರ್ಣಪಟಲದ ಬಹುತೇಕ ಉದ್ದಕ್ಕೆ ವಿದ್ಯುತ್ಕಾಂತೀಯ ವಿಕಿರಣವನ್ನು ಹೊರಸೂಸುತ್ತದೆ. ಬೀಜ ಸಮ್ಮಿಳನ ಪ್ರಕ್ರಿಯೆಯ ಪರಿಣಾಮವಾಗಿ ಸೂರ್ಯವು ಗಾಮಾ ಕಿರಣಗಳನ್ನು ಉತ್ಪತ್ತಿ ಮಾಡುತ್ತದಾದರೂ, ಆಂತರಿಕ ಹೀರಿಕೆ ಮಾರ್ಚ್‌ನಿಂದ ಜೂನ್‍ವರೆಗೂ ಇರುವ ಬೇಸಿಗೆಯ ತೀವ್ರತೆಯಿಂದಾಗಿ ಅದೆಷ್ಟೋ ಜನರು ಆಸ್ಪತ್ರೆಗಳಿಗೂ ದಾಖಲಾಗುತ್ತಾರೆ. ಬೆಳಿಗ್ಗೆ ಚಳಿ, ಮಧ್ಯಾಹ್ನವಾಗುತ್ತಿದ್ದಂತೆ ಕಣ್ಣು ಬಿಡಲಾರದಷ್ಟು ಬಿಸಿಲು. ಇದು ಸದ್ಯ ರಾಜ್ಯದ ನಾಗರಿಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿರೋ ಹವಾಮಾನ. ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚುತ್ತಿದೆ.ಬಿಸಿಲ ಝಳಕೆ ತತ್ತರಿಸಿದೆ ಒಡಲು.
ಊಟ ತಿಂಡಿ ಬೇಡ ಬಾಯಾರಿಕೆಗೆ ನೀರಿನ ಹನಿಯೊಂದು‌ ಸಾಕು ಎನ್ನುವಂತಾಗಿದೆ.ಚೈತನ್ಯ ಹೀರಿದ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದನ್ನು ಅನುಭವಿಸಿದವರಿಗೆ ಗೊತ್ತು.

.

ಪ್ರಮುಖವಾಗಿ ಬೇಸಿಗೆಯಲ್ಲಿ ಯಾವ ರೀತಿಯ ಕಾಯಿಲೆಗಳು ಬರುತ್ತವೆ? ಅವುಗಳ ರೋಗಲಕ್ಷಣಗಳು ಏನು? ಯಾವ ರೀತಿ ಆರೋಗ್ಯವನ್ನು ಕಾಪಾಡಬೇಕು ಅಂತ ವೈದ್ಯರನ್ನು ಸಂಪರ್ಕಿಸಿ ಕೇಳಿದಾಗ ಅವರಿಂದ ದೊರೆತ ಒಂದಷ್ಟು ಮಾಹಿತಿ.ಬೇಸಿಗೆಯಲ್ಲಿ ಮೂರು ಹಂತಗಳಲ್ಲಿ ಬಿಸಿಲಿಗೆ ಸಂಬಂಧಿಸಿದೆ ಕಾಯಿಲೆಗಳು ಬರುತ್ತೆ.
1) Heat Exhaustion,
2) Heat Cramps
3) Heat Stroke ಈ ಮೂರು ಹಂತಗಳಲ್ಲಿ ಕಾಣಿಸಿಕೊಳ್ಳುತ್ತವೆ..

*Heat Exhaustionನಿಂದಾಗಿ ದೇಹನದಲ್ಲಿನ ನೀರಿನ ಅಂಶ ಕ್ಷೀಣಿಸುತ್ತೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದಾಗ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗಿ ಸುಸ್ತಾಗುತ್ತೆ.

*Heat Cramps ನಿಂದಾಗಿ ದೇಹದ ಮಾಂಸಖಂಡಗಳು ಹಿಡಿದಂತಾಗುತ್ತೆ. ಹೊಟ್ಟೆಯ ಹಾಗೂ ಮಂಡಿಯ ಕೆಳಭಾಗದ ಕಾಲಿನಲ್ಲಿ ಹಿಡಿದಂತಾಗುತ್ತೆ. Heat Exhaustion, Heat Cramps ಆದಾಗಲೂ ನಿರ್ಲಕ್ಷ ವಹಿಸಿದರೆ

*Heat Stroke ಆಗುವಂತ ದಟ್ಟ ಸಾಧ್ಯತೆ ಇರುತ್ತೆ. ಇದರಿಂದಾಗಿ ಮೂತ್ರಪಿಂಡ, ಹೃದಯಕ್ಕೆ ಸಮಸ್ಯೆಯನ್ನು ನಾವೇ ತಂದುಕೊಂಡಂತೆ ಇವೆಲ್ಲದರ ಜೊತೆಗೆ Loose Motion ಆಗೋದು, ಹಸಿವಾಗದೇ ಇರೋದು ಕೂಡ ಬೇಸಿಗೆಯ ಲಕ್ಷಣ ಎಂದು ವೈದ್ಯರು ಹೇಳುತ್ತಾರೆ.

ಬಿಸಿಲ ತಾಪ ಹೆಚ್ಚಾಗಿದ್ದು, ಮಕ್ಕಳಲ್ಲಿ ಸೋಂಕುಗಳು ಹೆಚ್ಚಾಗಲಿವೆ. ಸೋಂಕು, ನಿರ್ಜಲೀಕರಣ ಕುರಿತು ಪೋಷಕರು ಹಾಗೂ ಆರೈಕೆಯಲ್ಲಿ ತೊಡಗಿರುವವರು ಎಚ್ಚರಿಕೆ ವಹಿಸಬೇಕಿದೆ. 

King and green coconuts on the beach in Sri Lanka

ಚಿಕ್ಕ ಮಕ್ಕಳ‌ ಆರೋಗ್ಯ ಕಾಪಾಡುವಲ್ಲಿ‌ ಗಮನಿಸುವ ಅಂಶಗಳು

*ಮಕ್ಕಳಿಗೆ ಎಳನೀರು, ಓ.ಆರ್ ಎಸ್, ಗಂಜಿ ಇತ್ಯಾಗಿ ದ್ರವ ಪದಾರ್ಥಗಳನ್ನು ಹೆಚ್ಚಾಗಿ ನೀಡಿಬೇಕು. ಇದು ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುತ್ತದೆ. 

*ಮಕ್ಕಳು ಜ್ವರದಿಂದ ಬಳಲುತ್ತಿದ್ದರೆ ಆ್ಯಂಟಿಬಯಾಟಿಕ್ ಗಳನ್ನು
ಪ್ಯಾರೆಸಿಟಮಾಲ್ ಅಥವಾ ಐಬುಪ್ರೊಫೇನ್’ನ್ನು ನೀಡಿ. 

*ಆರೋಗ್ಯಕರ ಆಹಾರ, ಶುದ್ಧ ನೀರು, ಹಣ್ಣುಗಳು ಮತ್ತು ಹಣ್ಣಿನ ರಸವನ್ನು ನೀಡಿ.

*ಚರ್ಮದ ರಕ್ಷಣೆಗಾಗಿ ಟೋಪಿಗಳು, ಛತ್ರಿ ಮತ್ತು ಸನ್‌ಸ್ಕ್ರೀನ್ ಗಳಂತಹ ವಸ್ತುಗಳನ್ನು ಬಳಸಿ.

.*ಉಪ್ಪು, ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ನೀರಿಗೆ ಬೆರೆಸಿ ಕುಡಿಸಬೇಕು. ಸಮಸ್ಯೆಗಳಿಂದ ದೂರ ಉಳಿಯಲು ಮಕ್ಕಳಿಗೆ ಹೆಚ್ಚೆಚ್ಚು ನೀರು ಕುಡಿಸಬೇಕು.

ಬೇಸಿಗೆಯಲ್ಲಿ ಆರೋಗ್ಯವಂತರಾಗಿರಬೇಕು ಅಂದ್ರೆ ಒಂದಿಷ್ಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದ್ದು ಬಹುಮುಖ್ಯ. ಯಾವುದೇ ಕಾರಣಕ್ಕೂ ಹೆಚ್ಚಿನ ಕಾಲ ಮಧ್ಯಾಹ್ನದ ಬಿಸಿಲಿನಲ್ಲಿ ಹೊರ ಹೋಗಬಾರದು.ಹೋಗುವ ಅನಿವಾರ್ಯತೆ ಇದ್ದಾಗ ಪರ್ಯಾಯವಾಗಿ ಅವಶ್ಯಕ ವಸ್ತುಗಳನ್ನು ಬಳಸಬೇಕು.ಉದಾ. ಛತ್ರಿ,ಕ್ಯಾಪ್,ಇತ್ಯಾದಿ. ಆಗಾಗ ನೀರು ಕುಡಿಯುತ್ತಲೇ ಇರಬೇಕು. ಮೃದುವಾಗಿರೋ ತಿಳಿ ಬಣ್ಣದ ಗಾಳಿಯಾಡುವಂತಹ ಕಾಟನ್ ಬಟ್ಟೆ ಧರಿಸಬೇಕು. ರಸ್ತೆ ಬದಿ ಕತ್ತಿರಿಸಿ ಇಡಲಾಗಿರೋ ಹಣ್ಣುಗಳನ್ನು ಸೇವಿಸಬಾರದು. ಮಾಂಸಾಹಾರ ಹಾಗೂ ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು.ಇದೂವರೆಗೂ ಕಾಣದ ಪ್ರಮಾಣದಲ್ಲಿ ಬಿಸಿಲ ದಗೆ ಕಂಡು ಬರುತ್ತಿದ್ದು, ಈ ಸಂದರ್ಭದಲ್ಲಿ ನಿರ್ಜಲೀಕರಣ ಸಮಸ್ಯೆಗಳು ಹೆಚ್ಚಾಗಲಿದೆ. ಸಮಸ್ಯೆಗಳಿಂದ ದೂರ ಇರಲು ಹೈಡ್ರೇಟೆಡ್ ಆಗಿರಿ. ಅಗತ್ಯಬಿದ್ದಾಗ ಇತರರಿಗೂ ಸಹಾಯ ಮಾಡಿ. ಮಕ್ಕಳು, ವಯೋವೃದ್ಧರು, ಅಂಗವಿಕಲರ ಮೇಲೆ ಹೆಚ್ಚಿನ ನಿಗಾ ಇರಿಸಿದಷ್ಟು ಒಳ್ಳೆಯದು.

ಪ್ರಕೃತಿಯ ವಿರುದ್ಧ ಬದುಕಲು ಸಾಧ್ಯವಿಲ್ಲ.ಪರಿಸರ ಸಂರಕ್ಷಿಸಿದರೆ ಹಚ್ಚಹಸಿರು ನಮಗೆ ಉಸಿರ ನೀಡಬಲ್ಲದು.ಬಿಸಿಲು ಬರಿ‌ಬಿಸಿಲಾದರೆ ಸಾಕಿತ್ತು.ಆದರೆ ಮೂರು ಕಾಲಗಳು ನಮ್ಮ ಕೈ ಮೀರಿ ವರ್ತಿಸುತ್ತಿವೆ. ಅಂದರೆ ಮಾನವ ಪ್ರಕೃತಿ ಮುಂದೆ ಎಷ್ಟು ಕುಬ್ಜ ಎಂಬುದನ್ನು ಮರೆಯಬಾರದು.ನಮ್ಮ‌ ಪರಿಸ್ಥಿತಿ ಈಗಲೇ ಹೀಗಿದೆ.ಮುಂದಿನ ಪೀಳಿಗೆಯ ಭವಿಷ್ಯದ ಚಿಂತನೆಗೆ ಯೋಚಿಸಬೇಕಿದೆ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

4 thoughts on “

  1. ಬಿಸಿಲಬೇಗೆ ನಿವಾರಣೆ ಮಾಡುವ ಮೂಲಕ ಬರೆದ ಲೇಖನ ಚೆನ್ನಾಗಿದೆ.

  2. ಬಿಸಿಲ ಝಳಕ್ಕೆ ತತ್ತರಿಸಿದೆ ಒಡಲು ವೈಜ್ಞಾನಿಕ ಲೇಖನ. ಬೆಸಿಲ ತಾಪಕ್ಕೆ ಮನುಷ್ಯನ ಹಗರವೇ ಶಾಪವಾಗಿ ಪರಿಣಮಿಸಿದೆ ಎನ್ನುವ ಸತ್ಯದ ಅನಾವರಣ. ಮನುಷ್ಯನ ಕೃತ್ಯಕ್ಕೆ ವಿಷಾದ, ದಾಹ ತಣಿಸಿಕೊಳ್ಳುವುದಕ್ಕೆ ಹೂಡುವ ಪ್ರಯತ್ನ ಪ್ರಕೃತಿಯ ಮುಂದೆ‌‌ ಸೋಲುತ್ತದೆ. ಹಸಿರು ಕಳೆದುಕೊಂಡ ಭೂಮಿಯ ಬಿಸಿ ಉಸಿರು ಮನುಕುಲಕ್ಕೆ ಶಾಪವಾಗಲಿದೆ. ಇನ್ನಾದರೂ ಗಿಡ ಮರಗಳನ್ನು ಉಳಿಸಿ ಮತ್ತು ಬೆಳಸಿ ಆಂತರಿಕ ಕಳಕಳಿಯೇ ಲೇಖನದ ಒಡಲಭಾವ. ಡಿ.ಎಸ್ನಾ.

  3. ಬರೆಯಲು ಹೊರಟಿದ್ದು ಬಿಸಿಲ ಝಳದ ಬಗ್ಗೆ, ಆದರೆ ಇಡೀ ಬೇಸಿಗೆಯ ಒಳ ಹೊರಗುಗಳನ್ನು ಸವಿಸ್ತಾರವಾದ ವಿವರಣೆ, ಬೇಸಿಗೆ ಬಿಸಿ ತಣಿಸುವ ಲೇಖನ

    ನಾಗರಾಜ ಆಚಾರಿ ಕುಂದಾಪುರ

Leave a Reply

Back To Top