ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ದೇಶದ ಮೊದಲ ಹೃದಯರೋಗ ತಜ್ಞೆ

ಎಸ್ ಐ ಪದ್ಮಾವತಿ (1917-2020)

ದೇಶದ ಮೊದಲ ಹೃದಯರೋಗ ತಜ್ಞೆಯರ ಪಟ್ಟಿಯಲ್ಲಿ ಎಸ್ .ಐ. ಪದ್ಮಾವತಿಯವರ ಹೆಸರು ಕೂಡ ಒಂದು. ಇವರು 20 ಜೂನ್ 1917 ರಂದು ಬರ್ಮಾದ(ಮಾನ್ಮರ್) ನ್ಯಾಯವಾದಿ ದಂಪತಿಗಳಿಗೆ ಜನಿಸಿದರು. ಪದ್ಮಾವತಿಯವರಿಗೆ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು. ಇವರು ಎಂ.ಬಿ.ಬಿ.ಎಸ್ ಪದವಿಯನ್ನು ರಂಗೂನ್ ವೈದ್ಯಕೀಯ ಕಾಲೇಜಿನಿಂದ ಪಡೆದರು. ನಂತರ 1949ರಲ್ಲಿ ಲಂಡನ್‍ಗೆ ತೆರಳಿದರು. ನಂತರ ರಾಷ್ಟ್ರೀಯ ಹೃದಯರೋಗ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ಮತ್ತೆ ನ್ಯಾಷನಲ್ ಚೆಸ್ಟ್ ಹಾಸ್ಪಿಟಲ್ ಮತ್ತು ನ್ಯಾಷನಲ್ ಹಾಸ್ಪಿಟಲ್, ಕ್ವೀನ್ಸ್ ಸ್ನ್ಟೆರ್, ಲಂಡನ್‍ನಲ್ಲಿಯು ಇವರು ಸೇವೆಯನ್ನು ಸಲ್ಲಿಸಿರುವರು.
ಎಫ್‍ಆರ್‍ಸಿಪಿ ಮುಗಿಸಿದ ನಂತರ ಪದ್ಮಾವತಿರವರು ಸ್ಪೀಡನ್‍ಗೆ ಮೂರು ತಿಂಗಳಗಳ ಕಾಲ ತೆರಳಿ ದಕ್ಷಿಣ ಆಸ್ಪತ್ರೆಯಲ್ಲಿ ಕಾರ್ಡಿಯಾಲಾಜಿ ಕೋರ್ಸ್‍ನ್ನು ಮುಗಿಸಿದರು. ಈ ನಡುವೆ ಫೆಲೋಶಿಪ್‍ಗಾಗಿ ಜಾನ್‍ಸನ್ ಹೊಪ್ಕೋನಿಸ್ ಯುನಿವರ್ಸಿಟಿಗೆ ಅರ್ಜಿಸಲ್ಲಿಸಿ, ಫೆಲೋಶಿಪ್‍ಗೆ ಆಯ್ಕೆಯಾದರು. ಹೃದಯರೋಗ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಹೆಲೆನ್ ತೆರಳಿದರು. 1952 ರಲ್ಲಿ (ಹಾರ್ವಡ್ ಯುನಿವರ್ಸಿಟಿಗೆ) ಹಾರ್ವಡ್ ಮೆಡಿಷನ್ ಸ್ಕೂಲ್‍ಗೆ ಸೇರಿಕೊಂಡು ಅಲ್ಲಿ ಆಧುನಿಕ ಹೃದಯಶಾಸ್ತ್ರದ ಪ್ರವರ್ತಕರಾದ ಪಾಲ್ ಡಡ್ಲಿವೈಟ್ ಅವರ ಮಾರ್ಗದರ್ಶನಲ್ಲಿ ಅಧ್ಯಯನ ಮಾಡಿದರು.

ಪದ್ಮಾವತಿಯವರು 1953 ರಲ್ಲಿ ಭಾರತಕ್ಕೆ ಮರಳಿ ಬಂದು, ದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಫ್ರಾರಂಭಿಸಿದರು. ಅಲ್ಲಿ ಹೃದಯರೋಗ ಚಿಕಿತ್ಸಾಲಯವನ್ನು ಫ್ರಾರಂಭಿಸಿದ ಇವರು, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದೊಂದಿಗೆ ಭಾರತದಲ್ಲಿ ಮೊದಲ ಬಾರಿಗೆ ಹೃದಯರೋಗ ಶಾಸ್ತ್ರದಲ್ಲಿ ಎಂ ಡಿ ಪದವಿಯನ್ನು ಪ್ರಾರಂಭಿಸಿದರು. 1962 ರಲ್ಲಿ ಆಲ್ ಇಂಡಿಯಾ ಹಾರ್ಟ್ ಫೌಂಡೇಶನ್ (ಎಐಎಚ್‍ಎಫ್)ನ್ನು ವೈದ್ಯರ ಸಹಯೋಗ ಮತ್ತು ಕೈಗಾರಿಕೋದ್ಯಮಿ ಅಶೋಕ ಜೈನ್ ಅವರ ಸಹಯೋಗದೊಂದಿಗೆ ಫ್ರಾರಂಭಿಸಿದರು.

ಎಸ್ ಐ ಪದ್ಮಾವತಿಯವರು 1967 ರಲ್ಲಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿಗೆ ಸೇರಿಕೊಂಡರು. ಅದೇ ವರ್ಷ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರು ಕಾರ್ಡಿಯಾಲಜಿ ವಿಭಾಗವನ್ನು ಮೊದಲ ಬಾರಿಗೆ ಕಾಲೇಜಿನ ಕ್ಯಾಂಪಸ್‍ನೊಳಗೆ ಜಿ.ವಿ ಪಂತ ಆಸ್ಪತ್ರೆಯಲ್ಲಿ ತೆರೆದರು. ಪದ್ಮಾವತಿಯವರು 1966 ರಲ್ಲಿ ನವದೆಹಲಿಯ 5ನೇ ವಿಶ್ವ ಕಾಂಗ್ರೆಸ್‍ನ ಕಾರ್ಡಿಯಾಲಾಜಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

1970ರ ದಶಕದಲ್ಲಿ ಪದ್ಮಾವತಿಯವರು ಒಂದೇ ಸಮಯದಲ್ಲಿ ಮೂರು ಪ್ರಮುಖ ಸಂಸ್ಥೆಗಳ ಮುಖ್ಯ ನಿರ್ವಾಹಕರಾಗಿದ್ದರು. ಅವುಗಳೆಂದರೆ 1)ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು 2) ಲೋಕನಾಯಕ ಆಸ್ಪತ್ರೆ 3) ಜಿ ವಿ ಪಂತ್ ಆಸ್ಪತ್ರೆ. ಇವರು 1978 ರಲ್ಲಿ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾದರು.

ಪದ್ಮಾವತಿಯವರು ತಮ್ಮ ನಿವೃತ್ತಿಯ ನಂತರ 1981 ರಲ್ಲಿ ಎಐಎಚ್‍ಎಫ್ ಅಡಿಯಲ್ಲಿ ನ್ಯಾಷನಲ್ ಹಾರ್ಟ ಇನ್ಸಿಟ್ಯೂಟ್ (ಎನ್‍ಎಚ್‍ಐ)ನ್ನು ಸ್ಥಾಪಿಸಿದರು. ಈ ಇನ್ಸಿಟಿಟ್ಯೂಟ್ ಮೂಲಕ ರೋಗಿಗಳ ಆರೈಕೆ, ಸಂಶೋಧನೆ ಮತ್ತು ಜನಸಂಖ್ಯೆಯ ವ್ಯಾಪ್ತಿಯನ್ನು ವಿವರಿಸಹಂತಹ ಕೆಲಸವನ್ನು ಮಾಡುತ್ತಾ ಪದ್ಮಾವತಿಯರು ವೃತ್ತಿಯನ್ನು ಮುಂದುವರೆಸಿದರು. ಹಾಗೇಯೆ ಇವರು ದೆಹಲಿ ವಿಶ್ವವಿದ್ಯಾಲಯದ ಮೆಡಿಸಿನ್ ಮತ್ತು ಕಾರ್ಡಿಯಾಲಜಿ ವಿಭಾಗದ ಎಮರಿಟಸ್ ಫ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದರು.

ಪದ್ಮಾವತಿಯವರು 2007 ರಲ್ಲಿ ಯುರೋಪಿನ್ ಸೊಸೈಟಿ ಆಫ್ ಕಾರ್ಡಿಯಾಲಜಿಯಲ್ಲಿ ಸಹವರ್ತಿಯಾಗಿದ್ದರು. ತಮ್ಮ 90ನೇ ವಯಸ್ಸಿನಲ್ಲಿ ಇಎಸ್‍ಸಿಯ ಅತ್ಯಂತ ಹಿರಿಯ ಸಹೊದ್ಯೋಗಿಯಾಗಿದ್ದರು.

ಎಸ್ ಐ ಪದ್ಮಾವತಿಯವರು ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು 1967 ಪಡೆದರು. ಮತ್ತು ಭಾರತದ ಎರಡನೇ ಅತ್ಯನ್ನತ ನಾಗರೀಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು 1992 ರಲ್ಲಿ ಪಡೆದರು

ಆಗಸ್ಟ್ 29,2020 ರಂದು ನವದೆಹಲಿಯ ನ್ಯಾಷನಲ್ ಹಾರ್ಟ್ ಇನ್ಸಿಟ್ಯೂಟ್‍ನಲ್ಲಿ ಕೋವೀಡ್ 19 ನಿಂದ 103 ವಯಸ್ಸಿನಲ್ಲಿ ನಿಧನರಾದರು.
————————————-

ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top