ಕಾವ್ಯ ಸಂಗಾತಿ
ಬೆಳೆಯಬೇಕಿದೆ ಬೆಳೆಯನು
ಡಾ.ದಾನಮ್ಮ
ಅಹಂದ ಬೇರು ಕಿತ್ತಿ
ಕಾಮ ಕ್ರೋಧ, ಚಿವಟಿ ಹಾಕಿ
ಮದ ಮತ್ಸರ ಕಳೆಯ ತೆಗೆದು
ದ್ವೇಷ ಅಸೂಯೆ ಅಳಿಸಿ ಹಾಕಿ
ಬೆಳೆಯಬೇಕಿದೆ ಬೆಳೆಯನು
ಪ್ರೀತಿ ಪ್ರೇಮ ಬೀಜದಿಂದ
ಮಾನವೀಯತೆಯ ರಸದಿಂದ
ಸಹೋದರತೆಯ ಬೇರಿನಿಂದ
ಮಧುರ ನಿರ್ಮಲ ಭಾವದಿಂದ
ಬೆಳೆಯಬೇಕಿದೆ ಬೆಳೆಯನು
ಜಾತಿ ಮತ ಪಂಥ ಮೀರಿ
ದೀನ ದಲಿತ ಬೇಧ ತೊರೆದು
ಹೆಣ್ಣು ಗಂಡು ಸಮತೆ ಸಾರಿ
ದಾಯಾದಿಗಳ ಕಲಹ ದಾಟಿ
ಬೆಳೆಯಬೇಕಿದೆ ಬೆಳೆಯನು