ನೆನಪುಗಳು ಹೀಗೆ ಅಲ್ಲಿವೆ…. ಡಾ. ನಿರ್ಮಲ ಬಟ್ಟಲರವರ ಕವಿತೆ

ಕಾವ್ಯಸಂಗಾತಿ

ನೆನಪುಗಳು ಹೀಗೆ ಅಲ್ಲಿವೆ

ಡಾ. ನಿರ್ಮಲ ಬಟ್ಟಲ

ನೆನಪುಗಳೆಂದರೆ ಹೀಗೆ ಅಲ್ಲವೆ…?
ಕಣ್ಣಂಚನು ತೇವಗೊಳಿಸಿ
ತುಟಿಯಂಚನು ಅರಳಿಸುವ
ಹಳೆಯ ಗೆಳಯ/ಗೆಳತಿಯರಂತೆ….!
ಭಾರವಾದ ಎದೆಯ
ಹಗುರಗೊಳಿಸಿ….
ನಿಟ್ಟುಸಿರ ಬಿಡುವಾಗ
ಎದೆಗೊರಗಿಸಿಕೊಳ್ಳುವ ನಲ್ಲನಂತೆ…!
ಮರೆಯಬೇಕೆಂದರು
ಮತ್ತೆ ಮತ್ತೆ ಕೆಣಕಿ
ಕಾಡುವ ಮಗುವಂತೆ…..!
ಇಂದಿನ ದಿನ ಸಿಹಿಯಾಗಿ
ಕಳೆದ ಅನುಭವ
ನಾಳೆ ನೆನಪಾಗಿ
ನಾಡಿದ್ದು ನಗುವಾಗಿ
ದಿನಕಳೆದಂತೆ ಹಸಿರಾಗಿ
ಅಚ್ಚೊತ್ತಿದ ಮನದ ಪುಸ್ತಕ ದೊಳಗಿನ ಪುಟದಂತೆ…!
ಇಂದಿನ ದಿನ ಕಹಿಯಾದರೆ
ನೋವಾಗಿ ಕಾಡುವುದು
ಬಹುದಿನಗಳ ಕಾಲ
ಕಾಲೊಳಗೆ
ಅಳುಕುವ ಮುಳ್ಳಿನಂತೆ…!
ಮನ ನೆನಪನು ಆಳಕ್ಕೆ
ತಳ್ಳಿ ಕೀಲಿಹಾಕಿ ಮರೆಯಬೇಕೆಂದರೂ ಗತ
ವರ್ತಮಾನದಲಿ ಧುತ್ತೆಂದು
ಎದುರಾಗಿ ನಿಟ್ಟುಸಿರನೀಡುವುದು…..!!
ನೆನಪುಗಳೆಂದರೆ ಹೀಗೆ ಅಲ್ಲವೆ
ಕಾರಣವಿಲ್ಲದೆ ನಗಿಸಿ ಅಳಿಸುವ
ಕಚಗುಳಿಗಳಂತೆ….!
ಮನದ ಕಡಲೊಳಗಿನ ಉಕ್ಕುವ
ಅಲೆಗಳಂತೆ….!!


4 thoughts on “ನೆನಪುಗಳು ಹೀಗೆ ಅಲ್ಲಿವೆ…. ಡಾ. ನಿರ್ಮಲ ಬಟ್ಟಲರವರ ಕವಿತೆ

  1. ನಿಮ್ಮ ಅನುಭವವೇ ನಮ್ಮೆಲ್ಲರ ಅನುಭವ.ಅನುಭಗಳನ್ನು ಭಾವಕೋಶದಿಂದ ತೆಗೆದು ಅಕ್ಷರಗಳಾಗಿಸಿದ್ದೀರಿ.
    -ಭಗವಾನ್,
    ಕಥಾ ಪರಂಪರೆ

Leave a Reply

Back To Top