ಹೂಸಗನ್ನಡದ ಕಾಲ ಮತ್ತು ಕಾವ್ಯ.

ಲೇಖನ

ಹೂಸಗನ್ನಡದ ಕಾಲ ಮತ್ತು ಕಾವ್ಯ.

ಸುಲಭಾ ಜೋಶಿ ಹಾವನೂರ

ಹೂಸಗನ್ನಡದ ಕಾಲ ಮತ್ತು ಕಾವ್ಯ.

ಹೂಸಗನ್ನಡದ ಕಾಲ ಮತ್ತು  ಕಾವ್ಯವನ್ನು  ಬಾವಗೀತದ ಶುಭಾರಂಭ ಎಂದು ಅನೇಕರು ಅಭಿಪ್ರಾಯಪಟ್ಟಿರುವರು. ಪ್ರಾಚೀನ ಕಾವ್ಯವು ತನ್ನ ಪರಂಪರಾನುಗತವಾದ  ಮನೋಭೂಮಿಕೆಯಿಂದ ಮಾಯವಾಗತೂಡಗಿದ್ದು ಸ್ಪಪ್ಟವಾಗಿ ಕಾಣತೂಡಗಿತ್ತು. ತಿರುಮಲಾರ್ಯ, ಮುದ್ದಣ, ಮೂದಲಾದವರು ಗದ್ಯದಲ್ಲಿ ಬರೆಯತೂಡಗಿದರು. ಎಲ್ಲೆಲ್ಲೂ ಕಂದ, ಷಟ್ಪದಿಗಳಂತಹ  ಪದ್ಯಗಳ ಚಿಕ್ಕ ಚಿಕ್ಕದಾದ ಸ್ವರೂಪಗಳಿದ್ದವು. ಆದರೆ ಪ್ರಸ್ತುತಪಡಿಸುವುದಕ್ಕೆ ಹೂಸ ವಿಷಯಗಳಿರಲ್ಲಿಲ. ಇದು 19ನೆಯ ಶತಮಾನದ ಕೂನೆಕೂನೆಯ ಸಂದರ್ಭದ್ದು.

ನಾವಿನ್ಯಪೂರ್ಣ  ಕಾವ್ಯಪ್ರಕಾರ  ನವೀನ ವಿಷಯಗಳೂಂದಿಗೆ, ತನ್ನ ಉದಯಕಾಲದ ಅರುಣೋದಯಕ್ಕೆ ಸಿಧ್ದತೆಯನ್ನು ನಡೆಸಿದಂತೆ
ಕಾಣತೂಡಗಿತು. ಇದೆ  ಸಂದರ್ಭದಲ್ಲಿ   ಶ್ರೀನರಸಿಂಹಶಾಸ್ಸ್ರ್ತಿಮತ್ತು
ಹಟ್ಟಿಯಂಗಡಿ  ನಾರಾಯಣರಾಯರು  ಇಂಗ್ಲಿಷಕವಿತೆಗಳನ್ನು  ಭಾಷಾಂತರಿಸಿದರು. ಹೂಸಕಾವ್ಯದ ಅನಿವಾರ್ಯತೆ ಅತ್ಯಂತ ನೈಸರ್ಗಿಕ ಮತ್ತು ಉತ್ಕಟವಾಗಿ ಪ್ರಭಾವಶಾಲಿಯಾಗಿ ಬೆಳೆಯುತ್ತಲೇ ಕನ್ನಡ ಸಾಹಿತ್ಯ ಪ್ರಪಂಚವನ್ನು ಶೀಮಂತಗೂಳಿಸಿತು.



ಬಿ .ಎಂ.ಶ್ರೀಕಂಠಯ್ಯನವರ ಇಂಗ್ಲೀಷಗೀತಗಳು  ಪ್ರಕಟವಾಯಿತು. ಕನ್ನಡ ದಾಸಯ್ಯ, ರಕ್ಷಿಸು ಕರ್ನಾಟಕದೇವಿ, ಎಂಬ ಶಾಂತಕವಿಗಳ  ಕವನಗಳಲ್ಲಿ ಸುಂದರವಾದ,ಸರಳೀಕ್ರುತವಾದ ಸ್ಪಷ್ಟಭಾವಗಳು  ಅಭಿವ್ಯಕ್ತವಾಗತೂಡಗಿದವು. ವ್ಯಂಗ್ಯ ಮತ್ತು ವಿಡಂಬನೆ ವಿನೋದಪರತೆ,ಸಾಮಾಜಿಕತೆಯ ಅರಿವು ತನ್ನ ಹರವನ್ನು ವಿಸ್ತರಿಸಲು ಮತ್ತು ವ್ಯಾಪಕವಾದ  ಪರಿಸರದ  ನಿರ್ಮಿತಿಗೆ  ಶುಭಾರಂಭವಾಯಿತು. ಇದಕ್ಕೆ  ಕಾವ್ಯಾನಂದರ  ಕಾವ್ಯಗಳು ಅತ್ಯುತ್ತಮ ಉಧಾಹರಣೆಯಾಗಿವೆ. ಭಾರತದ ಎಲ್ಲ  ಪ್ರಾಂತಗಳಲ್ಲಿ  ಅಲ್ಲಿಯ  ಸುಸಂಸ್ಕ್ರತವಾದ, ದಿನನಿತ್ಯದ ಹಗುರವಾದ ಜೀವನದ  ರಮ್ಯವರ್ಣನೆಯ ಅಭಿವ್ಯಕ್ತಿಯ ಪರಿಸರ, ನಿಸರ್ಗಸೌಂದರ್ಯದ   ಆನಂದದೋಂದಿಗೆ  ಆರ್ದಶ ವ್ಯಕ್ತ್ತಿತ್ವದ  ಹೆಣಿಕೆಯೋಂದಿಗೆ  ನವೋದಯದ ಕಾವ್ಯಸುರ್ಷ್ಟಿ ನವನವೀನಪ್ರೇರಣೆಯನ್ನು ಒದಗಿಸಿತು. ಅಪ್ಟೇ ಅಲ್ಲದೆ ದೇಶಾಭಿಮಾನ ರಾಷ್ಟ್ರೀಯಪ್ರಜ್ಞೆ  ನಾಡುನುಡಿಗಳ ಸ್ವಂತಿಕೆ  ಇವು  ಪ್ರೇರಣಿಯ ಮುಂಚೂಣಿಯಲ್ಲಿದ್ದವು. ಚಿಕ್ಕಪುಟ್ಟ ಆನಂದವನ್ನು, ಅತ್ಯಂತ ಸಹಜಸುಂದರವಾದ  ಭಾವವನ್ನು ಕಾವ್ಯದಲ್ಲಿ ಅಭಿವ್ಯಕ್ತಿಸಬೇಕೆಂಬ ಮನಸೋಕ್ತ  ಅಭಿಲಾಷೆಯಿಂದ  ಅನೇಕರು  ತಮ್ಮ ತಮ್ಮ ಭಾವಗಳನ್ನು ಭಾವಗೀತಾತ್ಮಕ  ಗೀತಗಾನವಾಗಿಸಿದರು. ಸುಗಮಸಂಗೀತವಾಗಿಸಿದರು.

ಪಂಜೆಮಂಗೇಶರಾಯರ  ನಾಗರಹಾವು, ಮತ್ತು ತೆಂಕಣಗಾಳಿಯಾಟ ಎಂಬ ಪದ್ಯಗಳು ಹೂಸಗನ್ನಡದ  ಅರುಣೋದಯದ ಬಹು  ಸುಂದರ ಉಧಾಹರಣೆಯಾಗಿವೆ. ಇಲ್ಲಿಕಾವ್ಯಾತ್ಮಕತೆಯ ಶ್ಯೆಲಿ  ಅತ್ಯಂತ ಸುಲಲಿತವಾಗಿದೆ.   ಬಿ.ಎಂ.ಶ್ರೀಕಂಠಯ್ಯನವರ, ಇಂಗ್ಲೀಷಗೀತಗಳು, ಹೂಸಗನ್ನಡ ಕಾವ್ಯಕ್ಕೆ ಸುಭದ್ರವಾದ  ಬುನಾದಿಯ ಪ್ರತೀಕವಾಗಿದೆ. ಸುಕೋಮಲವಾದ ಭಾವಗಳನ್ನು ಸಹಜವಾಗಿ ಅಭಿವ್ಯಕ್ತಿಸುವ ಆನಂದ ಕವಿಕಾವ್ಯಗಳಲ್ಲಿ ಪ್ರತಿಧ್ವನಿಸತೂಡಗಿತು.
 ‌             
ಹೂಸಗನ್ನಡ  ಕಾವ್ಯದ  ಶುಭಾರಂಭದ  ನವನವೋನ್ಮೇಷಶಾಲಿನಿಯ ‌ಶ್ರೇಯಸ್ಸನ್ನು, ಇಂಗ್ಲೀಷಗೀತಗಳು, ಎಂಬ ಸಂಗ್ರಹಕ್ಕೆ  ಕೂಡಲೇಬೇಕು. ಈ  ಸಂಗ್ರಹದಲ್ಲಿಯ, ದುಖಸೇತು,  ಬಿಂಕದಸಿಂಗಾರಿ, ಕಾರಿಹೆಗ್ಗಡೆಯ ಮಗಳು  ಉತ್ತಮ ಉಧಾಹರಣೆಯಾಗಿವೆ. ಕವನಗಳನ್ನು ಹೂಚ್ಚಹೂಸ
ಪರಿಭಾಷೆಯಲ್ಲಿ  ಕಟ್ಟಿದಂತು ನಿಜ. ಆದರೆ ಅದರೂಂದಿಗೆ  ಹಳೆಯ ಅಲಂಕಾರ  ಛಂದಸ್ಸಿನಿಂದ  ಬಿಡುಗಡೆ  ಹೂಂದಿದ  ಸರಳ ಭಾಷಾಭಿವ್ಯಕ್ತಿ  ಪ್ರಮುಖ  ಮಾಧ್ಯಮವಾಯಿತು. ಕಾಣಿಕೆ, ಎಂಬ ಕವನ ಇಂಗ್ಲೀಷಗೀತಗಳು ಕವನ ಸಂಗ್ರಹದಲ್ಲಿಯ ವಿಶೇಷ ಕವನವಾಗಿದೆ.

ಕಾಣಿಕೆ
– ಬಿ.ಎಂ.ಶ್ರೀಕಂಠಯ್ಯ

ಮೂದಲು ತಾಯ ಹಾಲು ಕುಡಿದು
ಲಲ್ಲೆಯಿಂದ ತೂದಲು ನುಡಿದು.
ಕೆಳೆಯರೂಡನೆ ಬೆಳೆದು ಬಂದ
ಮಾತದಾವುದು
ನಲ್ಲೆಯೂಲವ ತೆರೆದು ತಂದ
ಮಾತದಾವುದು

ಸವಿಯ ಹಾಡ, ಕಥೆಯ ಕಟ್ಟಿ
ಕಿವಿಯಲೆರೆದು ಕರುಳ ತಟ್ಟಿ
ನಮ್ಮ ಜನರು ನಮ್ಮ ನಾಡು
ಎನಿಸಿತಾವುದು
ನಮ್ಮಕವಿಗಳೆಂಬ  ಕೋಡು 
ತಲೆಗದಾವುದು

ಕನ್ನಡ  ನುಡಿ  ನಮ್ಮಹೆಣ್ನು
ನಮ್ಮತೋಟದಿನಿಯ  ಹಣ್ಣು
ಬಳಿಕ ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಹೂಸೆದು ರಸದ  ಬಳ್ಳಿ ಹಣ್ಣು
 ಓಳಗೆ ಸುಳಿದಳು

ಪಡುವ ಕಡಲ ಹೂನ್ನ ಹೆಣ್ಣು
ನನ್ನ ಜೀವದುಸಿರು ಕಣ್ಣು
ನಲಿಸಿ ಕಲಿಸಿ  ಮನವನೂಲಿಸಿ
ಕುಣಿಸಿತಿರುವಳು.
ಓಮ್ಮೆಇವಳು ಓಮ್ಮೆಅವಳು 
ಕುಣಿಸಿತಿರುವಳು

ಹೀಗೆ ನನಗೆ ಹಬ್ಬವಾಗಿ
ಇನಿಯರಿಬ್ಬರನ್ನು ತೂಗಿ
ಇವಳ ಸೂಬಗನವಳು ತೂಟ್ಟು
ನೋಡಬಯಸಿದೆ.
ಅವಳ ತೂಡಿಗೆ ಇವಳಿಗಿಟ್ಟು
ಹಾಡಬಯಸಿದೆ.

ಬಲ್ಲವರಿಗೆ  ಬೆರಗೆ  ಇಲ್ಲಿ?
ಅರಿಯದವರು ನಾಲ್ವರಲ್ಲಿ
ಕಳೆಯ  ಬೆಳಕು ಹೂಳೆಯಲೆಂದು
ದಣಿದುಹೋದೆನು
ಬಡವನಳಿಲು  ಸೇವೆಯಂದು 
ಧನ್ಯನಾದೆನು.


ಈ  ಮೇಲಿನ  ಕವನವನ್ನು ಓದಿದಾಗ  ಆಗಿನ ಲೇಖಕರಲ್ಲಿ ಏನೋ  ಹೂಸತನದ  ಭರ್ಜರಿ ಅಪೇಕ್ಷೆ  ತುಂಬಿ ತುಳುಕುತ್ತಿತ್ತು  ಏಂದು ಅನಿಸುವುದು. ಅದನ್ನು  ಅಭಿವ್ಯಕ್ತಿಸಲು  ಮಾರ್ಗವನ್ನು ಅರಸುತ್ತಿದ್ದರು. ಪಾಶ್ಚಾತ್ಯ  ರೋಮ್ಯಂಟಿಕ  ಕಾವ್ಯಗಳ, ಪ್ರಭಾವದೋಂದಿಗೆ ಬದಲಾವಣೆಯ  ಆತುರತೆ  ಮತ್ತು ಅಗತ್ಯತೆ‌  ಕಾಣಸಿಗುತ್ತದೆ.
ಆಧುನಿಕ ಕನ್ನಡ ಕಾವ್ಯದ  ಶುಭಾರಂಭದ ಅರ್ಥಪೂರ್ಣ ಉಧಾಹರಣೆಯಾಗಿ‌ ,ಬೀ. ಎಂ. ಶ್ರೀಯವರ ಇಂಗ್ಲೀಷ ಗೀತಗಳು  ಎಂಬ ಕಾವ್ಯಸಂಗ್ರಹ  ಪ್ರಥಮ  ಸ್ಥಾನದಲ್ಲಿ  ಕಂಡುಬರುವುದು.       

                                                             



 ಹೂಸಗನ್ನಡದ ಕಾಲ ಒಟ್ಟಾರೆ ಕನ್ನಡ  ಸಾಹಿತ್ಯಿಕ ಪರಿವರ್ತನೆಯ  ಒಂದು  ಪರ್ವವೆನಿಸುವದು. ಸಾಮಾಜಿಕ, ಶೈಕ್ಷಣಿಕ ಸಾಂಸಕ್ರ್ತತಿಕ  ಬದಲಾವಣೆಯೋಂದಿಗೆ, ಪ್ರಜಾಪ್ರಭುತ್ವದ ‌ ವಾತಾವರಣ, ಭಾವಲಹರಿಗೆ  ಮತ್ತು ನಿಷ್ಚಿಂತ  ಚಿಂತನೆಗೆ ಅನುವು ಮಾಡಿಕೋಟ್ಟವು. ಪದವಿನ್ಯಾಸ, ಅಭಿವ್ಯಕ್ತಿ, ಸುಲಭ, ಸರಳ ಶಬ್ದಾವಳಿಗಳ  ಪ್ರಯೋಗ  ಕ್ಲಿಷ್ಟಕರವಾದ   ಭಾಷೆಯಿಂದ‌  ಕಳಚಿಕೋಂಡು  ಹೂಸಗನ್ನಡ  ಹೂಸಗಾಳಿಗೆ  ಮೈಯೂಡ್ಡಿಕೂಂಡು ಕಾವ್ಯಾನುಭೂತಿಯ  ರಮ್ಯತೆಯನ್ನು  ಆನಂದಿಸತೂಡಗಿತು

ಬಿ. ಎಂ. ಶ್ರೀ. ಯವರ ಸರಳ ಕನ್ನಡ  ಮಾಸ್ತಿವೆಂಕಟೀಶ ಅಯ್ಯಂಗಾರ ಅವರ ಮೈಸೂರು ಕನ್ನಡ,  ಕಡ್ಲೆಂಗೋಡು ಶಂಕರಭಟ್ಟರ ದೇಶೀಯ ಭಾಷೆಯ  ಸಂಸ್ಕ್ರ್ರತ ಪ್ರಭಾವ , ಮತ್ತು ಗೋವಿಂದ  ಫೈ ಅವರದು  ಹೂಸಗನ್ನಡದಲ್ಲೂ‌  ಹಳಗನ್ನಡದ  ಪ್ರತಿಬಿಂಬ  ಎದ್ದು ಕಾಣುವುದು.  ಹೂಸಗನ್ನಡದ  ಕಾಲದಲ್ಲಿ  ಕುವೆಂಪು   ಅವರ  ಕಾವ್ಯ
ಸಹಜವಾಗಿ  ಹೂರಹೂಮ್ಮಿತು. ಭಾವಗೀತಾತ್ಮಕವಾದ  ಅವರ ಕಾವ್ಯ
ಸಮಕಾಲೀನಜೀವನದ  ಎಲ್ಲ ಅಂಶಗಳನ್ನು  ಪ್ರತಿನಿಧಿಸುತ್ತದೆ .ಹೀಗಾಗಿ
ಹೂಸಗನ್ನಡ  ಸಾಹಿತ್ಯಕ್ಕೆ  ಕುವೆಂಪು  ಅವರ  ಕೂಡುಗೆ ‌ವಿಶಿಷ್ಠವಾಗಿದೆ.       
ಬೇಂದ್ರೆಯವರ  ನಿರಂತರವಾದ  ಕಾವ್ಯಸಾಧನೆ,  ಕಾವ್ಯಪ್ರೇರಣೆ  ಹೂಸಗನ್ನಡ  ಸಾಹಿತ್ಯದಲ್ಲಿ ಅದ್ವೀತಿಯವಾದ ಕಾವ್ಯಪ್ರವಾಹವಾಗಿ ಪ್ರವಹಿಸಿತು. ಅಗಾಧವಾದ ಕಾವ್ಯವಸ್ತು ಇವರ ಕವಿತ್ವದಲ್ಲಿತ್ತು ನಿಸರ್ಗಸೌಂದರ್ಯ ಗಂಡು ಹೆಣ್ಣಿನ ಪ್ರೀತಿ ಅನುರಾಗ, ಸಾಮಾಜಿಕ ಮತ್ತು ಕೌಟುಂಬಿಕ ಬದುಕಿನ ಸಮಸ್ಯೆಗಳು , ರಾಜ್ಯ ಮತ್ತು ರಾಷ್ರಪ್ರೇಮದ ಪ್ರಜ್ಞೆಯನೂಳಗೂಂಡ ಹೂಸಗನ್ನಡದ, ಹೂಸಲಯದೂಂದಿಗೆ ಹೂಸಗನ್ನಡದ  ಬಹುಮುಖ್ಯ ಕಾವ್ಯಗಳು ಜಾನಪದ ಮತ್ತು ಶಿಷ್ಟಭಾಷೆಯ ಸುಂದರ ಸಮ್ಮಿಳನದೂಂದಿಗೆ ಮೆರಗು ಪಡೆದಿದೆ.         ‌                                                                           

ವಿನಾಯಕ,‌ ರಂ ಶ್ರೀ. ಮುಗಳಿ, ಆನಂದಕಂದ, ವೀ.ಸೀತಾರಾಮ್ಮಯ್ಯ, ಪು.ತಿ.ನ.  ಜಿ.ಪಿ.ರಾಜರತ್ನಂ, ಕೆ. ಎಸ್ ನರಸಿಂಹಸ್ವಾಮಿ, ದಿನಕರದೇಸಾಯಿ,  ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ಮುಂತಾದವರ ಯೋಗದಾನದಿಂದ ಹೂಸಗನ್ನಡಸಾಹಿತ್ಯದ ಶ್ರೀಮಂತಿಕೆ ಸುಸಂಪ್ಪನ್ನವಾಯಿತು.
—————————————————————————-




Leave a Reply

Back To Top