ಶಿಕ್ಷಕನಿಗೆ ಒಂದು ಒಳ್ಳೆಯ ಭೋದನಾ ಸಾಮಗ್ರಿ

ಪುಸ್ತಕ ಸಂಗಾತಿ

ಶಿಕ್ಷಕನಿಗೆ ಒಂದು ಒಳ್ಳೆಯ ಭೋದನಾ ಸಾಮಗ್ರಿ

೧೦೧ ವಿಜ್ನಾನದ ಒಗಟುಗಳು

          (ಪುಸ್ತಕ ಪರಿಚಯ)

೧೦೧ ವಿಜ್ನಾನದ ಒಗಟುಗಳು

          (ಪುಸ್ತಕ ಪರಿಚಯ)

ಭೋದಕನಿಗೆ  ತನ್ನ ಭೋದನೆಯಲ್ಲಿ ವಿಧ್ಯಾರ್ಥಿ ಗಳ ಮನಸ್ಸನ್ನು  ವಿಷಯದತ್ತ ಕೇಂದ್ರೀಕರಿಸುವುದು  ಸುಲಭದ ಮಾತಲ್ಲ. ಫೇಸಬುಕ್ಕು, ವ್ಯಾಟ್ಸಾಫು , ಇಂಟರನೆಟ್ಗಳ ಹಾವಳಿ ಇರುವ ಈ ಕಾಲಘಟ್ಟದಲ್ಲಿ  ವಿಧ್ಯಾರ್ಥಿ ಯನ್ನು  ಪಾಠಕ್ಕೆ ಅಣಿಗೊಳಿಸುವುದು  ಬಹು ಕಷ್ಟದ ಕೆಲಸ. ಆದರೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ ಎಂಬುದೂ ಅಷ್ಟೇ ನಿಜ.

ಬಾಲ್ಯದಲ್ಲಿ ನಾವೆಲ್ಲ ಒಗಟು ಕೇಳಿ ಹೇಳಿ ಬೆಳೆದವರಾಗಿದ್ದೇವೆ. ‘ ಒಗಟು’ ಎಂದರೆ – ಎಷ್ಟು ರಹಷ್ಯ,   ಎಷ್ಟು ಕುತುಹಲ ….!!

ಒಗಟು ಹೇಳುತ್ತಾ ಇದ್ದಂತೆ  ಕೇಳುವವರು : ಅಂದರೆ……ಇದು ಏನು..! ?

ಅಂದರೆ ……ಅದು  ಏನು…! ?

ಎಂದು ಮನಸ್ಸಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಉತ್ತರಗಳನ್ನು ಹುಡುಕುತ್ತಾನೆ. ಹೀಗೆ ‘ ಒಗಟಿಗೆ’ ಅಧಮ್ಯ’ ಕಲಿಕಾ ಸಾಮರ್ಥ್ಯವಿರುವುದರಿಂದ  ಶಿಕ್ಷಕ ‘ ಒಗಟ’ ನ್ನು   ಒಂದು ಬೋಧನಾ ಸಾಮಗ್ರಿಯಾಗಿ ಬಳಸಬಹುದು.

ಬೋಧಕನು  ತನ್ನ ಪಾಠ ಪೂರ್ವದಲ್ಲಿ ಒಂದು ಒಗಟನ್ನು ಹೇಳಿದರೆ – ವಿಧ್ಯಾರ್ಥಿ ಗಳು ಒಗಟಿನಲ್ಲಿಯ ಸೂಚಕ ಪದಗಳಿಂದ  ಹಾಗೂ ಸೂಚಕ ಅರ್ಥ ಗಳಿಂದ ಆಧರಿಸಿ  ಪರಸ್ಪರ ಆಲೋಚಿಸಿ , ತರ್ಕಿಸಿ , ಹೋಲಿಸಿ , ಅನ್ವಯಿಸಿ  ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.ಇವೆಲ್ಲಾ ಕಲಿಕಾ ಪ್ರಕ್ರಿಯೆಗಳಾಗಿದ್ದು ವಿಧ್ಯಾರ್ಥಿ ತನ್ನನ್ನು ಪೂರ್ತಿಯಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡಿರುತ್ತಾನೆ. ಹೀಗಾಗಿ ತರಗತಿ ಶಾಂತಿ ಮತ್ತು ಶಿಸ್ತಿನಲ್ಲಿ ಉಳಿಯುತ್ತದೆ.

ವಿಶೇಷವಾಗಿ ಒಗಟುಗಳನ್ನು ಕಠಿಣ ವಿಷಯಗಳ ಬೋಧನೆಗೆ  ಬಳಸಬಹುದೆಂದು ಪ್ರೋ. ವೆಂಕಟೇಶ. ಹುಣಸಿಕಟ್ಟೆಯವರು ತೋರಿಸಿದ್ದಾರೆ.ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದವರು.ಇವರು ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ ನಿವೃತ್ತಿ ರಾದ  ಈಗ ವಿಶ್ರಾಂತಿ ಜೀವನ ಕಳೆಯುತ್ತಿದ್ದಾರೆ. ಸ್ವಭಾವತಃ ಸ್ನೇಹ ಜೀವಿಗಳಾದ ಲೇಖಕರು ಸಾಹಿತಿಗಳಿಗೆ ಮಾರ್ಗದರ್ಶನ ನೀಡುತ್ತಾ ; ಮನೆಯಲ್ಲಿಯೂ ಮಗ ಮತ್ತು ಸೊಸೆಯ ಗೌರವಾದರಕ್ಕೆ ಪ್ರಸ್ತುತ ಕಾಲದಲ್ಲಿಯೂ ಪಾತ್ರರಾಗಿದ್ದಾರೆ.

ಇವರು ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದು ; ಅನೇಕ ಕಥೆ ಕಾದಂಬರಿ ಹಾಗೂ ಮಕ್ಕಳ ಕವಿತೆಗಳನ್ನು ಬರೆದು ಕನ್ನಡಾಂಬೆಯ ಮುಡಿ ಸಿಂಗರಿಸಿದ್ದಾರೆ.

ಇವರ ‘ ಬಲಿ’ ಎಂಬ ಕಾದಂಬರಿ ನವ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಸಾರವಾಗಿದೆ. ‘ಮಿಠಾಯಿ’ ಎಂಬ ಕವಿತೆ ೨೦೧೯ರಲ್ಲಿ ಸಾಹಿತ್ಯ ಅಕ್ಯಾಡಮಿ ಯ ಮಕ್ಕಳ ಸಾಹಿತ್ಯ ಸಂಪಾದನೆಯಲ್ಲಿ ಕವಿತೆಗಳ ವಿಭಾಗಕ್ಕೆ ಸೇರಿಕೊಂಡಿದೆ.

ಇವರು  ೧೯೯೩ರಲ್ಲಿ ಬರೆದ ‘೧೦೧ ವಿಜ್ನಾನದ ಒಗಟು ‘ ಗಳೆಂಬ ಕಿರುಹೊತ್ತಿಗೆಯು ಹನ್ನೆರಡು ಬಾರಿ ನವ ಕರ್ನಾಟಕ ಪಬ್ಲಿಕೇಷನ್ನಿನಿಂದ ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಈ ಹೊತ್ತಿಗೆಯ ಕೆಲವು ಒಗಟುಗಳನ್ನು ಮಹಾಷ್ಟ್ರ ಸರಕಾರವು ತನ್ನ ೪, ೫ ನೇ ತರಗತಿಗೆ ಪಠ್ಯವಾಗಿಸಿದೆ ಎಂಬುದು ಹೆಗ್ಗಳಿಕೆಯು.

ಪ್ರಸ್ತುತ ಪುಸ್ತಕವು ರಸಾಯನ ಶಾಸ್ರ್ತದ ಅನೇಕ ವಿಷಯಗಳ ಒಗಟುಗಳನ್ನು ಹೊಂದಿದೆ.

ಶಿಕ್ಷಕನಾದವನು ತರಗತಿಯಲ್ಲಿ  , “ಪ್ರಭಲ ನೈಟ್ರಿಕಾಮ್ಲವು  ಸುಡುವ ಗುಣ ಧರ್ಮವನ್ನು ಹೊಂದಿದೆ. ಇದು ತಾಮ್ರದೊಂದಿಗೆ ವರ್ತಿಸಿ ಕೆಂಪು ಅನಿಲವನ್ನು ಬಿಡುಗಡೆ ಮಾಡುತ್ತದೆ ” ಎಂದು ಹೇಳಿದರೆ ಪಾಠವು ನೀರಸವಾಗಿ ಪಾಠದಲ್ಲಿ ಮಗುವು ತೊಡಗಿಕೊಳ್ಳುವಿಕೆ ದುರ್ಭಲವಾಗುವುದು. ಅದೇ  ಭೋಧಕನಾದವನು ಈ ಕೆಳಗಿನಂತೆ ಲೇಖಕರು ಬರೆದಂತೆ ಒಂದು ಒಗಟನ್ನು ಹೇಳಿದರೆ ಪಾಠ ತುಂಬಾ ಆಸಕ್ತಿದಾಯಕವಾಗಿ ಪಾಠದಲ್ಲಿ ವಿಧ್ಯಾರ್ಥಿಯ ಭಾಗವಹಿಸುವಿಕೆ ಹೆಚ್ಚಾಗುತ್ತದೆ.

ಉದಾ: ” ಸುಡುವೆನಾದರೂ ಬೆಂಕಿಯಲ್ಲ.

ಮೈ ಹಳದಿಗೊಳಿಸುವೆ

ಆದರೂ ಅರಿಶಿನವಲ್ಲ.

ತಾಮ್ರದೊಡನೆ ಬೆರೆತು

ಕೆಂಗಂದು ಬಣ್ಣದ ಅನಿಲ ನೀಡುವೆ

ಹಾಗಾದರೆ ನಾನಾರು….?    ಉತ್ತರ ಪ್ರಭಲ ನೈಟ್ರಿಕಾಮ್ಲ.

ಈ ಕಿರು ಹೊತ್ತಿಗೆಯು ಕೇವಲ ರಸಾಯನ ಶಾಸ್ತ್ರಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಸಸ್ಯ ಶಾಸ್ತ್ರ , ಪ್ರಾಣಿಶಾಸ್ತ್ರ ಹಾಗೂ ದಿನ ನಿತ್ಯದ ವಸ್ತುಗಳನ್ನು ಬಳಸಿಕೊಂಡು ವೈವಿಧ್ಯಮಯವಾಗಿದೆ.

ಉದಾ: ಒಲವಿದೆ ; ಬಲವಿಲ್ಲ

ಯುಕ್ತಿಯಿದೆ ; ಶಕ್ತಿ ಇಲ್ಲ

ಬದುಕಬಲ್ಲೆ ; ಸ್ವಾತಂತ್ರ್ಯವಿಲ್ಲ

ಉಣಬಲ್ಲೆ ; ಉಣಿಸಲಾರೆ

ಹಾಗಾದರೆ ನಾನ್ಯಾರು….!!??      ಉತ್ತರ ‘ ಪರಾವಲಂಬಿ ಸಸ್ಯ ‘

ಅದರಂತೆ –

ಬೆಕ್ಕಿನ ಚಾಕ್ಯಚಕ್ಯತೆ ಇದ್ದರೂ

ಬೆಣ್ಣೆ ತಿನ್ನುವವ ನಾನಲ್ಲ

ಮೈ ಚರ್ಮಕ್ಕೆ  ಮರುಳಾದರೂ

ಸಾಕು ಪ್ರಾಣಿಯಲ್ಲ

ಕೆಣಕದೇ ಕಾಟ ಕೊಡುವವನಲ್ಲ.

ಓಟದಲ್ಲಿ ಮುಂದಿದ್ದರೂ ಕ್ರೀಢಾ ಪಟುವಲ್ಲ.

ಹಾಗಾದರೆ ನಾನ್ಯಾರು….!!??

ಉತ್ತರ : ‘ ಹುಲಿ ‘

ಅಲ್ಲದೇ ಇಲ್ಲಿ ಮನರಂಜನೆಯ ಒಗಟುಗಳಿಗೂ ಅವಕಾಶವಿದೆ.

ಉದಾ: ಆಟಕ್ಕುಂಟು  ; ಊಟಕ್ಕಿಲ್ಲ

ನೋಟವುಂಟು ; ಮಾತಿಲ್ಲ

ಓಟವುಂಟು ; ಜೀವವಿಲ್ಲ

ಕಿವಿ ಹಿಂಡಿದರೆ ಸಾಕು ಕುಣಿಯಬಲ್ಲೆ

ನಗಬಲ್ಲೆ  ನಗಿಸಬಲ್ಲೆ

ನಾನಾರೆಂಬುದನ್ನು  ಹೇಳಬಲ್ಲಿರಾ…!!??

ಉತ್ತರ : ‘ಕೀಲು ಗೊಂಬೆ’

ಹೀಗೆ ಒಗಟುಗಳು ಸುಂದರ ಸರಳವಾಗಿದ್ದು ಅರ್ಥಪೂರ್ಣವಾಗಿವೆ. ಲೇಖಕರು ಬಳಸಿದ ಬಾಷೆ , ಶೈಲಿ ನವೀನವಾಗಿವೆ.    ಈ ಪುಸ್ತಕ ಕುರಿತು ಹೊಸದಿಗಂತದ ವಿ.ಗ.ನಾಯಕ ಹಾಗೂ ನವೋದಯ ಪತ್ರಿಕೆಯ ಅಭಿಪ್ರಾಯಗಳು  ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ.ಈ ಪುಸ್ತಕವನ್ನು ನವ ಕರ್ನಾಟಕ ಪಬ್ಲಿಕೇಷನ್ ಪ್ರಕಟಿಸಿದೆ.ಬೆಲೆ ೪೦ ರೂಗಳಿದ್ದು ೪೭ಪುಟಗಳನ್ನು ಹೊಂದಿದೆ . ಸುಂದರ ಹಾಗೂ ಅರ್ಥಪೂರ್ಣ ಒಗಟುಗಳನ್ನು ಕೊಟ್ಟ ಲೇಖಕರು ಅಭಿನಂದನಾರ್ಹರು.


ಯಮುನಾ.ಕಂಬಾರ

Leave a Reply

Back To Top