ಕವಿತೆ_ಅರ್ಥಮಾಡಿಕೊಳ್ಳದವರಿಗೆ

ಕಾವ್ಯ ಸಂಗಾತಿ

ಕವಿ ಮತ್ತು ಅನುವಾದಕರಾದ ತೇರಳಿ ಎನ್ ಶೇಖರ್ ಅವರ ಮಲಯಾಳಂನ ಪ್ರಸಿದ್ಧ ಕವಿ ದಿವಂಗತ ಡಿ. ವಿನಯಚಂದ್ರನ್ ಅವರ ಕವಿತೆ ಅರ್ಥಮಾಡಿಕೊಳ್ಳದವರಿಗೆ ಕವಿತೆಯ ಒಂದು ಅವಲೋಕನ.

ಅನಸೂಯ ಜಹಗೀರದಾರ

ಮಲಯಾಳಂ ಮೂಲ ಡಿವಿನಯಚಂದ್ರನ್

 ಅನುವಾದ -ತೇರಳಿ.ಎನ್.ಶೇಖರ್

ಕವಿ ಮತ್ತು ಅನುವಾದಕರಾದ ತೇರಳಿ ಎನ್ ಶೇಖರ್ ಅವರ ಮಲಯಾಳಂನ ಪ್ರಸಿದ್ಧ ಕವಿ ದಿವಂಗತ ಡಿ. ವಿನಯಚಂದ್ರನ್ ಅವರ ಕವಿತೆ ಅರ್ಥಮಾಡಿಕೊಳ್ಳದವರಿಗೆ ಕವಿತೆಯ ಒಂದು ಅವಲೋಕನ.

ಅನಸೂಯ ಜಹಗೀರದಾರ

ಕವಿತೆಮತ್ತುಬದುಕು ಅರ್ಥಮಾಡಿಕೊಳ್ಳಲು

ಈ ಕವಿತೆ- ವಾಚ್ಯಾರ್ಥ ಕವಿತೆ ಬಗೆಗೆ ಆದರೂ ಅದರ ವಿಸ್ತಾರ ಬಹುವ್ಯಾಪಕವಾಗಿದೆ. ಬದುಕೆಂಬ ಕವಿತೆ ಇದಾಗಿದೆ. ಅರ್ಥವಾಗದೇ ಅರ್ಥವಾಗಿದೆ ಎಂದವರು,ಅರ್ಥವಾದಂತೆ ನಾಟಕ‌ ಮಾಡುವವರು, ಅದಕ್ಕೊಂದು ಬೇರೆ ಅರ್ಥ ಕೊಡುವವರು, ಅಥವಾ ಹೀಗಿರಬೇಕಿತ್ತು ಹೀಗಿಲ್ಲ ಅನ್ನುವ ವಿಮರ್ಶಕರಿಗೊಂದು ಮಾತು ಇಲ್ಲಿದೆ.

ಇದ್ದುದನ್ನು ಇದ್ದ ಹಾಗೆ.ನೋಡಿ ನೈಜತೆಯನ್ನು ಅನುಭವಿಸಿ…ಇರಿ.ಅನ್ನುವ ಮಾರ್ಮಿಕ ಮಾತು ಇಲ್ಲಿದೆ. ಬೆಂಕಿ ನಿಮ್ಮದಾದರೂ ಕಿಂಚಿತ್ ಉಪಯೋಗ ಮತ್ತೊಬ್ಬರಿಗೂ ಹಂಚಿ.ಅನ್ನುವುದೊಂದು ಅದ್ಭುತ ಪ್ರಯೋಗ…!

ಇಲ್ಲಿ ಬೆಂಕಿ ಜೀವನಾನುಭವ ಇರಬಹುದು. ಅಥವಾ ಜ್ಞಾನ ಇರಬಹುದು, ಅಥವಾ ಕಾವ್ಯ ವಿಮರ್ಶಕರ ನುಡಿಯೂ ಇರಬಹುದು. ಆ ನುಡಿಯಲ್ಲಿ ಸೌಹಾರ್ದತೆ ಇರಲಿ ಅನ್ನುವ ಭಾವ ವ್ಯಕ್ತವಾಗಿದೆ.

ನಿಮಗೆಪರಿಚಿತನಲ್ಲದದಾರಿಹೋಕನಿಗೆಒಂದುಬಟ್ಟಲುಕಾಫಿಯನ್ನುಕುಡಿಸಿರಿ

ನಿಮ್ಮ ವಿಚಾರ.. ಬದುಕಿನ ಅನುಭವ ಸ್ಬಲ್ಪವಾದರೂ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಿ ಎಂದಂತೆ..! ಅಪರಿಚಿತನನ್ನೂ ಪರಿಚಿತನಾಗಿಸುವ #ವಸುದೈವ_ಕುಟುಂಬಕಂ ಪರಿಕಲ್ಪನೆ ಇಲ್ಲಿದೆ. ಇರಲಿ ಅಥವಾ ಕುರಿತೋದದೆಯ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಎಂದರೆ ನಮ್ಮ ಜನಪದರು. ಬದುಕಿನ ನೈಜ ಭಾಗವಾದವರು. ಅಂತಹ ಸಹೃದಯರಿಗೂ ಕಾವ್ಯ ರಸವ ಕುಡಿಸಿರಿ ಅನ್ನುವುದು.

ಹಾಗೆಯೇ ನಿಸರ್ಗದ ಮಡಿಲಲ್ಲಿ ನಡೆಯುವ ಎಲ್ಲ ಪ್ರಕ್ರಿಯೆಗಳನ್ನು ಗಮನಿಸಿ. ಅವಲೋಕಿಸಿ. ಇಲ್ಲಿ ಯಾವುದೂ ನಿಲ್ಲುವುದಿಲ್ಲ .ಯಾರ ಅಪ್ಪಣೆಯೂ ಇದಕ್ಕೆ ಕಾರಣವಲ್ಲ..! ನಡೆಯುವುದು ನಡೆಯುತ್ತಿರುತ್ತದೆ. ವೀಕ್ಷಣೆ ಅಷ್ಟೇ ನಮ್ಮದು ಹಾಗು ಅದರೊಂದಿಗಿನ ಗಮನ ನಮ್ಮದು..!

ಮೊದಲಹೂವುಬಿರಿಯುವುದನ್ನುತೋರಿಸಲುನೆರೆಮನೆಯಾಕೆಯನ್ನು_ಕರೆಯಿರಿ

ಇಲ್ಲಿ ಸಂಬಂಧಗಳ ಸ್ವಾರಸ್ಯ ಮತ್ತು ಸಾಮರಸ್ಯವಿದೆ.

ನೆರಮನೆಯಾಕೆ ನೆರೆದೇಶವಾಗಿರನಹುದು. ನೆರೆರಾಜ್ಯವಾಗಿರಬಹುದು. ಊರಾಗಿರಬಹುದು. ಮನೆಯಾಗಿರಬಹುದು.ಭಾಷಾ ಸಾಮರಸ್ಯವೂ ಆಗಿರಬಹುದು. ಬಿ.ಎಂ. ಶ್ರೀ. ಅವರ ಇವಳಉಡುಗೆಅವಳಿಗಿಟ್ಟುಅವಳತೊಡುಗೆಇವಳಿಗಿಟ್ಟುನಲಿದೆ ಅನ್ನುವುದು ಭಾಷಾ ಸಾಮರಸ್ಯವೇ ಆಗಿದೆ. ಇದನ್ನು ಈ ಅರ್ಥದಲ್ಲಿ ನಾನಿಲ್ಲಿ ವ್ಯಕ್ತಪಡಿಸಿರುವೆ

ವರ್ಷಕ್ಕೊಮ್ಮೆಮೂಕರಾಗಿನಾಡುಗಳನ್ನು_ಸುತ್ತಾಡಿರಿ

‘ದೇಶ ಸುತ್ತು-ಕೋಶ ಓದು’ ಅನ್ನುವಂತೆ ಪ್ರಯೋಗ ಶೀಲ ಜ್ಞಾನ ಅಥವಾ ನೈಜ ಜ್ಞಾನ ನಿಜವಾದ ಅರ್ಥದ ಅನುಭವಗಳ ಅನುಭಾವವಾಗಿದೆ.

ಪುಸ್ತಕೀಯ ಜ್ಞಾನ – ಬೆಂಕಿ ಸುಡುತ್ತದೆ ಎಂದು ಹೇಳಬಲ್ಲದು. ಅನುಭವ ಬೆಂದು ತೋರಿಸಬಲ್ಲದು

ಅನುಭವದ ಸರಮಾಲೆಯೇ ಜೀವನದ ಜ್ಞಾನಸಾರ ಅಥಯ ಕಲಿಕಾ ಜ್ಞಾನ ಅಥವಾ ಜೀವನ ಶಿಕ್ಷಣ ನೀತಿಯಾಗಿದೆ. ಅಲೆಮಾರಿಯಾಗಬೇಕು. ಅನುಭವಿಸಬೇಕು. ಏನೊಂದು ಮಾತನಾಡದೆ..! ದಿಟದ ಮಾತಿದು….ಅಂದಾಗ ಕವಿತೆ ಪರಿಪಕ್ವ…!! ಧಮನಿ ಧಮನಿಯಲ್ಲಿ ಅನುಭೂತಿ…! ಬದುಕೂ ಸಹ ಪರಿಪಕ್ವ..!

ಬಾಲ್ಯಕಾಲದಸಂಧಿಗೊಂದಿಗಳನ್ನು_ಸ್ಮರಿಸಿರಿ

ಕವಿತೆಯಲ್ಲಿ ಇವನ್ನೆಲ್ಲ ಹೆಕ್ಕಿ ನಾವು ತರುತ್ತೇವೆ. ನೆನಪಿಸಿಕೊಳ್ಳುತ್ತೇವೆ‌ . ಹಾಗೆಯೇ ಬದುಕೆಂಬ ಕವಿತೆಯಲ್ಲೂ ಆಗಾಗ ನೆನಪು ಮರುಕಳಿಸುವುದು ಕಾಣುತ್ತೇವೆ.

ವಸಂತದಲ್ಲಿಬೆಟ್ಟವಏರಿರಿ

ಕವಿತೆಯಲ್ಲಿ ವಸಂತ  ಹುಟ್ಟುಹಾಕುತ್ತೇವೆ ಸೃಜನಶೀಲತೆಯಲ್ಲಿ ಹಾಗೆಯೇಬದುಕಿನಲ್ಲಿಯೂ… ಸಹ..! ಚೈತ್ರ ಮತ್ತೇ ಮರು ಹುಟ್ಟು ಪ್ರಕೃತಿಗೆ. ಆ ಚೈತನ್ಯ ಪಲ್ಲವಿಸುವುದನ್ನು ನೋಡಬೇಕು. ಹರ್ಷಾನಂದ ಪಡೆಯಬೇಕು. ಧ್ಯಾನಸ್ಥ ಮನಸ್ಸು ಅಂತರಂಗದ ಶಿಖರವನ್ನು ಕಾಣುತ್ತೇವೆ

ಅಜ್ಜಿಯಪ್ರಸಾದಮತ್ತುಪ್ರೇಯಸಿಯಗಂಧ

ನಿಜ ಕವಿತೆಯ ಓದಿದ ವಿಮರ್ಶಕ ಹೇಳುವ ಅರ್ಥ

ಯಾವುದನ್ನು ಒಯ್ದು ಯಾವುದಕ್ಕೋ ತಳುಕು ಹಾಕಿ ಗುಲ್ಲೆಬ್ಬಿಸುವ ಗಲಭೆಗಳಾಗುವ ಹುನ್ನಾರಗಳಿವೆ. ಪೂರ್ವಾಗ್ರಹಗಳಿವೆ. ವಿಷಯಾಂತರ ಮಾಡಿ ಮೂಗಿನ ನೇರಕ್ಕೆ ನೋಡಿ ಅಥವಾ ಉದ್ದೇಶಪೂರ್ವಕವಾಗಿ ಆ ತರಹದ ತಳಕು ಹಾಕುವ ಪ್ರವೃತ್ತಿ ಜಾಯಮಾನ ಕಾಣುತ್ತಿದ್ದೇವೆ. ಹಾಗೆಯೇ ಬದುಕು ಯಾನದಲ್ಲೂ ಇದೆಲ್ಲ ಸರ್ವೇ ಸಾಮಾನ್ಯ ಅನ್ನುವಂತೆ ಕಾಣುತ್ತೇವೆ.

ರಾಜನಗ್ನನೆಂದಕಥೆ

ಈ ಕಥೆ  ಸಾಮಾನ್ಯವಾಗಿ  ಸಾರ್ವಕಾಲಿಕ…ರಾಜನ ವಿಶೇಷ ಬಟ್ಟೆ ತಯಾರಿಸಿ ಕೊಟ್ಟ ದರ್ಜಿ ತನ್ನ ಅತೀ ಜಾಣತನವನ್ಜು ಪ್ರಯೋಗಿಸಿ ಎಲ್ಲರ ಮೂರ್ಖರಾಗಿಸುವಂತೆ..! ರಾಜನೂ ಸೇರಿ…ಹಾಗೆಯೇ

ತಿಳಿಯದವ ತಿಳಿದಂತೆ ವರ್ತಿಸುವುದು. ಸಮೂಹ ಸನ್ನಿಗೊಳಗಾಗುವುದು. ಅಂಧಾನುಕರಣೆ.

ತಿಳಿಯಬಲ್ಲೆವು ತಿಳಿದಿದ್ದೇವೆ ಅನ್ಜುವ ಅಹಮ್ಮಿನ ಒಣ ಪ್ರತಿಷ್ಠೆಯ ಅಂಧಾನುಕರಣೆ ಆಗಿದೆ. ಕವಿತೆ ತಿಳಿದಿದ್ದೇವೆ ಅಂದುಕೊಂಡವರೂ ಕೊಡುವ ಹೇಳಕೆ ಅಥವಾ ವಿವರಣೆ..! ಅದೇ ರೀತಿ ಬದುಕ ಕವಿತೆಯಲ್ಲೂ..!

ಬ್ರಹ್ಮನಹಾಗೆವಿನಯವಂತನಾಗಿರಿ

ಪ್ರತಿ ಸೃಷ್ಟಿ ಸೃಜಿಸಿದ ಮೇಲೆ ನಿಯಮದ ಮೇಲೆ ಅಥವಾ ಸ್ಥಿತಿಯ ಮೇಲೆ ಅದು ಅವಲಂಬಿತ..! ಹುಟ್ಟು ಅಥವಾ ಸೃಷ್ಡಿಯಿಂದಲ್ಲ..! ಸೃಷ್ಟಿ, ಸ್ಥಿತಿ, ಲಯ ದ ಕಲ್ಪನೆ ಪರಿಕಲ್ಪನೆ ಇಲ್ಲಿ ಇದೆ.

ವಾಚ್ಯಾರ್ಥದಲ್ಲಿ ಕವಿತೆ ಹುಟ್ಟಿದ್ದರೂ ಸಾಹಿತ್ಯ ಸೃಜಿಸಿದ್ದರೂ ಬಹು ನಿರೀಕ್ಷೆ ಇಟ್ಟಕೊಳ್ಳದೇ ಸುಮ್ಮನಿದ್ದುಬಿಡಿ. ಸ್ಥಿತಿ ಅದನ್ನು ನೋಡಿಕೊಳ್ಳುತ್ತದೆ ಅಂದಂತೆ…!

ಸೂರ್ಯಕಿರಣಗಳನ್ನುಹಿಡಿದುಬರುವಪುಟ್ಟಕಂದಮ್ಮಗಳಮುಂದೆಮಂಡಿಯೂರಿರಿ

ಮಕ್ಕಳ ಮುಗ್ಧತೆ…ಮುಗ್ಧತೆಯಲ್ಲಿನ ಸೊಗಡು

ಆ ನಗು ‌..ಆ ಖುಶಿ..ಆ ನೆಮ್ಮದಿ..! ಮತ್ತೆಲ್ಲಿ ಸಿಗಲು ಸಾಧ್ಯ…! ಕವಿತೆಯಲ್ಲೂ ಹಾಗು ಬದುಕಿನಲ್ಲೂ..!

ರಜೆಪಡೆದುಕೊಂಡುಕನಸು_ಕಾಣಿರಿ

ಒಂದಿಷ್ಟು ಮನದ ಬೇಗುದಿ ಕಳೆಯಲು..‌

ಇಲ್ಲದ್ದನ್ನು ಕಣ್ಮುಚ್ಚಿ ಪಡೆಯಲು ..ಮಾನಸಿಕ ಸ್ವಾಸ್ಥ್ಯ ಪಡೆಯಲು…ಬದುಕ ಕ್ಷಣಗಳನ್ನು ಆಸ್ವಾದಿಸಿ..!!

ಅನ್ನುವ ತಾತ್ಪರ್ಯವಿದು…!!

ಅದೇ ರೀತಿ ಕವಿತೆಯಲ್ಲೂ ಕನಸಿನ ಬಣ್ಣಗಳಿವೆ.

ಕವಿತೆಯಲಿ ಕನಸುಗಳಿವೆ. ನೆನಿಕೆಗಳಇವೆ.!

ಕವಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾನೆ. ಅನುಭಾವದಲಿ, ಅನುಭವದಲಿ ಅದನ್ನೆಲ್ಲ ಹಿಡಿದು ತರುತ್ತಾನೆ. ಕವಿತೆಯಲಿ ಎಳೆ ಎಳೆಗಳಂತೆ ನೇಯುತ್ತಾನೆ

ಇದೆಲ್ಲ ಅವನಿಗಾಗಿ ಮನಃತೃಪ್ತಿಗಾಗಿ ಮತ್ತೊಬ್ಬರ ಖುಶಿ ಪಡಿಸಲು ಅಥವಾ ದುಃಖಿಸಲೂ ಅಲ್ಲ ಕವಿತೆ ಎಂದರೆ ಕವಿಯ ಒಳತುಡಿತಗಳ ಅನಾವರಣವೇ ಆಗಿದೆ. ಎದೆ ಮಿಡಿತದ ಲಯವಾಗಿದೆ. ಕವಿಯೇ ಕವಿತೆಯಾಗಿದೆ.

ಹಾಗೆಯೇ ಬದುಕುವುದು ನಮಗಾಗಿ.. ಮತ್ತೊಬ್ಬರನ್ಜು ಅದೆಷ್ಟು ತೃಪ್ತಿ ಪಡಿಸಲು ಸಾಧ್ಯ..! ನಮ್ಮ ಜೀವನ ನಮ್ಮದು. ಅವರಿಗೆ ಅವರವರದೇ ಆದ ಭಾವ ವಿಭಾವಗಳ ಸಮ್ಮಿಳಿತ ಏರಿಳಿತ ಇವೆ.

#ಕವಿತೆಯನುವಿಮರ್ಶಕನಿಗೆಒಪ್ಪಿಸುವುದು

ಸಹೃದಯರಿಗೆ‌ ಓದುಗರಿಗೆ ಒಪ್ಪಿಸುವುದು ಇದೇ ಚೆನ್ನವಾದುದು..!

#ವಿಮರ್ಶಕನಿಗೊಪ್ಪಿಸಿನದಿಯಲ್ಲಿನಕ್ಷತ್ರತುಂಬಿಕೊಳ್ಳುವುದನ್ನುವೀಕ್ಷಿಸಿರಿ

ಕಟ್ಟ ಕಡೆಗಿನ ತತ್ವ ಇದು..! ಇಲ್ಲಿಯ ವಿಮರ್ಶಕ ಬೇರಾರು ಅಲ್ಲ #ಅವನೇ…!! ಕವಿತೆ ಪೂರ್ಣಗೊಳ್ಳುತ್ತದೆ. ಅದರೆ ಅದರ ಹಪ ಹಪಿ ದಾಹ ಅಪೂರ್ಣವಾಗಿ ಇದ್ದೇ ಇರುತ್ತದೆ…..ನಿಜ ಬದುಕೇ ಕವಿತೆಯಾದಾಗ..!! ಅಥವಾ ಕವಿತೆ ಬದುಕಿನ ಕನ್ನಡಿಯಾದಾಗ..ಮಾತ್ರ ಸಾಧ್ಯದ ಮಾತು..!

ಇದು #ಕವಿತೆಮತ್ತುಬದುಕುಎರಡನ್ನುಅರ್ಥೈಸಿಕೊಳ್ಳುವವರಿಗೆ ನನ್ನ ಪುಟ್ಟ ಬರಹ..!

ನೈಜ ಅನಿಸುವಷ್ಟು ಅನುವಾದದಲ್ಲಿ ಪಳಗಿದ ತೇರ್ ಳಿ ಎನ್. ಶೇಖರ್ ಅವರಿಗೂ ಮತ್ತು ಎಲ್ಲ ಸಹೃದಯ ಓದುಗರಿಗೂ ಧನ್ಯವಾದಗಳು🙏

ಕವಿತೆಯ ವಿಶ್ಲೇಷಣೆ :


ಕವಿತೆ_ಅರ್ಥಮಾಡಿಕೊಳ್ಳದವರಿಗೆ

ನೀವು ಒಬ್ಬರೇ ಬೆಂಕಿಯನ್ನು ಉರಿಸಿರಿ.

ನಿಮಗೆ ಪರಿಚಿತನಲ್ಲದ ದಾರಿಹೋಕನಿಗೆ

ಒಂದು ಬಟ್ಟಲು ಕಾಫಿಯನ್ನು ಕುಡಿಸಿರಿ.

ಎಳೆಬಿಸಿಲನ್ನು ಕಾಯುತ್ತಿರುವ ಬೆಕ್ಕನ್ನು

ನೋಡುತ್ತ ಸುಮ್ಮನೇ ಕುಳಿತಿರಿ.

ನಿಮ್ಮ ಮಡಿಲಲ್ಲಿರುವ ಪುಸ್ತಕವನ್ನು ದೂರ ಬಿಸಾಡಿ

ಹದ್ದು ತಿರುಗುತ್ತ ಸುತ್ತುಹಾಕುವುದನ್ನು ನೋಡಿರಿ.

ಒಂದು ಗಿಡವನ್ನು ನೆಟ್ಟು ಬೆಳೆಸಿ

ಮೊದಲ ಹೂವು ಬಿರಿಯುವುದನ್ನು ತೋರಿಸಲು

ನೆರೆಮನೆಯಾಕೆಯನ್ನು ಕರೆಯಿರಿ.

ವಸಂತದಲ್ಲಿ ಬೆಟ್ಟವನ್ನು ಏರಿರಿ.

ಶುಕ್ಲಪಕ್ಷದಲ್ಲಿ ಜಾಲಗಾರರ ಜೊತೆಗೂಡಿ

ಸಮುದ್ರಕ್ಕೆ ಹೋಗಿರಿ.

ಅಜ್ಜಿಯ ಪ್ರಸಾದದ ಮತ್ತು ಪ್ರೇಯಸಿಯ ಗಂಧದ

ಸಂದರ್ಭವನ್ನು ಬರೆದು ಸ್ವಾರಸ್ಯ ಸ್ಪಷ್ಟಪಡಿಸದಿರಿ.

ಗೆಳೆಯನ ಸಾವು ಸಂಭವಿಸಿದ ಮೇಲೆ

ಬಿರುಮಳೆಯಲ್ಲಿ ಒಬ್ಬಂಟಿ ನಡೆಯುತ್ತ ಸಾಗಿರಿ.

ಆಸ್ಪತ್ರೆಯಲ್ಲಿ ಗಾಯಕನ ಉಸಿರು ಮರಳಿ ಗಳಿಸಲು

ಏಳು ಹಗಲು ರಾತ್ರಿ ವ್ರತ ಕೈಗೊಳ್ಳಿರಿ.

ಚೀಟಿಯನ್ನೂ ಕೋಳಿಮೇವನ್ನೂ ಎಸೆದು

ಅಮ್ಮನ ಸನಿಹದಲಿ ಕುಳಿತು

ಅದಿತ್ಯನನ್ನೂ ಗರುಡನನ್ನೂ ಧ್ಯಾನಿಸಿರಿ.

ನುಡಿಯ ಮುಂದೆ

ಬ್ರಹ್ಮನ ಹಾಗೆ ವಿನಯವಂತರಾಗಿರಿ.

ವರ್ಷಕ್ಕೊಮ್ಮೆ

ಮೂಕರಾಗಿ ನಾಡುಗಳನ್ನು ಸುತ್ತಾಡಿರಿ.

ಕಲ್ಲಿನಲ್ಲಿ ಕೆತ್ತಿದ ಸೂರ್ಯರಥವನ್ನು ಕಾಣಿರಿ.

ಕಪ್ಪುಪಕ್ಷಿಯ ಭೈರವಿಯನ್ನು ಆಲಿಸಿರಿ.

ಬಾಲ್ಯಕಾಲದ ಸಂಧಿಗೊಂದಿಗಳನ್ನು ಸ್ಮರಿಸಿರಿ.

ಸೂರ್ಯಕಿರಣವನ್ನು ಹಿಡಿದು ಬರುವ

ಈ ಪುಟ್ಟ ಕಂದಮ್ಮಗಳ ಮುಂದೆ ಮಂಡಿಯೂರಿರಿ.

ರಜೆ ಪಡೆದುಕೊಂಡು ಕನಸು ಕಾಣಿರಿ.

ಕನ್ನಡಿಯನ್ನು ವಿಮರ್ಶಕನಿಗೊಪ್ಪಿಸಿ

ನದಿಯಲ್ಲಿ ನಕ್ಷತ್ರ ತುಂಬಿಕೊಳ್ಳುವುದನ್ನು ವೀಕ್ಷಿಸಿರಿ.


ಮಲಯಾಳಂ ಮೂಲ ಡಿ_ವಿನಯಚಂದ್ರನ್

ಅನುವಾದ -ತೇರಳಿ.ಎನ್.ಶೇಖರ್

Leave a Reply

Back To Top