ಕಾವ್ಯ ಸಂಗಾತಿ
ಹೈಕುಗಳು
ನಿಂಗಮ್ಮ ಭಾವಿಕಟ್ಟಿ
ಅಡ್ಡ ಬಂದಿತು
ಬೆಕ್ಕು, ಕಾರು ನಿಲ್ಸಿದೆ
ಏನೂ ಆಗ್ಲಿಲ್ಲ
ಅಗತ್ಯ ಮೀರಿ
ಸ್ನೇಹ ಪ್ರೀತಿ ತೋರಿದ್ರೆ
ಬೆಲೆ ಕಡಿಮೆ
ನಿರೀಕ್ಷೆ ಬಿಡು
ಅಲ್ಲೇ ನೋವಿದೆ. ನಿನ್ನ
ನಂಬ್ತೀಯ ತಾನೇ?
ಪರಿತಾಪವ
ನುಂಗು, ನಗುವ ಹಂಚು
ಆಗ್ಲೇ ಆನಂದ
ಮಾನವತೆಯ
ಭಾಷಣದಲಿ ಸಾವು
ಕಾಲ್ತುಳಿತಕೆ
ಆಸ್ಪತ್ರೆಯಲಿ
ಇದ್ದೋರು ಅರಾಮಾದ್ರೆ
ಮನೇಲಸ್ತ್ವಸ್ತ
ಕಣ್ಣು ಮಂಜಾಯ್ತಾ
ನೋಡಲ್ಲಿ ಅವನಿಗೆ
ಕಣ್ಣೇ ಇಲ್ವಂತೆ.
ಒಂಭತ್ತು ಆರು
ಏಜಲ್ಲ ಅದು ಪಕ್ಕಾ
ಟ್ರಾಫಿಕ್ ಟೈಮು
ಆ ಸಪ್ಪೆ ಸುದ್ದಿ
ಊರೋರ ಬಾಯ್ಗೆಬಿದ್ದು
ಘಮ್ಮೆಂದಿತಂತೆ
ಹೆರಿಗೆ ಅಂದ್ರೆ
ಬರೀ ಸಿಸೇರಿಯನ್
ನಾರ್ಮಲ್ಲೇ ಇಲ್ಲ
One thought on “ಹೈಕುಗಳು”