ಅಂಕಣ ಸಂಗಾತಿ

ಸಕಾಲ

ಯೋಗಾಯೋಗದೈವಸಂಕಲ್ಪ

Kiran Kumar S on Twitter: "Congress minister Anjaneya says only lazy people do  Yoga. He has insulted the greatest Kannada actor Dr. Raj Kumar :(  http://t.co/A10yrt6k2m" / Twitter

ಯೋಗೇನ ಚಿತ್ತಸ್ಯ ಪದೇನ ವಾಚಾಂ

ಮಲಂ ಶರೀರಚ್ಚಶ್ಯ ವೈದ್ಯಕೇನ

ಯೋಪಾ ಕರೋಕ್ತಂ ಪ್ರವರಂ ಮುನೀನ

ಪತಂಜಲಿಂ ಪ್ರಾಂಜಲಿನ್ ರಾನತೋಸ್ಮಿ

ಎಂಬ ಶ್ಲೋಕ ಪಠಣದ ಮೂಲಕ ಯೋಗಾಭ್ಯಾಸ ಪ್ರಾರಂಭವಾಗುತ್ತದೆ.

ಈ ಶ್ಲೋಕದ ಅರ್ಥ ಹೀಗಿದೆ: ಯೋಗದ ಮೂಲಕ ಚಂಚಲ ಮನಸ್ಸನ್ನು ನಿಯಂತ್ರಿಸುವ, ವಾಕ್ ಶುದ್ಧಿಯನ್ನು ತಂದುಕೊಡುವ, ದೇಹದಲ್ಲಿ ಚಯಾಪಚಯ ಕ್ರಿಯೆ ಸಕ್ರಿಯವಾಗಿದ್ದು, ಮಲ, ಮೂತ್ರ ವಿಸರ್ಜನೆಗಳು ಕ್ರಮಬದ್ಧವಾಗಿ ನಡೆಯಲು ಪೂರಕವಾದ ಯೋಗ ವೈದ್ಯಶಾಸ್ತ್ರವನ್ನು ರಚಿಸಿದ ಪತಂಜಲಿ ಮಹಾಮುನಿಯೇ ನಿಮಗೆ ಪ್ರಾತಃಕಾಲದ ನಮನಗಳು…

YOGA pics of DR.Raj Kumar. MADHU PRASAD - YouTube

ಯೋಗಾಯೋಗದ ಅಸ್ತಿತ್ವವೇ ಬದುಕಿನ ಜೀವಿತಾವಧಿಯ ನಿರ್ಧರಿಸಲು ಸಹಾಯಕವಾದ ಜೀವನ ಶೈಲಿಯ ಕಲಿಸಲು ಹುಟ್ಟಿಕೊಂಡ ಅಪ್ಪಟ ದೇಶಿ  ಹಾಗೂ ಭಾರತೀಯರ ನರನಾಡಿಗಳ ಮಿಡಿತ. “ಯೋಗ” ಭಾರತದ ಕಳಶಪ್ರಾಯ ಹಾಗೂ ನಮ್ಮ ಹೆಮ್ಮೆಯ ಇಡೀ ಪ್ರಪಂಚವೇ ನಮ್ಮ ಸಂಸ್ಕೃತಿಗಳ ಹಿನ್ನಲೆಗೆ ಮನಸೋತು ಅದನು ಅಪ್ಪಿಕೊಂಡು ಅನುಸರಿಸುವ ಹಂತಕ್ಕೆ ಬದಲಾಗಿರುವುದನ್ನು ನೆನೆದರೆ ಮನಸ್ಸು ನಾನು ಭರತಖಂಡದ ಪ್ರಜೆಯಾಗಲು ಪೂರ್ವ ಜನ್ಮದ ಫಲವೇ ಕಾರಣವೆಂದರೆ ತಪ್ಪಾಗಲಾರದು.ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಪ್ರತೀ ವರ್ಷದ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ವನ್ನಾಗಿ ಆಚರಿಸಬೇಕೆಂದು  ಘೋಷಿಸಿರುವುದು ನಮಗೆಲ್ಲ ತಿಳಿದ ಸಂಗತಿ.

ಯೋಗ ಎಂದರೇನು?

ಹಿಂದೂ ಆಧ್ಯಾತ್ಮಿಕ ಮತ್ತು ತಪಸ್ವಿ ಶಿಸ್ತು, ಇದರ

ಒಂದು ಭಾಗವೆಂದರೆ, ಉಸಿರಾಟ ನಿಯಂತ್ರಣ, ಸರಳ

ಧ್ಯಾನ ಮತ್ತು ನಿರ್ದಿಷ್ಟ ದೈಹಿಕ ಭಂಗಿಗಳನ್ನು

ಅಳವಡಿಸಿಕೊಳ್ಳುವುದು ಸೇರಿದಂತೆ ಆರೋಗ್ಯ ಮತ್ತು ವಿಶ್ರಾಂತಿಗಾಗಿ ವ್ಯಾಪಕವಾಗಿ ಅಭ್ಯಾಸವಾಗಿದೆ.ಯೋಗ ಎಂಬುದು ವ್ಯಕ್ತಿಯ ಪ್ರಜ್ಞೆಯನ್ನು ಆಂತರಿಕ ಆತ್ಮಕ್ಕೆ  ಅರ್ಪಿಸುವ ಕ್ರಿಯೆಯನ್ನು ಸೂಚಿಸುತ್ತದೆ. ವ್ಯಕ್ತಿಯ ಮನಸ್ಸು ಮತ್ತು ದೇಹದ ನಡುವೆ ಶಾಂತಿಯನ್ನು ತರಲು ಕೇಂದ್ರೀಕರಿಸುತ್ತದೆ. ಸಂಸ್ಕೃತದ ಯುಜ್ ಮತ್ತು ಯುಜಿರ್ ಪದದಿಂದ ಯೋಗ ಶಬ್ಧ ಬೆಳೆದುಬಂದಿತು. ‘ಒಗ್ಗೂಡಿಸಲು,ಒಟ್ಟಿಗೆ ಸೇರಲು ಅಥವಾ ‘ಸಂಪರ್ಕ’  ಎಂಬ ಅರ್ಥ ಹೊಂದಿದೆ. ಯೋಗ ಎಂಬ ಪದದ ಅರ್ಥ ಕೇಂದ್ರೀಕರಿಸುವ ಕ್ರಿಯೆಯಿಂದ ಒಬ್ಬರಿಗೆ ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ. ಯೋಗವು ಗೊಂದಲದಿಂದ ದೂರವಿರಲು ಒಂದು ತಂತ್ರವಾಗಿದೆ ಎಂದು ಪತಂಜಲಅಭಿಪ್ರಾಯಿಸಿದ್ದಾರೆ.   ಯೋಗವು 6000 ದಿಂದ 7000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ ಎನ್ನುತ್ತಾರೆ ಯೋಗಿಗಳು.ಯೋಗವು ಮೂಲಭೂತವಾಗಿ ಭಾರತದ ಉಪಖಂಡದಲ್ಲಿ ಹುಟ್ಟಿಕೊಂಡಿತು.

ಹಿಂದಿನ ದಿನಗಳಲ್ಲಿ ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮದ ಅನುಯಾಯಿಗಳು ಇದನ್ನು ಅಭ್ಯಾಸ ಮಾಡುತ್ತಿದ್ದರು. ನಿಧಾನವಾಗಿ, ಇದು ಪಾಶ್ಚಿಮಾತ್ಯ ದೇಶಗಳಲ್ಲಿ ತನ್ನ ದಾರಿಯನ್ನು ಕಂಡುಕೊಂಡಿತು.ಯೋಗದ ಅಭ್ಯಾಸವು ನಾಗರಿಕತೆಯ ಉದಯದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಯೋಗದ ವಿಜ್ಞಾನವು ಅದರ ಮೂಲವನ್ನು ಸಾವಿರಾರು ವರ್ಷಗಳ ಹಿಂದೆ ಹೊಂದಿದೆ, ಮೊದಲ ಧರ್ಮಗಳು ಅಥವಾ ನಂಬಿಕೆ ವ್ಯವಸ್ಥೆಗಳು ಹುಟ್ಟಲು ಬಹಳ ಹಿಂದೆಯೇ ಯೋಗದ ಸಿದ್ಧಾಂತದಲ್ಲಿ, ಶಿವನನ್ನು ಮೊದಲ ಯೋಗಿ ಅಥವಾ ಆದಿಯೋಗಿ ಮತ್ತು ಮೊದಲ ಗುರು ಅಥವಾ ಆದಿ ಗುರು ಎಂದು ನೋಡಲಾಗುತ್ತದೆ.

ಹಲವಾರು ಸಾವಿರ ವರ್ಷಗಳ ಹಿಂದೆ, ಹಿಮಾಲಯದ ಕಾಂತಿ ಸರೋವರದ ದಡದಲ್ಲಿ, ಅದಿಯೋಗಿ ತನ್ನ ಆಳವಾದ ಜ್ಞಾನವನ್ನು ಪೌರಾಣಿಕ ಸಪ್ತರ್ಷಿಗಳಿಗೆ ಅಥವಾ “ಏಳು ಋಷಿಮುನಿಗಳಿಗೆ” ಸುರಿದನು. ಪೂರ್ವ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕ ಭಾರತೀಯ ಉಪಖಂಡವು ಈ ಸಂಸ್ಕೃತಿಯನ್ನು ಒಂದು ಪ್ರಮುಖ ಯೋಗದ ಜೀವನ ವಿಧಾನದ ಸುತ್ತ ಹೆಣೆದಿದೆ.ಚಂಚಲವಾದ ಮನಸ್ಸು ಏಕಾಗ್ರತೆ ತರಲು ಯೋಗದ ಮೊದಲು ಪ್ರಾರ್ಥನೆ ಮಾಡಿ ನಂತರ ದೇಹದ ಅಂಗಾಂಗಗಳು ಸಡಿಲಗೊಳ್ಳಲು ಶಿಥಿಲೀಕರಣ ವ್ಯಾಯಾಮವನ್ನು ಮಾಡಬೇಕು. ಇದು ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಗಂಟುನೋವು ಮತ್ತು ಗಂಟುಗಳಲ್ಲಿ ಬರುವ ಶಬ್ದಗಳನ್ನು ನಿವಾರಿಸಲು ನೆರವಾಗುತ್ತದೆ. ಯೋಗ ಮಾಡುವಾಗ ಈ ಎಲ್ಲ ಪ್ರಮುಖ ಆಸನಗಳು ದೈಹಿಕ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ.

Rare Photos Of Dr. Rajkumar On International Yoga Day - Filmibeat

ಸೂರ್ಯ ನಮಸ್ಕಾರ

ಇದು ದೇಹಕ್ಕೆ ಮತ್ತು ಮಾನಸಿಕವಾಗಿ ಸಾಮರ್ಥಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಮನಸ್ಸು ಪ್ರಶಾಂತವಾಗಿ ಇರುತ್ತದೆ.

ಪ್ರಾಣಾಯಾಮ

ಇದು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ವಿಷವನ್ನು ತೆಗೆದು ಹಾಕುವುದರ ಜೊತೆಗೆ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಕಪಾಲಭಾತಿ

ಇದು ಮಾನಸಿಕ ಯೋಗಕ್ಷೇಮ, ಮಧುಮೇಹ ನಿಯಂತ್ರಣ, ಬೆನ್ನುನೋವು, ಅಜೀರ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಅಗುವುದು ಮತ್ತು ವಿವಿಧ ಕಾಯಿಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ತಾಡಾಸನ

ಇದು ನಮ್ಮ ಪಾದಗಳು ಮತ್ತು ಕಾಲುಗಳಿಗೆ ಸಾಕಷ್ಟು ರಕ್ತ ಪರಿಚಲನೆ ನೀಡುವ ಮೂಲಕ ಹೆಚ್ಚು ಶಕ್ತಿ ಒದಗಿಸುತ್ತದೆ ಹಾಗೆಯೇ ಖಿನ್ನತೆಯನ್ನು ನಿವಾರಿಸುತ್ತದೆ.

ಶವಾಸನ

ಇದು ನಮ್ಮ ಇಡೀ ದೇಹವನ್ನು ಸಡಿಲಗೊಳಿಸುತ್ತದೆ. ಮತ್ತು ಒತ್ತಡ, ಆಯಾಸ, ಖಿನ್ನತೆಯನ್ನು ನಿವಾರಿಸಿ, ನಿದ್ರಾಹೀನತೆಯನ್ನು ಗುಣಪಡಿಸುತ್ತದೆ.

ಅಷ್ಟಾಂಗಯೋಗ  ಅಂಗಗಳು

ಯಮನಿಯಮಆಸನಪ್ರಾಣಾಯಾಮ

ಪ್ರತ್ಯಾಹಾರಧಾರಣಧ್ಯಾನಸಮಾಧಿ.

ಯೋಗ ಅನಂತದತ್ತ ಕರೆದೊಯ್ಯುವ ಸಾಧನವಾಗಿದೆ. ಅದೊಂದು ವ್ಯಾಯಾಮ ಮಾತ್ರವಲ್ಲದೆ ನಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ.

ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

ಯೋಗದ ಆಚರಣೆಯು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೇ ಅದು ಜಗತ್ತಿನ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡು ಅದನ್ನು ಜಾಗತಿಕ ಮಟ್ಟದಲ್ಲಿ ಸ್ವೀಕರಿಸುವ ಮೂಲಕ ಇಡೀ ವಿಶ್ವ ವಿಶೇಷವಾಗಿ ಹಾಗೂ ಮಹತ್ವದ ದಿನವಾಗಿ ಆಚರಿಸಲು ಬಯಸಿದ್ದು ನಮಗೆಲ್ಲ ಅಂದರೆ ನಮ್ಮ ಭಾರತೀಯ ಪರಂಪರೆಗೆ ಸಿಕ್ಕ ಅಂತರಾಷ್ಟ್ರೀಯ ಸನ್ಮಾನವೆಂದರೆ ತಪ್ಪಾಗದು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015, ಜೂನ್ 21 ರಂದು ಮೊದಲ ಅಂತರಾಷ್ಟ್ರೀಯ ಯೋಗ ದಿನ ವನ್ನು ವಿಶ್ವಾದ್ಯಂತ ಆಚರಿಸಲಾಯಿತು.

ಜೂನ್21 ರಂದೇ ಯೋಗದಿನಾಚರಣೆಯಾಗಿ ಸ್ವೀಕರಿಸಲು ಕಾರಣ? ಬೇರೆ ದಿನ ಆಗುತ್ತಿರಲಿಲ್ಲವೇ ಎಂಬ ಸಂದೇಹಗಳು ಒಮ್ಮೆ ಹಾದು ಹೋಗಿದ್ದು ಉಂಟು.ಪ್ರಕೃತಿ ಹಾಗೂ ಸೌರಮಂಡಲದ ಒಳಗುಟ್ಟುಗಳ ಬೇಧಿಸಲು ನಾವಿನ್ನು ಕುಬ್ಜರು.ಭಾರತೀಯ ಕಾಲಮಾನ,ಕ್ಯಾಲೆಂಡರ್ ಪ್ರಕಾರ ವರ್ಷದ ಹನ್ನೇರಡು ತಿಂಗಳು ತನ್ನದೇ ವೈಶಿಷ್ಟ್ಯಗಳನ್ನು ಹೊಂದಿದ್ದು,ಅಯನಗಳು ತನ್ನ ಸ್ಥಿತಿಯ ಬದಲಿಸುವ ಅಭೂತಪೂರ್ವ ಸನ್ನಿವೇಶದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ದೀರ್ಘಕಾಲದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.

ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು, ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ.

2015ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿತು.

ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆ. ಇದು ನಮ್ಮ ದೇಹದ ಅಂಶಗಳನ್ನು ಸಮತೋಲನಗೊಳಿಸುವ ಮೂಲಕ ನಾವು ಮಾಡುವ ವ್ಯಾಯಾಮ. ಇದಲ್ಲದೆ, ಇದು ಧ್ಯಾನ ಮತ್ತು ವಿಶ್ರಾಂತಿ ಪಡೆಯಲು ನಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ಯೋಗವು ನಮ್ಮ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ಯೋಗ ಜನಪ್ರಿಯತೆಯನ್ನು ಗಳಿಸಿ ಮತ್ತು ಈಗ ವಿಶ್ವದ ಎಲ್ಲಾ ಪ್ರದೇಶಗಳಲ್ಲಿ ಹರಡಿದೆ. ಇದು ಜನರನ್ನು ಸಾಮರಸ್ಯ ಮತ್ತು ಶಾಂತಿಯಿಂದ ಒಂದುಗೂಡಿಸುತ್ತದೆ

ಒಟ್ಟಿನಲ್ಲಿ ಪುರಾತನ ಕಾಲದಿಂದಲೂ ಯೋಗಾಸನವು ಹೆಚ್ಚಿನ ಪ್ರಾಮುಖ್ಯತೆ ಮಹತ್ವವನ್ನು ಪಡೆದುಕೊಂಡಿದೆ. ಜೀವನದಲ್ಲಿ ಸುಂದರವಾದ ಬದುಕನ್ನು ಸಾಗಿಸಬೇಕಾದರೆ ಆರೋಗ್ಯವು ಚೆನ್ನಾಗಿರಬೇಕು. ಸಮಯ ಸಿಕ್ಕಾಗ ಅನ್ನುವುದಕ್ಕಿಂತ‌ ಸಮಯ ಹೊಂದಿಸಿಕೊಂಡು ಆರೋಗ್ಯ ಭಾಗ್ಯ ಪಡೆಯುವುದು ಲೇಸು….ಯೋಗಾಯೋಗ ಎಲ್ಲರ ದೈವ ಸಂಕಲ್ಪವಾಗಲಿ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

One thought on “

  1. ತುಂಬಾ ಅಧ್ಭುತ ಲೇಖನ ರೀ ಮೇಡಂ …ಈ ಲೇಖನವನ್ನು ಓದಿದ ಮೇಲೆ ಯೋಗವೇ ಜೀವನ , ಪಾಲಿಸಲೇಬೇಕು ಎಂಬ ಭಾವ ಕಿರಣ…..

Leave a Reply

Back To Top