ಕಾವ್ಯಸಂಗಾತಿ
ನಾವು ಹೇಗಿದ್ದೇವೆ ಗೊತ್ತೇ…?
ದೇವರಾಜ್ ಹುಣಸಿಕಟ್ಟಿ
ಅರ್ಧ ಕೆಜಿ ಕಡಿಮೆ ಮಾಂಸದ
ಸಣಕಲು ದೇಹದ ಥೇಟ್
ನೀವು ಬಯಸಿದಾಗ
ನಕ್ಸಲೈಟ್ ಆಗುವ ಹಾಗೆ…
ಸತ್ತೆಗೆ ವಿರೋಧವಿದ್ದಾಗಲೆಲ್ಲ
ದೇಶ ದ್ರೋಹದ ಆರೋಪ
ಹೊತ್ತು ಗಾಂಧಿ ಕೊಂದ ಗೋಡ್ಸೆ
ಆರಾಧಿಸುವ ನಿಮ್ಮ ನೆನಪಾಗಿ
ಕಿರು ನಗೆಯ ಬೀರುವ ಹಾಗೆ…
ನಿರ್ಲಜ್ಜ ನಿಮ್ಮ ನೀತಿಗಳಿಗೆ
ಸೆಡ್ಡು ಹೊಡೆದರೆ
ಜೈಲು ಕಂಬಿಗಳ ನಡುವೆ
ಕುಳಿ ಕಣ್ಣು ಬಿಟ್ಟು
ನಾಳೆಯ ಬೆಳಕಿಗೆ
ಕತ್ತಲಲ್ಲಿ ಅರಸುವ ಹಾಗೆ..
ಸಾಲದೆoಬಂತೆ…
ರಸ್ತೆಗೆ ಹಾಕಿದ ಡಾoಬರಿನ
ಕಪ್ಪನ್ನೇ ಕಾಡಿಗೆ ಯಾಗಿಸಿ…
ಬಸಿದು ಸುರಿಯುವ
ಬೆವರ ವಾಸನೆಯನ್ನೇ
ಮೈಯ ಸೆಂಟಾಗಿಸಿ….
ಏರಿದ ಬೆಲೆಗಳ ಬಗೆಗೆ
ಸ್ವರವೆತ್ತಿದಾಗಲೆಲ್ಲ ಅತ್ಯಾಚಾರದ
ಆರೋಪ ಹೊರುವ ಎಂಟದೆಯ
ಜಿಗ್ನೇಶ್ ನ ಹಾಗೆ….
ನಿರಾಕರಣೆಯ ಹಕ್ಕನ್ನೇ
ಕಸಿಯುವ ಹುನ್ನಾರ
ಹೆಣೆದಾಗಲೆಲ್ಲ ಅದೆಲ್ಲೋ
ಬಾ ಬಾ ಕೂಗಿ ಎಚ್ಚರಿಸಿ
ಕೈ ಹಿಡಿದು ನಡೆಸುವ ಕನಸು
ಕಾಣುವ ಹುಚ್ಚು ಹುಡುಗಿ
ಪರ್ಜಾನಳ ಹಾಗೆ….
ಇದು ಗೌರಿ ಹುಟ್ಟಿದ
ನೆಲವಣ್ಣ ಅಣ್ಣಾ ಬಸವಣ್ಣ
ಮೆಟ್ಟಿದ ಭುವಿಯಣ್ಣ…..
ನೂರು ಮಡಿಯ ಕತ್ತಲೆಯಲಿ
ಚಿಮಣಿ ಹಿಡಿದವರ
ಧೂಳ ಕಣದ ಹಾಗೆ…
ನಾವು ಇದ್ದೇವೆ ಹೀಗೆ…..