ಅಂಕಣ ಬರಹ
ಸಾಧಕಿಯರ ಯಶೋಗಾಥೆ
ಸಮಾಜ ಸೇವಕಿ ಶೀಲಾ ಪಟೇಲ್(1952)
1952ರಲ್ಲಿ ಜನಿಸಿದ ಶೀಲಾ ಪಟೇಲರವರು ಕೊಳಗೇರಿಗಳಲ್ಲಿ ಮತ್ತು ಗುಡಿಸಿಲುಗಳಲ್ಲಿ ವಾಸಿಸುವ ಜನರೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವರು. 1974ರಲ್ಲಿ ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೊಶಿಯಲ್ ಸೈನ್ಸ್‍ನಿಂದ ಸಮಾಜಶಾಸ್ತ್ರದಲ್ಲಿ ಶೀಲಾ ಪಟೇಲ್ ಅವರು ಮಾಸ್ಟರ್ ಡಿಗ್ರಿಯನ್ನು ಅಧ್ಯಯನ ಮಾಡುತ್ತಿದ್ದಂತಹ ಸಮಯದಲ್ಲಿಯೇ ನಾಗಪಾಡಾ ನೆಬರಹುಡ್ ಸೆಂಟರ್‍ನಲ್ಲಿ ಭಾಗಿಯಾಗುತ್ತಿದ್ದರು.
ಶೀಲಾರವರು 1984ರಲ್ಲಿ ಪ್ರೇಮಾ ಗೋಪಾಲ ಅವರೊಂದಿಗೆ ‘ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಏರಿಯಾ ರಿಸೋರ್ಸ್ ಸೆಂಟರ್’ ಸ್ಥಾಪಕ ನಿರ್ದೇಕರಾಗಿದ್ದಾರೆ. ಈ ಸಂಸ್ಥೆಯು ಕೊಳಗೇರಿ ಜನರ ಪರವಾಗಿ ಕಾರ್ಯನಿರ್ವಹಿಸುತ್ತಲೇ, ವಿಶ್ವದಲ್ಲಿಯೇ ಮೂರನೇ ಸ್ಥಾನವನ್ನು ಪಡೆದಿದೆ. ನಗರದ ಬಡ ಜನರೊಂದಿಗೆ ಮತ್ತು ಅಂಚಿನಲ್ಲಿ ಉಳಿದಿರುವವರ ಕುರಿತು ಕಾರ್ಯನಿರ್ವಹಿಸುತ್ತಿದೆ.
ಸ್ಪಾರ್ಕವು 1986ರಿಂದ ಎರಡು ಸಮುದಾಯ ಆಧಾರಿತ ಸಂಸ್ಥೆಗಳಾದ ರಾಷ್ಟ್ರೀಯ ಕೊಳಗೇರಿ ನಿವಾಸಿಗಳ ಒಕ್ಕೂಟ ಮತ್ತು ಮಹಿಳಾ ಮಿಲನ್ ಸಹಭಾಗಿತ್ವದೊಂದಿಗೆ ಪ್ರೇಮಾ ಅವರು ಕಾರ್ಯನಿರ್ವಹಿಸುತ್ತೀರುವರು. ದೇಶದ ಸುಮಾರ 70 ನಗರಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 25 ದೇಶಗಳಲ್ಲಿ ಸ್ಪಾರ್ಕ ನೆಟ್‍ವರ್ಕವನ್ನು ಹೊಂದುವಂತೆ ಮಾಡಿದ್ದಾರೆ ಶೀಲಾ ಪಟೇಲರವರು.
ಶೀಲಾರವರು ಏಷ್ಯನ್ ಕೋಲಿಷನ್ ಫಾರ್ ಹೌಸಿಂಗ್ ರೈಟ್ಸ್, ಏಷ್ಯನ್ ವುಮೆನ್ ಅಂಡ್ ಶಲ್ಟರ್ ನೆಟ್‍ವರ್ಕ್ ಮತ್ತು ಸ್ವಯಂ ಶಿಕ್ಷಣ ಪ್ರಯೋಗಗಳೊಂದಿಗೆ ಮಹಾರಾಷ್ಟ್ರದಲ್ಲಿ 600ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಹೆಣ್ಣು ಮಕ್ಕಳೊಂದಿಗೆ ಕೆಲಸ ಮಾಡುವ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇವರು ಜವಾಹರ್‍ಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮೀಷನ್‍ಗಾಗಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದಲ್ಲಿ ಕೆಲಸ ಮಾಡಿದ್ದಾರೆ.
ಶೀಲಾರವರು ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಕೆರೆಬಿಯನ್ ದೇಶಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳ ಜಾಲವಾದ ಸ್ಲಮ್ ಡ್ವೆಲ್ಲರ್ಸ್ ಇಂಟರ್‍ನ್ಯಾಷನಲ್ ಸಂಸ್ಥೆಗಳ ಸ್ಥಾಪಕರು ಮತ್ತು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಶೀಲಾರವರಿಗೆ ದೊರೆತ ಪ್ರಶಸ್ತಿಗಳು:
1. 2000 ರಲ್ಲಿ ಯುಎನ್ ಹ್ಯಾಬಿಟ್ಯಾಟ್ ಸ್ಕ್ರೋಲ್ ಆಫ್ ಹಾನರ್ ಅವಾರ್ಡ್.
2. 2009 ರಲ್ಲಿ ಡೆವಿಡ್ ರಾಕ್ ಫೆಲ್ಲರ್ ಬ್ರಿಡ್ಜಿಂಗ್ ಲಿಡರ್ ಶಿಫ್ ಅವಾರ್ಡ್.
3. 2011 ರಲ್ಲಿ ಪದ್ಮಶ್ರೀ ಪ್ರಶಸ್ತಿ.
ಶೀಲಾರವರ ಅನೇಕ ಕೃತಿಗಳು ಮತ್ತು ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ:
1. 2011 ರಲ್ಲಿ ಪ್ರಕಟವಾದ ಆರ್ ವುಮೆನ್ ವಿಕ್ಟಿಮಿ ಅರ್ ಆರ್ ದೆ ವಾರಿಯರ್?
2. 2013 ರಲ್ಲಿ ಅಫ್ಗ್ರೇಡ್ ರಿಹೌಸ್ ಅರ್ ರಿಸೆಟಲ್?
3. 2013 ರಲ್ಲಿ ವ್ಹಿ ಬಿಟ್ ದ ಪಾತ್ ಬೈ ವಾಕಿಂಗ್, ಮುಂತಾದವುಗಳನ್ನು ಬರೆದಿದ್ದಾರೆ.
………………………..
ಡಾ.ಸುರೇಖಾ ರಾಠೋಡ್
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ