ರಾಜಕಾರಣಿ, ಸಮಾಜ ಕಾರ್ಯಕರ್ತೆ ಇಳಾಗಾಂಧಿ (1940)

ಅಂಕಣ ಬರಹ

ಸಾಧಕಿಯರ ಯಶೋಗಾಥೆ

ರಾಜಕಾರಣಿ, ಸಮಾಜ ಕಾರ್ಯಕರ್ತೆ

ಇಳಾಗಾಂಧಿ (1940)

ಇಳಾ ಗಾಂಧಿಯವರು ಮಹಾತ್ಮಗಾಂಧೀಯವರ ಮೊಮ್ಮಗಳು. ಇವರು ದಕ್ಷಿಣಾಫ್ರಿಕಾದ ಶಾಂತಿ ಹೋರಾಟಗಾರ್ತಿ(ಪಿಸ್ ಆಕ್ಟಿವಿಸ್ಟ್). ಇವರು ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದ ಡರ್ಬನ್‍ನಲ್ಲಿ 1940 ಜುಲೈ 1 ರಂದು ಜನಿಸಿದರು. ಇವರು ಡರ್ಬನ್‍ನ ಹತ್ತಿರ ಇರುವ ಫೂನಿಕ್ಸ್ ಆಶ್ರಮದಲ್ಲಿ ಬೆಳೆದ ಇವರು ನಾಟಲ್ ವಿಶ್ವವಿದ್ಯಾನಿಲಯದಿಂದ ಬಿಎ ಪದವಿಯನ್ನು ಪಡೆದರು. ನಂತರ ಯನಿಸಾದಿಂದ ಗೌರವ ಬಿಎ ಇನ್ ಸೋಷಿಯಲ್ ಸೈನ್ಸ್ ಪದವಿಯನ್ನು ಪಡೆದಿದ್ದರಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇವರಿಗೆ ಅನುಕೂಲವಾಯಿತು. ಇವರು 15 ವರ್ಷಗಳ ಕಾಲ  ವೆರುಲಂ ಮಕ್ಕಳ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯೊಂದಿಗೆ ಕೆಲಸ ಮಾಡಿದರು. ಹಾಗೇಯೆ ಡರ್ಬನ್ ಇಂಡಿಯನ್ ಚೈಲ್ಡ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸೊಸೈಟಿಯಲ್ಲಿ ಐದು ವರ್ಷಗಳ ಕಾಲ ಸಮಾಜ ಸೇವಕಿಯಾಗಿ ಕಾರ್ಯನಿರ್ವಹಿಸಿದರು.

ಇಳಾ ಗಾಂಧಿಯವರು ನೆಟಾಲ್ ಆರ್ಗನೈಸೇಶನ್ ಆಫ್ ವುಮೆನ್ ಸಂಸ್ಥೆಯನ್ನು ಹುಟ್ಟು ಹಾಕಿ ಫ್ರಾರಂಭದಿಂದ 1991ರವರೆಗೆ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿರುವರು. ರಾಜಕೀಯ ಅಂಗಸಂಸ್ಥೆಗಳಲ್ಲೊಂದಾದ ನಟಾಲ್ ಇಂಡಿಯನ್ ಕಾಂಗ್ರೇಸ್‍ಗೆ ಸೇರಿದರು. ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್, ಡೆಸ್ಕಾಮ್‍ಕ್ರೈಸಿಸ್ ನೆಟ್‍ವರ್ಕ್ ಮತ್ತು ಇನೆಂಡಾ ಬೆಂಬಲ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು.

ವರ್ಣಭೇದ ನೀತಿಯ ಸಮಯದಲ್ಲಿ ಸರ್ಕಾರ ಇಳಾ ಗಾಂಧಿಯವರ ರಾಜಕೀಯ ಕಾರ್ಯಗಳನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲು 9 ವರ್ಷಗಳ ಕಾಲ ಹೌಸ್ ಅರೆಸ್ಟ್ ಆಗಿರುವಂತೆ ಮಾಡಿತ್ತು. ಈ ಸಮಯದಲ್ಲಿಯೂ ಕೂಡ ವರ್ಣಭೇಧ ನೀತಿಯ ವಿರುದ್ಧ ಭೂಗತವಾಗಿ ಕೆಲಸವನ್ನು ಮುಂದುವರೆಸಿದರು. ಈ ಸಮಯದಲ್ಲಿಯೇ ಇಳಾಗಾಂಧಿಯ ಒಬ್ಬ ಮಗನನ್ನು ಕೊಲ್ಲಲಾಯಿತು. ಆದರೂ ಹೆದರದೆ ಇಳಾಗಾಂಧಿ ಅವರು ವರ್ಣಬೇಧ ನೀತಿಯ ವಿರುದ್ಧ ಹೋರಾಟ ಮುಂದುವರೆಸಿದರು. ಯುನೈಟೆಡ್ ಡೆಮೊಕ್ರೆಟಿಕ್ ಫ್ರಡ್ ಸದಸ್ಯರಗಳು ನೆಲ್ಸನ್ ಮಂಡೇಲಾ ಅವರನ್ನು ಭೇಟಿ ಮಾಡಿದರು. ಈ ಸಮಯದಲ್ಲಿ ಇಳಾ ಅವರು ಕೂಡಾ ಇದ್ದರು. ಇಳಾ ಅವರು ಬಂಧನಕ್ಕೆ ಒಳಪಡುವ ಮೊದಲು ಪರಿವರ್ತನಾ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು.

ಇಳಾ  ಗಾಂಧಿ ಅವರು 1994 ರಲ್ಲಿ ಸಂಸತ್ತಿನಲ್ಲಿ ಪ್ರವೇಶವನ್ನು ಪಡೆದ ನಂತರ ಕೌಟುಂಬಿಕ ಹಿಂಸೆಯ ವಿರುದ್ಧ 24 ಗಂಟೆಗಳ ಕಾರ್ಯಕ್ರಮವನ್ನು ಗಾಂಧಿ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡರು. ಇಳಾರವರು ಮಾಸಿಕ ಪತ್ರಿಕೆಯ ಮತ್ತು ಧಾರ್ಮಿಕ ವ್ಯವಹಾರಗಳ ಸಮಿತಿಯ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಇಳಾ ಅವರು ಗಾಂಧಿ ಸ್ಟಾಲ್ ಮಾರ್ಚ್ ಸಮಿತಿ ಮತ್ತು ಮಹಾತ್ಮಗಾಂಧಿ ಅಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾಗಿದ್ದುಕೊಂಡು, ಡರ್ಬನ್ ಯುನಿವರ್ಸಿಟಿ ಆಫ್ ಟೆಕ್ನಾಲಾಜಿ ಕುಲಪತಿಗಳಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಇಳಾರವರಿಗೆ ದೊರೆತ ಪ್ರಶಸ್ತಿಗಳು:

1. 2002 ರಲ್ಲಿ  ಕಮ್ಯುನಿಸ್ಟ್ ಆಫ್ ಕ್ರೈಸ್ಟ್ ಇಂಟರ್ ನ್ಯಾಷನಲ್ ಪಿಸ್ ಅವಾರ್ಡ

2. 2007 ರಲ್ಲಿ ಪದ್ಮಭೂಷಣ ಪ್ರಶಸಿ

3. 2013 ರಲ್ಲಿ ಶಾಂತಿದೂತ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವರು. ವಿಶ್ವಶಾಂತಿ ಚಳುವಳಿಗಾಗಿ ಸಾಗರೋತ್ತರ ಭಾರತೀಯರು ನೀಡಿದ ಸೇವೆಗಾಗಿ ಭಾರತೀಯರಿಗೆ ನೀಡುವ ಗೌರವವಾಗಿದೆ.

4. 2014 ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪಡೆದಿರುವರು. ಇದು ಭಾರತದ ರಾಷ್ಟ್ರಪತಿಗಳು ನೀಡುವ ಸಾಗರೋತ್ತರ ಭಾರತೀಯರಿಗೆ ಅತ್ಯನ್ನತ ಗೌರವವಾಗಿದೆ.

ವಾಷಿಂಗ್ಟನ್ ಡಿ.ಸಿ ಯ ರಾಯಭಾರಿ ಕಛೇರಿಯು ಗಾಂಧಿ ವರ್ಚವಲ್ ಪದವಿ ಸಮಾರಂಭವನ್ನು 2020ರಲ್ಲಿ ನಡೆಸಿದಾಗ 15 ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಲಾಗಿತ್ತು.


ಡಾ.ಸುರೇಖಾ ರಾಠೋಡ್.

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top