ನೀರುಣಿಸೋಣ…!

ಅಂಕಣ ಸಂಗಾತಿ

ಸಕಾಲ

ನಮ್ಮಅಸ್ತಿತ್ವದಬೇರಿಗೆನೀರೂಣಿಸೋಣ…!

ಎದೆಗೊತ್ತಿಕೊಂಡು,ಎದೆಹಾಲನೂಣಿಸಿ

ಹೆಗಲಲೆತ್ತಿಕೊಂಡು,ಊರೆಲ್ಲ ತಿರುಗಿಸಿ

ಜಗದಗಲ ಪ್ರೀತಿಯ ಹಂಚುತಲಿ

ಜಗವ ತೋರಿದರು ಬಿಡುಗಣ್ಣಲಿ

ಅವರ ಬೆವರ ಹನಿಗಳಲಿ,ನೆತ್ತರಲಿ

ನಮ್ಮ ಬದುಕು ಸಾಗಿದೆ ನೆಮ್ಮದಿಯಲಿ

                                       ಶಿವಲೀಲಾಮೃತ

ಇಂದಿನ ಆಧುನಿಕ ಬದುಕಿನ ಶೈಲಿಯಲ್ಲಿ ವೃದ್ಧಾಶ್ರಮಗಳು ನಾಯಿಕೂಡೆಗಳಂತೆ ಅಲ್ಲಲ್ಲಿ ತಲೆಯೆತ್ತಿ ಇವುಗಳ ಅನಿವಾರ್ಯತೆಯನ್ನು ಸಾರುವ ಕೇಂದ್ರಗಳಾಗಿ ತಲೆಯೆತ್ತಿವೆ.ಆಡಂಬರದ ಪ್ರಪಂಚಕ್ಕೆ ಕಾಲಿಟ್ಟ ಕ್ಷಣಕ್ಕೆ ಹಿರಿಯರು ತಲೆನೋವಾಗಿ ಕಾಡಲು ಪ್ರಾರಂಭವಾಗಿ ಕಿರಿಯರ ಬದುಕಿಂದ ಅನಾಯಾಸವಾಗಿ ವೃದ್ಧಾಶ್ರಮದ ಬಾಗಿಲು ತೆರೆಯಲು ದುಂಬಾಲು ಬೀಳುವ ಸ್ಥಿತಿ ನಿರ್ಮಾಣವಾಗಿದ್ದಂತೂ ಯಾರು ಅಲ್ಲಗಳೆಯಲಾರರು.

ಒಮ್ಮೊಮ್ಮೆ ತಾವು ಇಷ್ಟು ವರುಷ ಯಾಕಾದರೂ ಬದುಕಿದೆವೋ ಎಂದು ನೊಂದ ಮನಗಳು ಪರಸ್ಪರ ಶಪಿಸಿದ್ದಿದೆ.ಆದರೆ “ದೀರ್ಘಾಯಸ್ಸು ಒಂದು ವರವಲ್ಲ ಶಾಪ ಎಂದಿದ್ದಾನೆ” ಕುರುಕುಲ ಪಿತಾಮಹ ಭೀಷ್ಮ. ನಾವು ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಆಗುವ ವಯೋಸಹಜ ಬದಲಾವಣೆಗಳು ಮತ್ತು ಅನಾರೋಗ್ಯ ನಮ್ಮನ್ನು ಕಂಗೆಡಿಸುತ್ತವೆ. ದೈಹಿಕ ಮತ್ತು ಮಾನಸಿಕ ಶಕ್ತಿ ಸಾಮರ್ಥ್ಯಗಳು ಕಡಿಮೆಯಾಗುವುದರ ಜೊತೆಗೆ ಭಾವನಾತ್ಮಕ ಮತ್ತು ಸಾಮಾಜಿಕ ಆಸರೆ ಕೂಡ ಕಡಿಮೆಯಾಗುತ್ತಿರುವುದರಿಂದ ವೃದ್ಧಾಪ್ಯದ ಕ್ಷಣಗಳು ಅಸಹನೀಯವಾಗುತ್ತಿದೆ. 

ವೃದ್ಧಾಶ್ರಮಗಳು ಹಿರಿಯ ನಾಗರಿಕರು ಒಟ್ಟಿಗೆ ವಾಸಿಸಲು ಇರುವ ಕೇಂದ್ರಗಳಾಗಿ ಪರಿವರ್ತನವಾಗಿವೆ. ವಯಸ್ಸಾದವರು ಮಾನವರ ಜೀವಿತಾವಧಿಯನ್ನು ಸಮೀಪಿಸುತ್ತಾ ಅಥವಾ ಮೇಲುಗೈ ಮಾಡುವುದನ್ನು ವಯಸ್ಸನ್ನು ಉಲ್ಲೇಖಿಸುತ್ತಾರೆ.ಇದು ಮಾನವ ಜೀವನ ಚಕ್ರದ ಅಂತ್ಯವಾಗಿರುತ್ತದೆ. 2016 ರ ಅಕ್ಟೋಬರ್ ದಲ್ಲಿ,ಗರಿಷ್ಠ ಮಾನವ ಜೀವಿತಾವಧಿ 115 ವರ್ಷದಿಂದ 125 ವರ್ಷಗಳ ಸಂಪೂರ್ಣ ಮಿತಿಯೊಂದಿಗೆ. ಗರಿಷ್ಠ ಮಾನವ ಜೀವಿತಾವಧಿಯನ್ನು ಹೊಂದಿದೆ ಎಂದು ಅಧಿಕ ಪ್ರಚಾರಗೊಂಡ ಕಾಗದದ ಹೇಳಿದೆ.

ಅನೇಕ ಲೇಖಕರ ಅನಿಸಿಕೆಗಳು ಮತ್ತು ತೀರ್ಮಾನ ವಿವಾದಾಸ್ಪದವಾಗಿವೆ.ವಯೋಸಹಜ ರೂಪ ವೃದ್ಧಾಪ್ಯ  “ಹಳೆಯ ಜನರು” ಎಂದು ವಿಶ್ವದಾದ್ಯಂತ ಬಳಕೆಮಾಡಿದರೆ. “ಹಿರಿಯರು” ಅಮೇರಿಕಾದವರು ಬಳಸಿದರೆ.”ಹಿರಿಯ ನಾಗರಿಕರು” ಎಂದು ಬ್ರಿಟಿಷ್ ಮತ್ತು ಅಮೇರಿಕನ್ ಬಳಕೆ,”ಹಿರಿಯ ವಯಸ್ಕರು” ಸಾಮಾಜಿಕ ವಿಜ್ಞಾನಗಳಲ್ಲಿ.ಹಿರಿಯರು ಮತ್ತು  ಹಿರಿಯರು ಅನೇಕ ಜನರಿಗೆ ಸಂಬಂಧಿಸಿದಂತೆ ನಿಯಮಗಳು ಮತ್ತು ಸೌಮ್ಯೋಕ್ತಿಗಳು ಸೇರಿವೆ ಮೂಲನಿವಾಸಿ ಜನರ ಸಂಸ್ಕೃತಿಗಳು ಸೇರಿದಂತೆ, ಹಳೆಯ ಜನರು ಹೆಚ್ಚಾಗಿ ಸೀಮಿತ ಪುನರುಜ್ಜೀವನದ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಮತ್ತು ಕಿರಿಯ ವಯಸ್ಕರಲ್ಲಿ ರೋಗ, ಲಕ್ಷಣಗಳು, ಮತ್ತು ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ವಯಸ್ಸಾದ ಸಾವಯವ ಪ್ರಕ್ರಿಯೆಯನ್ನು ಎಂದು ಕರೆಯಲಾಗುತ್ತದೆ, ವಯಸ್ಸಾದ ಪ್ರಕ್ರಿಯೆಯ ವೈದ್ಯಕೀಯ ಅಧ್ಯಯನವನ್ನು ಜೆರೋಂಟೊಲಜಿ ಎಂದು ಕರೆಯಲಾಗುತ್ತದೆ, ಮತ್ತು ವೃದ್ಧರನ್ನು ಪೀಡಿಸುವ ರೋಗಗಳ ಅಧ್ಯಯನವನ್ನು ಜೆರಿಯಾಟ್ರಿಕ್ಸ್ ಎಂದು ಕರೆಯಲಾಗುತ್ತದೆ. ವೃದ್ಧರು ನಿವೃತ್ತಿ, ಒಂಟಿತನ, ಮತ್ತು ವಯೋಮಾನದ ಸುತ್ತಲೂ ಇತರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ಪ್ರತಿ ಮನೆಯಲ್ಲಿ ಹಿರಿಯರು ಇರಲೇಬೇಕು. ಅಂತಹವರ ಬದುಕಿನ ಬಗ್ಗೆ ಪ್ರತಿಯೊಬ್ಬರು ಚಿಂತಿಸುವುದು ಅನಿವಾರ್ಯತೆ ಇದೆ.ಅವರೇ ಅಸ್ತಿ ನಮ್ಮ ಬದುಕಿಗೆ.ಹೀಗೊಂದು ಪುಟ್ಟೆರಡು  ಕಥೆಗಳು ನೆನಪಾಗುತ್ತೆ.ಅವುಗಳ ಸಾಮ್ಯತೆ,ವ್ಯವಸ್ಥೆ ಹಾಗೂ ವ್ಯತ್ಯಾಸ ಗಮನಿಸುವುದು ಬಹುಮುಖ್ಯ.ನಮ್ಮ ಅಸ್ತಿತ್ವದ ಬೇರಿಗೆ ನೀರೂಣೊಸೋಣ ಅಂದಾಗ ಅದಕ್ಕೊಂದು ಬೆಲೆಯೆಂಬುದು ಸತ್ಯವೇ

ಒಬ್ಬನೇ ಮಗ,ದಂಪತಿಗಳಿಗೆ. ಮಗ ದುಡಿದದ್ದು ಮನೆಯ ನಿರ್ವಹಣೆಗೆ,ಸೊಸೆ ದುಡಿದದ್ದು ಎರಡು ಮಕ್ಕಳ ವಿದ್ಯಾಭ್ಯಾಸಕ್ಕೆ ಎನ್ನುವಂತಹ ಸ್ಥಿತಿ.ಇನ್ನೂ ವಯಸ್ಸಾದವರ ಜೀವನ ನಿರ್ವಹಣೆಯ ಖರ್ಚು ನಿಭಾಯಿಸುವಲ್ಲಿ ಹೈರಾಣಾದ ಜೀವನ ಒಂದೆಡೆಯಾದರೆ  ಇನ್ನೊಂದು,

ಒಂದು ಬಾಡಿಗೆ ಮನೆಯಲ್ಲಿ ಆರು ಜನರೂ ಅನ್ಯೋನ್ಯವಾಗಿದ್ದಾರೆ. ಹೊಟ್ಟೆಗೆ ಗಂಜಿ ಇಳಿದರೂ ಮಾತಿನಲ್ಲಿ ಜೇನು ಸುರಿಸುವ ಆ ಮನೆಯ ಹಿರಿಯನಿಗೆ 60ನೆಯ ವಯಸ್ಸಿನಲ್ಲಿ ಲಕ್ವ ತಗುಲಿತು. ಸಾಲದ ಹೊರೆ ಹೊತ್ತು ಮಗ ತಂದೆಯ‌ ಚಿಕಿತ್ಸೆಗೆಗಾಗಿ ಸಾಕಷ್ಟು ಖರ್ಚು ಮಾಡಿದ. ಆದರೂ ಗುಣವಿಲ್ಲ ಆತನ ಮೈಯಲ್ಲೂ ತಾಕತ್ತಿಲ್ಲ.ಹಣಕಾಸಿನ ಪರಿಸ್ಥಿತಿ ಚೆನ್ಬಾಗಿಲ್ಲ. ವರ್ಷ ಕಳೆದಿದೆ. ಈಗ ಹಿರಿಯರ ದೇಹದಲ್ಲೂ ಸೊರಗಿದ ಶಕ್ತಿ, ಉಬ್ಬಸ. ಮಗ ದುಡಿಯೋದು ಸಾಲದು. ಸೊಸೆ ದುಡಿಯುವುದು ಒಲೆ ಉರಿಯಲು ಎನ್ನುವಂತಾಗಿದೆ. ಇನ್ನೂ ಬೆಳೆಯುತ್ತಿರುವ ಮೊಮ್ಮಕ್ಕಳು ಏನು ತಾನೆ ಮಾಡಲು ಸಾಧ್ಯ? ಪಕ್ಕದ ನಾಡಿನಲ್ಲಿ ಇಂತಹ ರೋಗಿಗಳನ್ನು ನೋಡಿಕೊಳ್ಳುವುದಕ್ಕಾಗಿಯೇ ಉಚಿತ ವೃದ್ಧಾಶ್ರಮ ಇದೆ. ದೂರದ ಆಶ್ರಮದಲ್ಲಿ ಇದ್ದು ವೃದ್ಧರೂ, ನಡು ವಯಸ್ಸಿನವರು, ಬಾಲಕರು ಸಂಬಂಧಗಳಲ್ಲಿ ಸೌಹಾರ್ದವನ್ನು ಉಳಿಸಿಕೊಂಡು ಹೋಗುವುದು ಮುಖ್ಯ. ‘ನಮ್ಮ ಸಂಸ್ಕೃತಿ’ ಎನ್ನುವುದರ ಮಿಥ್ಯ ಅರ್ಥೈಸಲು ಸಿಲುಕಿ ಎಲ್ಲರೂ ನರಳಬೇಕೆ?

Happy Parents Day Stickers | Redbubble

ಅದೆಷ್ಟೇ ಅಕ್ಕರೆಯಿಂದ ನೋಡಿಕೊಂಡರೂ ಸ್ವಂತ ಮಕ್ಕಳಿಗೇ ಹಿಡಿಶಾಪ ಹಾಕುವ ತಂದೆಯರು ಇಲ್ಲೇ ಇದ್ದಾರೆ. ಮೃದು ಮಮತೆಯ ಶಾಲು ಹೊದಿಸಿದರೂ ತಮ್ಮದೇ ಮಕ್ಕಳ ಬಗ್ಗೆ ಊರೆಲ್ಲಾ ಚಾಡಿ ಮಾತುಗಳನ್ನು ಆಡಿಕೊಳ್ಳುವ ತಾಯಂದಿರು ಇಲ್ಲಿದ್ದಾರೆ. ‘ಹುಚ್ಚಿಯಾದರೂ ತಾಯಿ’ ಎನ್ನುವ ಬಳಕೆ ಮಾತು ನಮ್ಮಲ್ಲಿದೆ. ಆದರೆ ಅಮಾಯಕಳಂತೆ ನಟಿಸುವವಳೂ ತಾಯಿ ಎನಿಸಿಕೊಳ್ಳುವವಳು ಎಂದು ಯಾವ ಗಾದೆಯೂ ಕಲಿಸಿಕೊಡುವುದಿಲ್ಲ.ಆಧುನಿಕ ಜೀವನಶೈಲಿ ಮತ್ತು ಬದಲಾಗುತ್ತಿರುವ ಸಮಾಜ ದೃಷ್ಟಿಕೋನದಿಂದಾಗಿ ಬದುಕಿನಲ್ಲಿ ಸಂಬಂಧ-ಬಾಂಧವ್ಯದ ಬೆಸುಗೆಯ ಕೊಂಡಿ ಕಳಚಿಕೊಳ್ಳುತ್ತಿದೆ. ತಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿಯನ್ನು ಅಥವಾ ಪೋಷಕ-ಪಾಲಕರನ್ನು ನೋಡಿಕೊಳ್ಳಲು ಅವರ ಆರೈಕೆ ಮಾಡಲು ಅವರ ಬೇಕು-ಬೇಡಗಳನ್ನು ಆಲಿಸಲು ಮಕ್ಕಳಿಗೆ ಸಮಯದ ಅಭಾವ. ಆಧುನಿಕತೆಯ ಪ್ರಭಾವದಿಂದ ಪ್ರೀತಿ-ವಾತ್ಸಲ್ಯ, ಮಮತೆ-ಮಮಕಾರ, ವಿಶ್ವಾಸ-ಆತ್ಮೀಯತೆ ಮರೆಯಾಗುತ್ತಿದೆ. ನವೀನ ಜೀವನ ಕ್ರಮದಿಂದ ಸಂಬಂಧಗಳು ದೂರವಾಗುತ್ತಿದೆ.

ವಯಸ್ಸಿದ್ದಾಗಿನಿಂದ ತಮಗಾಗಿ ದುಡಿದವರ,ಜೀವನ ತ್ಯಾಗ ಮಾಡಿದ ತಂದೆತಾಯಿಗಳು ಮುಕ್ಕೋಟಿ ದೇವರಿಗೆ ಸಮ.ಕೈ ಹಿಡಿದು ನಡೆಯಲು ಕಲಿಸಿದವರನು ನಡುದಾರಿಯಲ್ಲಿ ಕೈ ಬಿಡುವುದು ಎಷ್ಟು ಸರಿ?ಅವರಿಗೆ ನಾವು ಎಂದಿಗೂ ಭಾರವಾಗಿಲ್ಲ.ಆದರೆ ಅವರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಲ್ಲವೇ….ಆಧುನಿಕತೆ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿಲ್ಲ.ಕುಟುಂಬದ ಮಹತ್ವ ಅರಿತವರೆಲ್ಲ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವರು.ಗೌರವ,ಪ್ರೀತಿಯ ಹಂಚುತಾ ಅವರ ನೆರಳಲ್ಲಿ ಬದುಕು ಕಟ್ಟಿಕೊಳ್ಳುವುದು ಎಷ್ಟೋ ಹಿತ..


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

9 thoughts on “ನೀರುಣಿಸೋಣ…!

  1. ಅವಿಭಕ್ತ ಕುಟುಂಬದ ಸೂಕ್ಷ್ಮ ಒಳನೋಟಗಳ ಚಿತ್ರಿಸುತ್ತಾ,ಹಿರಿಯರ ಆರೈಕೆಯ,ಕುಟುಂಬದ ಸಂಬಂಧಗಳ,ಸಹಬಾಳ್ವೆಯ ಅನಿವಾರ್ಯತೆ ತಿಳಿಸಿದ ರೀತಿ ಅನನ್ಯ ಸಹೋದರಿ.

  2. ವಾಸ್ತವದ ಎರಡೂ ಮುಖಗಳನ್ನು ತುಂಬಾ ಸುಂದರವಾಗಿ ದೃಷ್ಟಾಂತಗಳೊಂದಿಗೆ ನಿರೂಪಿಸಿದೆ ತಮ್ಮ ಈ ಲೇಖನ.ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬುದು ಸರ್ವಕಾಲಿಕ ಸತ್ಯ ಎಂದು ಬಿಂಬಿಸಿದ್ದೇ ತಮ್ಮ‌ಶ್ರೇಷ್ಠ ವಿಚಾರ ಧಾರೆಗೆ ಕನ್ನಡಿ.

  3. ತುಂಬಾ ನೈಜ ಚಿತ್ರಣದಿಂದ ಕೂಡಿದ ಬರಹ ಅದ್ಬುತವಾಗಿದೆ

  4. ತುಂಬಾ ಅರ್ಥಪೂರ್ಣ ಬರಹ. ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮನದಟ್ಟು ಮಾಡುವುದರೊಂದಿಗೆ, ಹಿರಿಯರೂ ಹೊಂದಾಣಿಕೆ ಮಾಡಿಕೊಂಡು ಇರಬೇಕಾದ ಅಗತ್ಯತೆಯನ್ನು ತಿಳಿಸಿದ್ದಾರೆ. ಅಭಿನಂದನೆಗಳು

  5. ಬಾಲ್ಯದಲ್ಲಿ ಉತ್ತಮ ಸಂಸ್ಕಾರ ನೀಡಿ ಗುರು ಹಿರಿಯರಿಗೆ ಗೌರವ, ಮಾನ್ಯತೆ ನೀಡುವುದನ್ನು ಕಲಿಸುವುದರಿಂದ ಹಾಗೂ ಸಂಸಾರ ಮತ್ತು ತಂದೆ ತಾಯಿಯ ಮಹತ್ವವನ್ನು ತಿಳಿಸುವುದರಿಂದ, ನಮ್ಮ ಸಂಸ್ಕೃತಿಯನ್ನು ಹೇಳಿಕೊಡುವುದನ್ನು ಬಿಟ್ಟು ಪಾಶ್ಚಾತ್ಯರ ಆಚಾರ ವಿಚಾರಕ್ಕೆ ಮಹತ್ವ ಕೊಡುವುದು ಕಾರಣವಾಗಿದೆ. ಒಳ್ಳೆಯ ಬರಹ

  6. ಇಂದಿನ ಸ್ಪರ್ಧಾತ್ಮಕ ಆಧುನಿಕ ತಂತ್ರಜ್ಞಾನ ಮುಂದುವರಿದ ಕಾಲದಲ್ಲಿ ವಾಸ್ತವಿಕತೆಯ ಬರಹ…

Leave a Reply

Back To Top