ಕಾತ್ಯಾಯಿನಿಯವರಿಗೆ ‘2021 ರ ನಾಗಶ್ರೀ ಕಾವ್ಯ ಪುರಸ್ಕಾರ’

ಕಾತ್ಯಾಯಿನಿಯವರಿಗೆ

‘2021 ರ ನಾಗಶ್ರೀ ಕಾವ್ಯ ಪುರಸ್ಕಾರ

ಕಾತ್ಯಾಯಿನಿಯವರಿಗೆ ‘2021 ರ ನಾಗಶ್ರೀ ಕಾವ್ಯ ಪುರಸ್ಕಾರ’

ನಾಗಶ್ರೀ ಪ್ರತಿಷ್ಠಾನ(ರಿ) ತುಮಕೂರು ವತಿಯಿಂದ ದಿನಾಂಕ -29.08.2021  ರಂದು ರಾಜ್ಯ ಮಟ್ಟದ ‘ನಾಗಶ್ರೀ ಕಾವ್ಯ ಪುರಸ್ಕಾರ’ ವನ್ನು ನಾಗಶ್ರೀ ಪ್ರತಿಷ್ಠಾನ (ರಿ), ತುಮಕೂರು ವತಿಯಿಂದ ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅವನು ಹೆಣ್ಣಾಗಬೇಕು’ ಕೃತಿಗೆ ನೀಡಲಾಯಿತು. ಈ ಪ್ರಶಸ್ತಿಗೆ ರಾಜ್ಯಾದ್ಯಂತ ಒಟ್ಟು 95 ಕೃತಿಗಳು ಬಂದಿದ್ದು 3 ಸುತ್ತುಗಳಲ್ಲಿ ಕೃತಿಯ ಆಯ್ಕೆ ನಡೆದಿದ್ದು ಮೊದಲ ಸುತ್ತಿನಲ್ಲಿ 20 ಪುಸ್ತಕಗಳನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಯಿತು. ಎರಡನೆಯ ಸುತ್ತಿನಲ್ಲಿ 20 ರಿಂದ ಆರು ಪುಸ್ತಕಗಳು ಈ ಕೆಳಗಿನಂತೆ ಆಯ್ಕೆಯಾದವು. ಕಾತ್ಯಾಯಿನಿ ಅವರ ‘ಅವನು ಹೆಣ್ಣಾಗಬೇಕು’, ಶೃತಿ ಬಿ ಆರ್ ರವರ ‘ಜೀರೋ ಬ್ಯಾಲೆನ್ಸ್’, ಕಿರಸೂರು ಗಿರಿಯಪ್ಪ ಅವರ ‘ ಅಲೆವ ನದಿ ‘ ವಿಭಾ ಪುರೋಹಿತ ರ ‘ ಬಾಲ್ಕನಿ ಕಂಡ ಕವಿತೆಗಳು’, ಚಾಂದ್ ಪಾಶ ಅವರ ‘ಚಿತ್ರ ಚಿಗುರುವ ಹೊತ್ತು’, ತಿಲೋತ್ತಮೆ ಗೊಂಡ ಅವರ ‘ನೀಲಿ ಬಯಲು’.

 ಈ ಪ್ರಮುಖ ಆರು ಕೃತಿಗಳಲ್ಲಿ ಅಂತಿಮವಾಗಿ ಮೂರನೆಯ ಸುತ್ತಿನಲ್ಲಿ ಕಾತ್ಯಾಯಿನಿ ಅವರ ‘ಅವನು ಹೆಣ್ಣಾಗಬೇಕು’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಈ ಪ್ರಶಸ್ತಿಯು 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಡಾ. ಡಿ ವಿ ಪರಮಶಿವಮೂರ್ತಿ ಅಧ್ಯಕ್ಷರು, ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ ಇವರ ಸಮ್ಮುಖದಲ್ಲಿ ತುಮಕೂರು ಕನ್ನಡ ಭವನದಲ್ಲಿ ಪ್ರದಾನ ಮಾಡಲಾಯಿತು ಎಂದು ನಾಗಶ್ರೀ ಪ್ರತಿಷ್ಠಾನನ ಅಧ್ಯಕ್ಷೆ ತೇಜಾವತಿ ಎಚ್ ಡಿ ಯವರು ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಬಾ ಹ ರಮಾಕುಮಾರಿ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕವಯತ್ರಿ ತೇಜಾವತಿ ಎಚ್ ಡಿ ಅವರ ‘ಬಾ ಭವಿಷ್ಯದ ನಕ್ಷತ್ರಗಳಾಗೋಣ’ ಕೃತಿಯನ್ನು ವಿಮರ್ಶಕರಾದ ಡಾ. ಕೆ. ಪಿ. ನಟರಾಜುರವರು ಕೃತಿಯ ಲೋಕಾರ್ಪಣೆಗೊಳಿಸಿ ಈ ಕೃತಿಯು ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಒಂದು ತೂಕದ ಕೃತಿಯಾಗಲಿದೆ ಎಂದರು ಮತ್ತು ಮಹಿಳಾ ಸಂವೇದನೆಯ ಗಟ್ಟಿ ಕವಿತೆಗಳು ಇಲ್ಲಿವೆ. ಕವಯತ್ರಿ ತೇಜಾವತಿ ಅವರು ಭರವಸೆಯ ಕವಿಯಾಗಿ ನಮ್ಮೆದುರಿಗೆ ಕಾಣಸಿಗುತ್ತಾರೆ ಎಂದರು.

ಪ್ರಾಚಾರ್ಯರಾದ ಎಲ್ ಗೀತಾಲಕ್ಷ್ಮಿಯವರು ಪುಸ್ತಕ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ದೇವು ಮಾಕೊಂಡ,ಕೇಂದ್ರ ಪರಿಷತ್ತಿನ ವ ಚ ಚನ್ನೇಗೌಡ, ವಿಮರ್ಶಕರಾದ ಎಚ್ ದಂಡಪ್ಪ, ಚಲನಚಿತ್ರ ನಿರ್ದೇಶಕ ರವಿ, ಕವಿ ವಿಜಯ ಮುದಲ್, ತುಮಕೂರು ಜಿಲ್ಲಾ ಕಸಾಪದ ಅಧ್ಯಕ್ಷೆ ರಮಾಕುಮಾರಿ ಪರಿಷತ್ತಿನ  ಇಂದಿರಮ್ಮ, ಯಶೋಧ ಜೆ ಎಸ್, ಲೇಖಕ ಡಾ. ಗಿರೀಶ್ ಕುಲಕರ್ಣಿ ಸಂಶೋಧಕರಾದ ಡಾ. ನಂಜುಂಡಸ್ವಾಮಿ, ಮುಂತಾದ ಸಾಹಿತ್ಯಾಸಕ್ತರು  ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಬಿ ಮರುಳಯ್ಯ ಸ್ವಾಗತಿಸಿದರು, ಶ್ರೀಮತಿ ಪುಷ್ಪಾವತಿ ಎಚ್ ಎಂ ನಿರೂಪಿಸಿದರು ಎಚ್ ಗೋವಿಂದಯ್ಯ ಅವರು ವಂದಿಸಿದರು.

**************************

Leave a Reply

Back To Top