ಅನಿಸಿಕೆ
ನನ್ನಗ್ರಹಿಕೆಯಲ್ಲಿ
ಲಂಕೇಶರ ‘ಅವ್ವ’
ವಸುಂಧರಾಕದಲೂರು
ಅವ್ವ
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ
ಹೆಸರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟುಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡಾ ಇಡಲಿಲ್ಲ…
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ,
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ.
ಲಂಕೇಶರ‘ಅವ್ವ’ಕನ್ನಡದವಿಶೇಷಕವಿತೆ. ಕ್ಲಾಸಿಕ್ಎನ್ನಬಹುದಾದಅಥವಾನೆಲದಸೊಗಡುತುಂಬಿರುವಕವಿತೆ.
ಗ್ರಾಮ್ಯವಾಸಿಯಾದತನ್ನತಾಯಿಯದೈನಂದಿನಚೈತನ್ಯ, ಚಲನಶೀಲತೆ, ಸಹಜನಡವಳಿಮೊದಲಾದವನ್ನುತಾನುಕಂಡಂತೆ, ನಾನಾಹೋಲಿಕೆಗಳಲ್ಲಿಕವಿತೆಯಮೂಲಕ ಓದುಗರಿಗೆನೀಡಿದ್ದಾರೆ. ಈಕವಿತೆಯಾವುದೇ ಭಾವತೀವ್ರತೆಗೆಒಳಗಾಗಿಲ್ಲಎಂದರೂಸಹಕವಿತೆಒಳಗೆತಣ್ಣಗೆಹರಿಯುವಸುಡುಸುಡುಸತ್ಯಗಳುನೆಲದಹಾಡಾಗಿಯುಗಯುಗವೇಕಳೆದರೂಬತ್ತದೆಹರಿಯುತ್ತಾಬಂದಿವೆ. ಭೂಮಿಗೀತೆಯಾಗಿ, ಯಾವುದೇನೆಲದಅಮ್ಮಂದಿರಜೀವಂತಪ್ರತಿನಿಧಿಯಾಗಿ..
ಹಲವುಆಯಾಮಗಳನ್ನುಒಳಗುಮಾಡಿಕೊಂಡಿರುವಈಕವನವನ್ನುಕನ್ನಡದಪ್ರಖ್ಯಾತವಿಮರ್ಶಕರುವಿಮರ್ಶಿಸಿದ್ದಾರೆ. ಓದುಗರುಬಹುರೂಪಿಅಭಿಪ್ರಾಯಗಳನ್ನುನೀಡಿದ್ದಾರೆ. ಇಷ್ಟೆಲ್ಲಾವಿಮರ್ಶೆ- ಅನಿಸಿಕೆ, ಅಭಿಪ್ರಾಯಗಳನ್ನುಪಡೆದಿದ್ದರೂಸಹ, ಸೂಕ್ಷ್ಮಾರ್ಥಬಾಹುಳ್ಯಹೊಂದಿರುವಈಕವನವುಪ್ರತೀಬಾರಿಯೂವಿಮರ್ಶೆಯಹೆಬ್ಬಾಗಿಲನ್ನೇತೆರೆಯುತ್ತದೆ. ಹಾಗಾಗಿಯೇಇದು‘ಇದಂಇತ್ಥಂ’ಎಂಬಮಾತಿಗೆಒಳಗಾಗದಕವಿತೆ.
‘ಅವ್ವ’ಶೀರ್ಷಿಕೆಯೇಸಾಕುಕವನವುಯಾರಿಗಾದರೂಆಪ್ತವಾಗಲು.
ನನ್ನವ್ವಫಲವತ್ತಾದಕಪ್ಪುನೆಲ
ಅಲ್ಲಿಹಸಿರುಪತ್ರದಹರವು, ಬಿಳಿಯಹೂಹಬ್ಬ;
ಸುಟ್ಟಷ್ಟುಕಸುವು, ನೊಂದಷ್ಟುಹೂಹಣ್ಣು
ಮಕ್ಕಳೊದ್ದರೆಅವಳಅಂಗಾಂಗಪುಲಕ;
ಹೊತ್ತಬುಟ್ಟಿಯಇಟ್ಟುನರಳಿಎವೆಮುಚ್ಚಿದಳುತೆರೆಯದಂತೆ.
‘ನನ್ನವ್ವಫಲವತ್ತಾದಕಪ್ಪುನೆಲ!’
Mother Earth ಎಂಬಸಾರ್ವತ್ರಿಕವಾದಭೂಮಿ-ತಾಯಿಪರಿಕಲ್ಪನೆಯನ್ನುಸಮೀಕರಿಸಿ, ಸಮರ್ಥಿಸುವಂತಿದೆಕವನದಆರಂಭ. ಭೂಮಿತೂಕದ, ಕ್ಷಮಯಾಧರಿತ್ರಿ ಎಂಬಕೆಲವುನುಡಿಗಟ್ಟುಗಳುಅದೇಸತ್ಯಎನ್ನುವಂತೆಇದರ ಬಗ್ಗೆಇರುವಯಾವತ್ತೂತಕರಾರುಗಳೊಂದಿಗೆ ಚಾಲ್ತಿಯಲ್ಲಿರುವಹಾಗೆ.
ಈವಿಚಾರದಮೇಲಿನವಾದಒಂದೆಡೆಯಿರಲಿ. ಕವನದಲ್ಲಿಕವಿ, ತನ್ನತಾಯಿಯನ್ನುಕಪ್ಪನೆಯಫಲವಂತಿಕೆನೆಲವೆಂದುಕರೆಯುತ್ತಲೇಆಕೆಗೆನೆಲದನಂಟಿರುವಹಲವುಜೀವಗಳಸಕಲಗುಣಲಕ್ಷಣಗಳನ್ನುಆಗಾಗ್ಗೆಆರೋಪಿಸುವಮೂಲಕಈಕಾವ್ಯವನ್ನುಓದುಗರುಯಾವಹಿನ್ನೆಲೆಯಲ್ಲಿನೋಡಬೇಕೆಂಬಸೂಕ್ಷ್ಮಸುಳಿವನ್ನುನೀಡಿರುತ್ತಾರೆಯೇಎಂಬಊಹೆಯೊಂದನ್ನೂಪಕ್ಕದಲ್ಲಿಟ್ಟುಕೊಂಡುವಿಶ್ಲೇಷಿಸಬಹುದೇ..!?
‘ಅಲ್ಲಿಹಸಿರುಪತ್ರದಹರವು, ಬಿಳಿಯಹೂಹಬ್ಬ;’
ಅವ್ವನೆಂದರೆಮಕ್ಕಳಿಗೆಸಹಜವಾಗಿಯೇಸಮೃದ್ಧಸಡಗರ. ಹಸಿರುಹೂಹಬ್ಬಗಳೂಆಸಂಭ್ರಮದಭಾಗವೇ. ಅವ್ವನೆಂದರೂಅದೇ…. ಈಸಕಾರಾತ್ಮಕಸಾಲುಗಳೊಂದಿಗೇ…. ನೆಲದಲ್ಲಿಹಣ್ಣುಹೂಬೆಳೆದುಹಸುರುಹರವಾಗಿದ್ದರೆ, ಕಂಗಳಿಗೆಹಬ್ಬವಾಗುವುದುಸಹಜವೇ. ಅದುನೆಲದಫಲವತ್ತತೆ. ಫಲವತ್ತಾದನೆಲವುಸ್ತ್ರೀಗರ್ಭಕೇಂದ್ರದಪ್ರತಿಮೆಯಾಗಿಯೇಬಳಕೆಯಾಗಿದೆ. ಗರ್ಭಕಟ್ಟದಹೆಣ್ಣನ್ನುಬಂಜೆನೆಲದಹಾಗೆಗರಿಕೆಯನ್ನೂಚಿಗುರಿಸಲಿಲ್ಲಎಂದುಕರೆಯುವಉದಾಹರಣೆಗಳುಅದೆಷ್ಟಿಲ್ಲ..?! ಹೊರುವುದುಹೆರುವುದರಹೊರತುಹೆಣ್ಣಿಗೆಬೇರೆಆಯ್ಕೆಗಳುಇಲ್ಲವೇ? ಇವೆ. ಆದರೂಆಯ್ಕೆಯಹಲವುಅವಕಾಶಗಳನ್ನುನಿರಾಕರಿಸಲಾಗುತ್ತಾಬರಲಾಗಿದೆ. ಕಾಲಾಯತಸ್ಮೈನಮಃ.
‘ಸುಟ್ಟಷ್ಟುಕಸುವು, ನೊಂದಷ್ಟುಹೂಹಣ್ಣು’
ಈಬೇಸಾಯಕೇಂದ್ರಿತಪರಿಭಾಷೆಯಲ್ಲಿಅವ್ವನಿಗೆಕಷ್ಟವಾದರೂಮಕ್ಕಳಿಗೆಸುಖವೆನುವಭಾವವಿದೆ. ಹಡೆಯುವನೋವುಇದಕೆಸಾಕ್ಷ್ಯವೇ! ತಾಯ್ತನದಹಾದಿಯಇತರೆಕಾರ್ಪಣ್ಯಗಳನ್ನೂಇದರಜೊತೆಗೆಪರಿಗಣಿಸಬಹುದೇ..? ‘ಸುಟ್ಟರೆ -ಕಸುವು; ನೊಂದುಬೆಂದರೆ-ಹೂಹಣ್ಣು; ಮಕ್ಕಳೊದ್ದರೆ-ಅಂಗಾಂಗಪುಲಕ!’ ಇದು ತಾಯ್ತನದನಲಿವುನೋವಿನಸಮ್ಮಿಶ್ರಭಾವಕಟ್ಟಿಕೊಡುವಂತಿದೆ. ಹಾಗಾದರೆ, ನೊಂದೂಬೆಂದೂಒದೆಸಿಕೊಂಡೂಸಹಿಸಿಕೊಳ್ಳುವುದುಅವ್ವನಹಾಗೂನೆಲದವ್ವನಪಾಡೇ?! ನೆಲಹದಮಾಡಿಸರಿಯಾಗಿಸಂಸ್ಕರಿಸದಿದ್ದರೆಮಾನವತನಗೆಬೇಕಾದ್ದುಬೆಳೆದುಕೊಳ್ಳುವುದುಹೇಗೆ? ಆದರೆ, ಹೆಣ್ಣನ್ನುಹಾಗೆಸಂಸ್ಕರಿಸಲುಸಾಧ್ಯವೇ? ಅದುಸರಿಯೇ..?!
‘ಹೊತ್ತಬುಟ್ಟಿಯಇಟ್ಟುನರಳಿಎವೆಮುಚ್ಚಿದಳುತೆರೆಯದಂತೆ’ಕವನದಮೊದಲಪದಗುಚ್ಛದಲ್ಲೇಹೇಳಿರುವಈಮಾತು, ಸಿನೆಮಾದಕ್ಲೈಮ್ಯಾಕ್ಸನ್ನುಮೊದಲೇತೋರಿಸಿದಂತೆಕವನದಸಾರಾಂಶವನ್ನುಕಟ್ಟಿಕೊಡುತ್ತದೆ. ಹೆೊತ್ತಬುಟ್ಟಿಯಒಳಗೆಏನಿತ್ತು!? ಅದನ್ನೆಲ್ಲಿಟ್ಟಳು? ಅವ್ವನರಳಿದ್ದೇತಕ್ಕೆ? ಬುತ್ತಿತೆಗೆದಿಟ್ಟಿದ್ದಕ್ಕೋ? ಅಥವಾಇದುವರೆಗೂಹೊತ್ತುಬಂದಆಯಾಸಕ್ಕೋ?! ಅಂತೂಆಕೆಎವೆಮುಚ್ಚಿದ್ದುಮಾತ್ರನರಳಿಕೊಂಡೇಎನ್ನುವುದುಕವನದಸ್ಥಾಯಿಭಾವವಾಗಿಉಳಿಯುತ್ತದೆ.
ಪಲ್ಲಜೋಳವಎತ್ತಿಅಪ್ಪನ್ನಮೆಚ್ಚಿಸಿತೋಳಬಂದಿಯಗೆದ್ದು,
ಹೆಂಟೆಗೊಂದುಮೊಗೆನೀರುಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯಹೊಲವಕೈಯಲ್ಲಿಉತ್ತು,
ಹೂವಲ್ಲಿಹೂವಾಗಿಕಾಯಲ್ಲಿಕಾಯಾಗಿ
ಹೆಸರುಗದ್ದೆಯನೋಡಿಕೊಂಡು,
ಯೌವನವಕಳೆದವಳುಚಿಂದಿಯಸೀರೆಉಟ್ಟುಕೊಂಡು.
‘ಪಲ್ಲಜೋಳವಎತ್ತಿಅಪ್ಪನಮೆಚ್ಚಿಸಿ’ -ಎಂಬಲ್ಲಿಗೆ,
ಮತ್ಯಾರದೋಅಲ್ಲಸ್ವತಃಪತಿಯಮೆಚ್ಚುಗೆಗಾಗಿದುಡಿಯುವಅನಿವಾರ್ಯಆಕೆಯದು. ಮೆಚ್ಚುಗೆಯಪ್ರತಿಫಲ – ತೋಳಬಂದಿ. ಹೆಣ್ಣುಜೀವಕಡೆಗೆಬೇಡುವುದುಇಷ್ಟನ್ನೇ… ಬೇಂದ್ರೆಯವರಿಂದಜನಪ್ರಿಯವಾದಒಲವಿನೊಡವೆ, ಪ್ರೀತಿಯಕೊಡುಗೆ. ಹಾಗಾದರೆಆಕೆ ಮೈಮುರಿದುದುಡಿಯದೇಇದ್ದರೆಆಕೆಗೆಈಪ್ರೀತಿದಕ್ಕದ? ದುಡಿಯಪ್ರತಿಫಲವಾದಒಲವುನಿಜವಾದಒಲವೇ? ಇಲ್ಲಾದುಡಿತಕ್ಕೆ, ವಂಶೋದ್ಧಾರಕ್ಕೆತನ್ನಒಡಲನ್ನೂ, ಸಮಯವನ್ನೂನೀಡಿಅವಕಾಶಮಾಡಿಕೊಟ್ಟಕಾರಣಕ್ಕೆಅವಳಿಗೆಸಿಗುವವೇತನವೆ? ವೇತನಕ್ಕೆಒಲವಿನರೂಪವೇ?!
ನಿಜವಾಗಿಯೂ, ಆಕೆಫಲವತ್ತಾಗಿದ್ದವಳು. ಹಾಗಾಗಿಯೇದುಡಿದವಳು. ಮನೆತನದಹೆಸರು, ಅನ್ನಮೂಲಗದ್ದೆಕಾದವಳು. ಮಕ್ಕಳನೀಡಿದವಳು. ಅವಳಿಗೆಸಿಗುವುದುಪ್ರೀತಿಮಾತ್ರ! ಹಾಗೆದುಡಿದಕಾರಣಕ್ಕೇಸಿಗುವಮಕ್ಕಳಅಪ್ಪನಮೆಚ್ಚುಗೆ..! (ತನ್ನಗಂಡನಎಂದೇಕೆಕವಿಬಳಸಲಿಲ್ಲ?! ಏಕೆಂದರೆ, ಹೆಣ್ಣಿಗೆಆತ್ಮಸಖಗಂಡಸಿಗುವುದುಕಷ್ಟಸಾಧ್ಯ. ಆಕೆಅದಕ್ಕಾಗಿಸದಾಹಂಬಲಿಸುತ್ತಿರಬೇಕೇನೋ! ಆದರೆ, ಗಂಡಮಾತ್ರಮನೆಯಯಜಮಾನನಾಗಿ, ಅಪ್ಪನಾಗಿತನ್ನಕರ್ತವ್ಯನಿರ್ವಹಿಸುತ್ತಿರುತ್ತಾನೆ. ಹೆಂಡತಿಗೆಗಂಡನಾಗುವುದುಕೆಲವೊಮ್ಮೆಮಾತ್ರವೇ? ಇದು ಪಾರಂಪರಿಕವಾಗಿಬೆಳೆದುಬಂದರೂಢಿಯೇ?!) ಇರಲಿ,
ಸ್ವತಃಶ್ರಮಜೀವಿಯಾದಅವ್ವ, ಹೂವಾಗಿ, ಕಾಯಾಗಿ, ಹಸುರಗದ್ದೆಯಾಗಿಪ್ರಕೃತಿಯೊಡನೆಲೀನವಾಗಿತನ್ಮಯತೆಯಿಂದದುಡಿಯುತ್ತಾಳೆ. ತನ್ನಬದುಕು, ದುಡಿಮೆಯೆಲ್ಲವೂತನ್ನದೆಂದುನಂಬಿರುವಮನೆಯಉದ್ಧಾರಕ್ಕೆ. ಇಷ್ಟೆಲ್ಲಾದುಡಿದರೂಆಕೆಯಯೌವನಸಂಪನ್ನಆಗುವುದುಚಿಂದಿಯಸೀರೆಯಲ್ಲಿ. ಹಾಗಾದರೆ, ಎಲ್ಲಿಹೋಯ್ತುಆಕೆಯದುಡಿಮೆಯಫಲ? ಎಲ್ಲಿಮರೆಯಾಯ್ತುಆಕೆಯಸಂಪತ್ತು? ಆಕೆಯಶ್ರಮದಾನಕ್ಕೆಸಿಕ್ಕಬೆಲೆಏನೆಂಬಪ್ರಶ್ನೆನಮಗೆಕಾಡದೆ? ಇದುಯಾವತ್ತೂನಡೆದುಬಂದಿರುವರೂಢಿಯಲ್ಲವೇ? ನನ್ನಸಂಪಾದನೆನನ್ನಇಷ್ಟುಎಂದುಗಂಡುಎದೆಉಬ್ಬಿಸಿಹೇಳುವಂತೆ, ದುಡಿಯುತ್ತಿರುವ, ಸಂಪಾದಿಸುತ್ತಿರುವಹಲವಾರುಹೆಣ್ಣುಗಳುಬಹುಶಃಹೇಳಲಾರರು…
ಮತ್ತೊಂದುಗಮನಿಸಬೇಕಾದಅಂಶಎಂದರೆ, ರೈತಮಹಿಳೆಯರು, ಇಥವಾಗ್ರಾಮೀಣಮಹಿಳೆಯರುಮಾಡುವತಮ್ಮದೇಹೊಲಗದ್ದೆತೋಟಗಳಕೆಲಸ, ಪಶುಸಂಗೋಪನೆ, ಜೇನುಸಾಕಣೆ…. ಇವೇಮೊದಲಾದವುಅವರಿಗಿರುವಹಣಸಂಪಾದನೆಯಮಾರ್ಗಎಂದುಪರಿಗಣಿಸುವುದಿಲ್ಲ. ದುಡಿಯುವುದುಅವರದೈನಂದಿನಚಟುವಟಿಕೆಭಾಗಹಾಗೂಕರ್ತವ್ಯ. (ಕೆಲವುಅಪವಾದಗಳನ್ನುಹೊರತುಮಾಡಿ.)
ಸತ್ತಳುಈಕೆ:
ಬಾಗುಬೆನ್ನಿನಮುದುಕಿಗೆಷ್ಟುಪ್ರಾಯ?
ಎಷ್ಟುಗಾದಿಯಚಂದ್ರ, ಒಲೆಯೆದುರುಹೋಳಿಗೆಯಸಂಭ್ರಮ?
ಎಷ್ಟೋಸಲಈಮುದುಕಿಅತ್ತಳು
ಕಾಸಿಗೆ, ಕೆಟ್ಟಪೈರಿಗೆ, ಸತ್ತಕರುವಿಗೆ;
ಎಷ್ಟುಸಲಹುಡುಕುತ್ತಊರೂರುಅಲೆದಳು
ತಪ್ಪಿಸಿಕೊಂಡಮುದಿಯಎಮ್ಮೆಗೆ?
‘ಸತ್ತಳುಈಕೆ: …!’
‘ಯೌವನಕಳೆದಳುಚಿಂದಿಸೀರೆಯಉಟ್ಟುಕೊಂಡು’ ಎಂಬಸಾಲುಮುಗಿದಮೇಲೆಆರಂಭವಾಗುವಸಾಲುಗಳೇ.. ‘ಸತ್ತಳುಈಕೆ!’ ಅರೆ, ಯೌವನಮುಗಿದತಕ್ಷಣಸಾವೇ?! ಹೆಣ್ಣಿನಬದುಕಿನರ್ಥಅವಳಯೌವನದಲ್ಲಿದೆಯೇ? ಫಲವಂತಿಕೆಕಳೆದತಕ್ಷಣಅವಳುನಿಷ್ಪ್ರಯೋಜಕಳೇ? ಏಕೆಹೀಗೆ?! ಫಲವಂತಿಕೆಬತ್ತಿದಮಾತ್ರಕ್ಕೆನೆಲದಹಾಗೂಗರ್ಭನಿಂತಕಾರಣಕ್ಕೆಹೆಣ್ಣಿನಬದುಕುಮುಗಿಯಿತೆ? ಕೇವಲಲೈಂಗಿಕಸಾಮರ್ಥ್ಯ, ಗರ್ಭಕೇಂದ್ರಿತಫಲಿತಗಳು ಆಕೆಗೆಮಾನದಂಡವೇ? ಹಾಗಾದರೆಯೌವನದಮಾನದಂಡಗಳೇನು? ದೇಹಸಂವೇದನೆಮುಖ್ಯವಾಗಿ, ಮಾನಸಿಕಸಂವೇದನೆಯುಗೌಣವಾಗುವುದೇಕೆ? ಮನಸ್ಸಲ್ಲಿ ಇನ್ನೂಮುಗಿಯದಹರೆಯವಿರುವಾಕೆಮುದುಕಿಹೇಗಾದಾಳು? ಹಾಗೂಮುದಿತನಬಂದಮಾತ್ರಕ್ಕೇಜೀವಂತಿಕೆಕಳೆದುಹೋಗುವುದೇ? ಚೈತನ್ಯಜಡವಾಗುವುದೇ? ನಡು-ಮಧ್ಯವಯಸ್ಸುಎಂಬಹಂತವುಇರುವುದನ್ನುಸ್ತ್ರೀಯರಿಗೆಪರಿಗಣಿಸಲಾಗದೆ?! ಮೆನೋಪಾಸಿನಈಹಂತದಬಗ್ಗೆಈಗವಿವಿಧಮಾಧ್ಯಮಗಳಲ್ಲಿಹೆಚ್ಚುಚರ್ಚೆಯಾಗುತ್ತಿರುವುದುಒಂದುಒಳ್ಳೆಬೆಳವಣಿಗೆ. ಆದರೂಬಹುಮಂದಿಯಅಭಿಪ್ರಾಯದಲ್ಲಿಹೆಣ್ಣಿಗೆಯೌವನಕಳೆದರೆಸಾವೇ! ಇದುಗರ್ಭಕೇಂದ್ರಿತವಾದ. ಅಂತಹಹೆಣ್ಣುಬದುಕಿದ್ದೂಬೆಲೆಯಿಲ್ಲಅಥವಾಆಕೆಗೆಸಾವಿನಂತಹನಿರ್ಭಾವುಕಬದುಕು! ಇದೆಂತಹಾಅನ್ಯಾಯ..?
ಕವಿತೆಸಾಲಿಗೆಮರಳುವುದಾದರೆ, ಇಲ್ಲೇಪರಮಾಶ್ಚರ್ಯವಾಗುವುದು! ರಾಜನಾಗಿರುವಹಾಗೂಮುದುಕನೂಆಗಿರುವಯಯಾತಿಗೆಮತ್ತೆಯೌವನಬೇಕು. ಅದೂಹರೆಯದಮಗನಿಂದದೊರೆಯುವುದಾದರೂಸರಿಯೇ. ಪಡೆಯುವುದುಆತನಹಕ್ಕಾಗಬಹುದು. ಮಗನಿಗೆಹರೆಯದಹೆಂಡತಿಯಿರುವಾಗಲೂ! ಯಯಾತಿಬಯಸಿದಮಾತ್ರಕ್ಕೇಯೌವನವನ್ನುಕವಿಗಳುತಮ್ಮಕಾವ್ಯದಲ್ಲಿಸುಲಭವಾಗಿಕೊಡಿಸಿಬಿಡುತ್ತಾರೆ! ಅವನಇಬ್ಬರುವಯಸ್ಸಾಗುತ್ತಿರುವಹೆಂಡತಿಯರಜೀವನದಬಗ್ಗೆಯೋಚಿಸುವಯಾವಗೊಂದಲಚರ್ಚೆಗಳಿಲ್ಲದೆ. ತನ್ನದೇಮನೆಗಾಗಿಜೀವಸವೆಸಿದವಳಿಗೆ – ‘ಬಾಗುಬೆನ್ನಿನಮುದುಕಿ’ಪಟ್ಟ; ಯಯಾತಿಗೆಮರಳಿಯೌವನ..!
ಪೂರ್ವಕಾವ್ಯಗಳಲ್ಲಿಜನರಪೂರ್ವಾಗ್ರಹನಿಲವುಬದಲಾಗುವುದಿಲ್ಲಎಂದಮೇಲೆಅದರಪಳೆಯುಳಿಕೆಯಾಗಿಮುಂದುವರೆದುಬರುವಕಾವ್ಯಗಳಲ್ಲಿಅದರದ್ದೇಪ್ರತಿಚ್ಛಾಯೆಕಂಡರೆಆಶ್ಚರ್ಯಪಡಬೇಕಿಲ್ಲ.
‘ಎಷ್ಟುಗಾದಿಯಚಂದ್ರ, ಒಲೆಯೆದುರುಹೋಳಿಗೆಯಸಂಭ್ರಮ?’
ಅವ್ವಆಮನೆಗೆಸೇರಿದಂದಿನಿಂದಆಕೆ ಕಳೆದಅಥವಾಪಡೆದವರ್ಷಗಳಲೆಕ್ಕಕ್ಕೆಇಲ್ಲಿಯುಗಾದಿಯನೆನಪು. ಎಷ್ಟುಉಗಾದಿಯೋಅಥವಾಎಷ್ಟುಮಲಗುವಗಾದಿಯೋ! ಅಕ್ಷರಬಿಡಿಸಿಕೊಂಡಂತೆಹೊಸಭಾವ. ಯುಗಾದಿಹರ್ಷತರುವವರುಷದಹಬ್ಬ, ಚಂದಿರಒಲವಿನತಂಪುತರುವಭಾವ. ಕವಿಯತಾಯಿ, ಸಾಮಾನ್ಯಹೆಣ್ಣುತನ್ನಬದುಕಿನಲ್ಲಿಹಬ್ಬಗಳನ್ನುಸಂಭ್ರಮಸಿದಳೋ, ಅಥವಾಇರುಳಹಾಸಿಗೆಗಳಲ್ಲಿಒಲವಿನತಂಪನ್ನುಉಂಡಳೋಕಂಡವರಾರು? ಎಷ್ಟಾದರೂಆಕೆಫಲವತ್ತಾದನೆಲಉಳುವುದಕ್ಕೆ, ಅದರಪ್ರತಿಫಲಪಡೆಯುವುದುಕುಟುಂಬದಅಥವಾಗಂಡನಹಕ್ಕು. ಮದುವೆಯಾದಹೊಸತರಲ್ಲಿಆಕೆಕಂಡಕನಸುಗಳೇನು? ಅವುನನಸಾದವೇ?! ಇದೊಂದುವಿಚಾರಿಸಬೇಕಾದಪ್ರಶ್ನೆಯೇಅಲ್ಲ. ಆಕೆಒಂದುದುಡಿಯುವಜೀವ. ಹಾಗಾಗಿಒಲೆಯೆದುರುಕೂತುಹೋಳಿಗೆಮಾಡುವವಳು. ಇತರರಿಗೆಸಿಹಿಉಣಿಸಿದವಳಿಗೆ, ಬದುಕುಹಬ್ಬವಾಗಿಸಿಹಿಯಉಣಿಸಿತ್ತೋ? ಯಕ್ಷಪ್ರಶ್ನೆ.
ಅವ್ವನಪ್ರಾಯದಬಗ್ಗೆ, ಬದುಕಿನಸಂಭ್ರಮದಬಗ್ಗೆಯೋಚಿಸುತ್ತಲೇ.. ಕವಿಯುಅವಳನ್ನುಸಾಮಾಜಿಕಳನ್ನಾಗಿನೋಡುತ್ತಾರೆ. ಮತ್ತೆಮತ್ತೆಅವಳನ್ನುಕಾಸಿಗೆ, ಕೆಟ್ಟಪೈರಿಗೆ, ಸತ್ತಕರುವಿಗೆ, ಕಳೆದಎಮ್ಮೆಗೆಕಂಗಾಲಾಗುವ ಅತೀಸಾಧಾರಣ ದಿನಚರಿಯಲ್ಲಿಕಾಣುತ್ತಾರೆ. ಇದುಜೀವನ… ಇದುವೇಜೀವನಎನ್ನುವಂತೆವಿಶೇಷಮಹತ್ವವಿಲ್ಲದೆ.
ಸತಿಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;
ಚರಿತ್ರೆಪುಸ್ತಕದಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ, ರಾಮಕೃಷ್ಣರಸತಿಯರಂತಲ್ಲ;
ದೇವರಪೂಜಿಸಲಿಲ್ಲ; ಹರಿಕತೆಕೇಳಲಿಲ್ಲ;
ಮುತ್ತೈದೆಯಾಗಿಕುಂಕುಮಕೂಡಇಡಲಿಲ್ಲ.
ಕವಿ, ತನ್ನತಾಯಿಯನ್ನುಸತಿಸಾವಿತ್ರಿ, ಜಾನಕಿ, ಊರ್ಮಿಳೆಅಂಥಾಪೌರಾಣಿಕರೊಡನೆ; ಕಸ್ತೂರಬಾ, ಶಾರದಾಮಾತೆಯರಂತಹಐತಿಹಾಸಿಕಮಹತ್ತಿನಮಹಿಳೆಯರೊಡನೆಯೂಸಮೀಕರಿಸುತ್ತಾರೆ. ಪೌರಾಣಿಕಕಥೆಗಳಿಗೆಕಲ್ಪನೆಯೇಪ್ರಧಾನ. ಒಂದುಆದರ್ಶವನ್ನುಸಾಧಿಸುವಸಲುವಾಗಿಪಾತ್ರಗಳನ್ನುಕಟ್ಟಿದಬೆಳೆಸಿದಕಥೆಗಳವು. ಇನ್ನಿಬ್ಬರುಐತಿಹಾಸಿಕಮಹಿಳೆಯರುತಮಗೆದೊರೆತಜೀವನದರ್ಶನಕ್ಕೆತಕ್ಕಂತೆಬದುಕುಕಟ್ಟಿಕೊಂಡವರು. ಹಾಗಾಗಿಸಾಮಾನ್ಯಗ್ರಾಮೀಣಳಾದತನ್ನತಾಯಿಗೆಯಾವದಿವ್ಯತೆ, ಶಾಂತತೆ, ಸೌಂದರ್ಯ-ಗಾಂಭೀರ್ಯವನ್ನುಕವಿಆರೋಪಿಸುವುದಿಲ್ಲ. ‘
ಚರಿತ್ರೆಪುಸ್ತಕದಶಾಂತ, ಶ್ವೇತ, ಗಂಭೀರೆಯಲ್ಲ’
ಇದುನೋಡಿವಾಸ್ತವಕ್ಕೂಆದರ್ಶದಕಲ್ಪನೆಗೂಇರುವವ್ಯತ್ಯಾಸದಸತ್ಯಾಂಶ. ಶಾಂತಳಲ್ಲ, ಬಿಳುಪಲ್ಲ, ಗಂಭೀರಳಲ್ಲಎಂದುನಿಷೇಧಾತ್ಮಕವಿಚಾರಗಳನ್ನುಹೇಳುತ್ತಲೇಅವೆಲ್ಲವೂಆಗಬೇಕೇಕೆಎಂಬಗಟ್ಟಿಧ್ವನಿಯೊಂದನ್ನುಕೇಳಿಸುತ್ತಾರೆ. ನನ್ನಮ್ಮಅವರಮ್ಮನಂತಿಲ್ಲಎಂದುಕೊರಗುವಎಷ್ಟೋಮಂದಿಗಳಕಣ್ಣಪೊರೆಇದರಿಂದಾದರೂಕಳಚಲಿ..
‘ಮಾತೃದೇವೋಭವ’ ಎಂದುಮಂತ್ರೋಚ್ಚಾರಮಾಡಿತಾಯಿಯನ್ನುದೈವತ್ವಕ್ಕೆಏರಿಸಿಆಮೂಲಕಆಕೆತನಗೆಪ್ರತಿಕೂಲವಾದಹಲವುಸಂದರ್ಭಗಳನ್ನೂಸಹಅವುಡುಗಚ್ಚಿಸಹಿಸುತ್ತಾಕೇವಲವರಗಳನ್ನೇಕರುಣಿಸುವಸಹನಾಮೂರ್ತಿಆಗಿಸುವುದುಒಂದುತಂತ್ರವೇನೋ… ಆದರೆ, ಕವಿಇಲ್ಲಿಅವ್ವನನ್ನುದೇವರಾಗಿನೋಡುವುದಿಲ್ಲ. ದೇವರನ್ನೂಮಾಡುವುದಿಲ್ಲ. ಇದುಮೆಚ್ಚಲರ್ಹಭಾವಭಾಗ.
‘ದೇವರಪೂಜಿಸಲಿಲ್ಲ; ಹರಿಕತೆಕೇಳಲಿಲ್ಲ;
ಮುತ್ತೈದೆಯಾಗಿಕುಂಕುಮಕೂಡಇಡಲಿಲ್ಲ.’
ಸತಿಸಾವಿತ್ರಿ, ಜಾನಕಿ, ಊರ್ಮಿಳೆಯರಂತಲ್ಲ ಎನ್ನುತ್ತಲೇಮುತ್ತೈದೆಯಾಗಿಕುಂಕುಮಕೂಡಇಡಲಿಲ್ಲಎನ್ನುವುದುಎಂತಹಸತ್ಯದರ್ಶನ! ನಿತ್ಯಬದುಕಿಗೆಹೋರಾಡುವವರುವ್ರತತಪಜಪಗಳಲ್ಲಿಕಾಲಕ್ಷೇಪಮಾಡುವುದಿಲ್ಲವೆನಿಸುತ್ತದೆ. ಅವರಿಗೆಕಾಯಕವೇಕೈಲಾಸ. ಹೊರಗಿನಆಡಂಬರಅಲಂಕಾರಗಳಿಗಿಂತಅಂತರಂಗದಶುದ್ಧಿಎಡೆಗೆತುಡಿಯುತ್ತಿರುತ್ತಾರೆ. ಕರಿಮಣಿ, ಕಾಲುಂಗರ, ಬೈತಲೆ, ಬೊಟ್ಟು, ಮೂಗುತಿ, ಬೆಂಡೋಲೆ, ಬಳೆ-ಸರಧರಿಸದಮಾತ್ರಕ್ಕೆಮುತ್ತೈದೆಅಲ್ಲವೆನ್ನುವವರುಶತಮೂರ್ಖರು. ಮುತ್ತೈದೆತನಎಂಬುದನ್ನೇನಿಕಷಕ್ಕೆಒಡ್ಡಬೇಕಾಗಿದೆಎನ್ನುತ್ತದೆಆಧುನಿಕಸ್ತ್ರೀವಾದ. ಇಲ್ಲಿಕವಿಸಹ ಹೆತ್ತಾಕೆಯಹಿರಿಮೆ, ಗರಿಮೆ, ಮಿಗಿಲಾಟವನ್ನುಯಾವುದೋಅತೀತಕಲ್ಪನೆಯಲ್ಲಿಕಟ್ಟುವುದಿಲ್ಲ. ಸಹಜನೆಲೆಯಲ್ಲಿಅವ್ವನನ್ನುಅವರುನೆನೆಯುತ್ತಾ ಆಕೆಯಸತ್ವಗುರುತಿಸಿದ್ದರಿಂದಲೇಕಾವ್ಯಜನಮಾನಸರಹೃದಯಗೆದ್ದಿರುವುದು.
ಬನದಕರಡಿಯಹಾಗೆ
ಚಿಕ್ಕಮಕ್ಕಳಹೊತ್ತು
ಗಂಡನ್ನಸಾಕಿದಳುಕಾಸುಗಂಟಿಕ್ಕಿದಳು.
ನೊಂದನಾಯಿಯಹಾಗೆಬೈದುಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟಕೋತಿಯಹಾಗೆ:
ಎಲ್ಲಕ್ಕೆಮನೆತನದಉದ್ಧಾರಸೂತ್ರ.
ಈಕೆಉರಿದೆದ್ದಾಳು
ಮಗಕೆಟ್ಟರೆ. ಗಂಡಬೇರೆಕಡೆಹೋದಾಗಮಾತ್ರ.
ಇಲ್ಲಿಅವ್ವನಭಾವನೆ- ನಡವಳಿಕೆಗಳನ್ನುಪ್ರಾಣಿಗಳೊಡನೆಸಮೀಕರಿಸಲಾಗಿದೆ. ತನ್ನಬಾಳಿಗೂಜೇನಿನಂತಹಸಿಹಿಯಾದುದುಸಿಕ್ಕಿತೇನೋಎಂದುಹಪಹಪಿಸುವಕರಡಿಯಹಾಗೆ(ಕರಡಿಯನ್ನುಒಲವಿನಸಂಕೇತವಾಗಿಯೂಬಳಸುತ್ತಾರೆ! ಹಾಗಾಗಿಅವ್ವನದ್ದುಮಕ್ಕಳನ್ನುಕವುಚಿಪ್ರೀತಿಸುವಕರಡಿಪ್ರೇಮ!) ಅವ್ವನನ್ನುಕಾಣಿಸುತ್ತಾರೆ. ಬದುಕಿನಅನಿವಾರ್ಯದಹಲವುಗುದ್ದಾಟಗಳಲ್ಲಿನೊಂದುಬೆಂದರೂಆಕೆ ‘ಸ್ವಾಮಿನಿಷ್ಠೆ’ ತೋರುವನಾಯಿಯಹಾಗೆಕುಟುಂಬವತ್ಸಲೆ. ಮನೆತನಉದ್ಧಾರಎಂಬಸೂತ್ರವನ್ನಿಡಿದುಕಷ್ಟಸುಖಬ್ಯಾಲೆನ್ಸ್ಮಾಡುತ್ತಾಜೋತಾಡುವಕೋತಿಯಹಾಗೆ. ಅವಳ ಅಸ್ತಿತ್ವವುಮತ್ತೆಮತ್ತೆಮನೆತನದಮರ್ಯಾದೆಗಾಗಿಮುಡಿಪಿಡುವಅನಿವಾರ್ಯತೆಯನ್ನುಇಂತಹಉಪಮೆಗಳುಗಟ್ಟಿಪಡಿಸುತ್ತವೆ.
‘ಚಿಕ್ಕಮಕ್ಕಳಹೊತ್ತುಗಂಡನ್ನಸಾಕಿದಳು, ಕಾಸುಗಂಟಿಕ್ಕಿದಳು’ ಗಂಡನನ್ನೂಸಾಕಿದಳೆಂದಮೇಲೆ, ಸಂಸಾರದನೊಗಹೊತ್ತಒಂಟಿಹಸುವಿನಬಂಡಿಎಂಬಂತಾಯ್ತುಅವ್ವನಬದುಕು. ಇದುಕಟುವಾಸ್ತವ. ಮಕ್ಕಳು, ಕುಟುಂಬದನಿರ್ವಹಣೆಅವ್ವನಂತಹಹೆಣ್ಣುಗಳಿಗೆಅನಿವಾರ್ಯವಾದಜವಾಬ್ದಾರಿ. ಇದರಜೊತೆಯಲ್ಲೇಮಗಕೆಡಬಾರದು, ಗಂಡಅಂಕೆಮೀರಬಾರದೆನ್ನುವಬಿಗಿನಿಲವುಅವ್ವನದು.
ಬನದಕರಡಿಗೆನಿಮ್ಮಭಗವದ್ಗೀತೆಬೇಡ;
ನನ್ನವ್ವಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದುಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರಎದುರುತಲೆಯೆತ್ತಿನಡೆಯಲಿಕ್ಕೆ,
ಇವಳಿಗೆಮೆಚ್ಚುಗೆ, ಕೃತಜ್ಞತೆಯಕಣ್ಣೀರು;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿಬದುಕಿ,
ಮನೆಯಿಂದಹೊಲಕ್ಕೆಹೋದಂತೆ
ತಣ್ಣಗೆಮಾತಾಡುತ್ತಲೇಹೊರಟುಹೋದದ್ದಕ್ಕೆ.
ಕಡೆಯಎರಡುಪದಗುಚ್ಛಗಳಲ್ಲಿಒಂದರಲ್ಲಿಅವ್ವನಸಕಲಜೀವಿತಾವಧಿಯಚಿತ್ರಣವೂಕೊನೆಯದರಲ್ಲಿಕವಿಯಶ್ರದ್ಧಾಂಜಲಿಯಂತಹಸಾಲುಗಳೂಇವೆ…
“ಬನದಕರಡಿಗೆನಿಮ್ಮಭಗವದ್ಗೀತೆಬೇಡ”
ಕಾಡೆಂದರೆ, ಸಹಜತೆ. ಕಾಡಿನಜೀವಿಗಳೂಕೂಡನಿಸರ್ಗದಂತೆ. ಹೀಗೆಯೇಅವ್ವಸಹಕೃತ್ರಿಮತೆಇಲ್ಲದಅಪ್ಪಟಸಹಜಜೀವಿ. ಕರಡಿ! ‘struggle for existence‘ ನೀತಿಯಂತೆಜೀವಿಸಲು ಹೋರಾಡಿದವಳು. ಅದೂಸರೀಕರೆದುರುಘನತೆಯಿಂದಬದುಕುವಂತಹಬದುಕಿಗಾಗಿ.
ಅವ್ವನೆಲನೆಲದವ್ವ— ಇದೆಲ್ಲಾನಿತ್ಯದಸಹಜಬದುಕು. ಅಲ್ಲಿಕೃತ್ರಿಮತೆಗೆಅವಕಾಶವಿಲ್ಲ. ಯಾವಶಬ್ದಾಡಂಬರಗಳಿಲ್ಲದೆ, ಪದಲಾಲಿತ್ಯತಾರದೆ, ಛಂದಸ್ಸುಮಾತ್ರೆಗಳಲೆಕ್ಕಹಾಕದೇ, ಬರೆಯಲಾದ ‘ಅವ್ವ’ ಕೇವಲಕವನವಲ್ಲ. ಅದುಭಾವನೆ. ಅದನ್ನುಸಹಜವಾಗಿಕಟ್ಟಿಕೊಟ್ಟಕವಿಯಭಾವವುಸಂಚಾರಿಯಾಗಿಓದುಗರಎದೆಗೆತಲುಪಿಹೃದ್ಯವಾಗುತ್ತದೆ, ವೇದ್ಯವಾಗುತ್ತದೆ. ಕವಿಗೆದೊರೆತವಿಶಾಲಜೀವನಾನುಭವವುಅವ್ವನನ್ನುಈರೀತಿಸಹಜವಾಗಿನೋಡಿಸಿತೋಅಥವಾಅವ್ವನಬದುಕಿನಿಂದಕವಿಯುತಮ್ಮಜೀವನವನ್ನುಸಹಜವಾಗಿಕಂಡುಕೊಂಡರೊ.. ಇರಲಿ,
ಸ್ವಂತಕ್ಕೆಬದುಕದ, ಬದುಕಲಾರದಹೆಣ್ಣುಜೀವವುಎಷ್ಟುಅಮೂಲ್ಯಎಂಬುದುಕವಿಕಂಡುಕೊಂಡಸತ್ಯ. ಕವಿಯಹೃದಯ, ಕಾವ್ಯದಮುಕ್ತಾಯದಲ್ಲಿಪ್ರಾಂಜಲತೆಯಿಂದಅವ್ವನಿಗೆ ಮೆಚ್ಚುಗೆ, ಕೃತಜ್ಞತೆಗಳಶ್ರದ್ಧಾಂಜಲಿಅರ್ಪಿಸುತ್ತದೆಅದೂಸಹಯಾವುದೇವಿಶೇಷಣಗಳಿಲ್ಲದೆ. ಅವ್ವಮನೆಯಿಂದಹೊಲಕ್ಕೆನಿತ್ಯಹೋದಂತೆತಣ್ಣಗೆಹೊರಟುಹೋದರುಎಂದುಹೇಳುವಮೂಲಕ.
ಆದರೆ, ಓದುಗರುಮಾತ್ರಅವ್ವನನಿರ್ಗಮನವನ್ನುಹಾಗೆತಣ್ಣಗೆತೆಗೆದುಕೊಳ್ಳಲುಆಗುವುದಿಲ್ಲ. ಸಕಲರಅಂತಃಸತ್ವವಾಗಿ, ಜೀವಚೈತನ್ಯವಾಗಿ ಅಂತರ್ಗತವಾಗಿಹರಿಯುವಅವ್ವನಮಮತೆಯೇಅಂತಹುದು. ಅದು ಮತ್ತೆಮತ್ತೆಕಾಡುವಂತೆ ‘ಅವ್ವ’ ಕವನವಾಗಿಚಿರಾಯುವಾಗಿದೆ…. ಅವ್ವಂದಿರಿಗೆಸಾವಿಲ್ಲ…
****************************
ವಸುಂಧರಾಕೆ.ಎಂ.
ಅವ್ವ ಬಗ್ಗೆ ಬರೆದ ಲೇಖನ (ಲಂಕೇಶವರ ಅವ್ವ ಕವಿತೆಯ ವಿಶ್ಲೇಷಣೆ) ಚನ್ನಾಗಿ ಮೂಡಿಬಂದಿದೆ.
ಧನ್ಯವಾದಗಳು
ತುಂಬಾ ಚೆನ್ನಾಗಿ ಬರೆದಿದ್ದೀರಾ…ಒಬ್ಬ ಹೆಣ್ಣಿನ ದೃಷ್ಟಿಕೋನದ ವಿಮರ್ಶೆ ಅವ್ವ ಪದ್ಯದ ಬಗ್ಗೆ ಇದೆ ಮೊದಲನೆಯದು ನಾನು ಓದಿದ್ದು..ಹೆಣ್ಣಿನ ಬಗ್ಗೆ ಇರುವ ಸಿದ್ಧ ಮಾದರಿಗಳ ವೈಭವೀಕರಿಸುವ ಮತ್ತೊಂದು ಕವನ ಅಂತ ನಾನು ಅಂದು ಕೊಳ್ಳುತ್ತಿದ್ದೆ..ನೀವು ಚೆನ್ನಾಗಿ ವಿಮರ್ಶಿಸಿ ದ್ದೀರಿ…ನಾನು ಕಾವ್ಯ ಅಷ್ಟಾಗಿ ಓದಿಲ್ಲ .. ಓದಿದರೆ ಅರ್ಥ ಆಗದ ಸ್ಥಿತಿ..ನಿಮ್ಮ ಹಾಗೆ ವಿಮರ್ಶಿಸಿದರೆ ಕಾವ್ಯದ ಓದು ಸುಲಭ ವಾಗ ಬಹುದೇನೋ…ತುಂಬಾ ಚಂದದ ಬರಹ
ಧನ್ಯವಾದಗಳು ಸಮತಾ..