ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್


ನೋವಿನಲೂ ಸಹನೆಯ ವಹಿಸು ದಾಂಪತ್ಯ
ಬಂಧವು ಮುರಿಯದಂತೆ
ಜೀವನವ ಎದುರಿಸು ಕಷ್ಟ ಕಾರ್ಪಣ್ಯದ
ಮಳೆಯು ಸುರಿಯದಂತೆ
ಕವಿದಿಹ ಮೋಡಗಳು ಚದುರಿ ಓಡಲು
ಬಾನು ತಿಳಿಯಾಗದೇ
ವಿವಾಹದ ಅರ್ಥವು ಪರಿಪಕ್ವವಾಗಿ ಬೆಸೆಯಲಿ
ದೂರಕೆ ಸರಿಯದಂತೆ
ಸವಿಯಲು ಬದುಕಿನ ಸಾರವ ಒಲುಮೆ
ಉಕ್ಕಿ ಬರುವುದು
ಕೀವು ತುಂಬಿದ ಮನದ ಕೊಳೆಯ
ನಿವಾರಿಸು ಉರಿಯದಂತೆ
ಭಾವನೆಯ ಸಾಗರದಿ ಬೋರ್ಗರೆವ ಝರಿಯ ಹತ್ತಿಕ್ಕುವ ಪ್ರಯತ್ನ
ಜೀವನ್ಮುಖಿ ಮೌಲ್ಯದ ಬಗೆಗೆ ವಿವೇಚನೆ
ವಾಸ್ತವ ಹರಿಯದಂತೆ
ಅವಿನಾಭಾವ ಸಂಬಂಧ ಕಾಪಿಟ್ಟು ಕಾಯುವ
ಜವಾಬ್ದಾರಿ ರಾಧೆಗೆ
ಭವಿಷ್ಯದ ಚಿಂತನೆ ಮೂಡಲು ಮುನ್ನೆಚ್ಚರಿಕೆ
ಸಂಘರ್ಷ ಬಿರಿಯದಂತೆ
ಅನುರಾಧಾ ರಾಜೀವ್ ಸುರತ್ಕಲ್



