ಕಾವ್ಯ ಸಂಗಾತಿ
ವಾಣಿ ಶಿವಕುಮಾರ್
“ಜೀವದ ಗೆಳತಿ”


pic adobeai̧chatgpt
ಕಣ್ಣಲ್ಲಿ ಮೂಡಿದ ಕಾಂತಿಯ ಹೊನಲು,
ಮನದಲ್ಲಿ ಪ್ರೀತಿಯ ಮೊಗ್ಗು ಅರಳಲು,
ಜೀವದ ಗೆಳತಿ ನೀನಾಗಿ ಬಂದರೆ,
ಬಂದಿಯು ನಿನ್ನ ತೋಳಿನಾಸರೆ..
ಚಂದಿರನೂ ನಾಚಿ ಮೋಡದಿ ಮರೆಯಾದ,
ಹೃದಯ ತಾಳಕೆ ಬೆಸೆಯಿತು ಗೆಜ್ಜೆನಾದ,
ಶೃಂಗಾರದ ಮೈಸಿರಿಗೆ ದೃಷ್ಟಿ ತಾಕದಂತೆ,
ನನ್ನ ಕಣ್ಣುಗಳೇ ನಿನಗೆ ಕಾವಲಿನಂತೆ..
ಒಲವು ಚೆಲುವಿನ ಚಿತ್ತಾರ ಬರೆದಿದೆ,
ಕಾಮನಬಿಲ್ಲಾಗಿ ರಂಗನು ಹರಿಸಿದೆ,
ಭತ್ತದ ಎಸಳನು ನವಿರಾಗಿ ಬಿಡಿಸುತಾ,
ಗುಲಾಬಿ ತಿರುಳನು ಸವೆದು ಮರ್ಧಿಸುತ,
-ಸಣ್ಣ ಆಲಾಪನೆ-
ಜಗವ ಮರೆಯುತ, ಉಸಿರ ಬೆಸೆಯುತ,
ಸಾಗುವ ಜೊತೆಗೆ ಹೆಜ್ಜೆಯನೂರುತ..
ಕಣ್ಣಲ್ಲಿ ಮೂಡಿದ ಕಾಂತಿಯ ಹೊನಲು,
ಮನದಲ್ಲಿ ಪ್ರೀತಿಯ ಮೊಗ್ಗು ಅರಳಲು,
ಜೀವದ ಗೆಳತಿ ನೀನಾಗಿ ಬಂದರೆ,
ಬಂದಿಯು ನಿನ್ನ ತೋಳಿನಾಸರೆ..
ವಾಣಿ ಶಿವಕುಮಾರ್



