ಕಾವ್ಯ ಸಂಗಾತಿ
ನಿಶ್ಚಿತ ಎಸ್( ಎಸ್. ಎನ್)
“ನನ್ನ ಕ್ಷಮಿಸಿ”


ಮನದಾಳದ ಮಾತನ್ನು
ಮನ ಬಂದಂತೆ
ಹೇಳಿದ್ದಕ್ಕಾಗಿ ಕ್ಷಮಿಸಿ ನನ್ನ
ನೀವು ನನ್ನವರೆಂದು ತಿಳಿದು
ನನ್ನವರನ್ನೆಲ್ಲ ಬಿಟ್ಟು
ಬಂದಿದ್ದಕ್ಕಾಗಿ ಕ್ಷಮಿಸಿ ನನ್ನ
ನಿಮ್ಮವರನ್ನೆಲ್ಲ ನಮ್ಮವರೆಂದು
ತಿಳಿದುಕೊಂಡಿದ್ದಕ್ಕಾಗಿ
ಕ್ಷಮಿಸಿ ನನ್ನ
ನನ್ನ ಅಂತರಂಗವ ನೀವು
ಅರಿಯುತ್ತೀರಾ ಎಂದು
ನಂಬಿದ್ದಕ್ಕಾಗಿ ಕ್ಷಮಿಸಿ ನನ್ನ
ನಾ ಇರುವ ಹಾಗೆ ನನ್ನನ್ನು
ಒಪ್ಪಿಕೊಳ್ಳುವಿರಿ ಎಂದು
ಬಯಸಿದ್ದಕ್ಕಾಗಿ ಕ್ಷಮಿಸಿ ನನ್ನ
ನಿಮ್ಮ ಆಸೆಗಳಿಗಾಗಿ
ನನ್ನಾಸೆಗಳನ್ನ
ತೊರೆದಿದ್ದಕ್ಕಾಗಿ ಕ್ಷಮಿಸಿ ನನ್ನ
ನನ್ನ ಕನಸುಗಳನ್ನು
ನನಸು ಮಾಡುವಿರಿ ಎಂದು
ಅಪೇಕ್ಷಿಸಿದ್ದಕ್ಕಾಗಿ ಕ್ಷಮಿಸಿ ನನ್ನ
ನನ್ನ ಭಾವನೆಗಳಿಗೆ
ನಿಮ್ಮ ಸ್ಪಂದನೆಯ
ಕೇಳಿದ್ದಕ್ಕಾಗಿ ಕ್ಷಮಿಸಿ ನನ್ನ
ನಾನು ನೀವು ಎರಡು ದೇಹ
ಒಂದು ಪ್ರಾಣ ಎಂದು
ಕಲ್ಪಿಸಿಕೊಂಡಿದ್ದಕ್ಕಾಗಿ ಕ್ಷಮಿಸಿ ನನ್ನ
ಒಟ್ಟಾರೆಯಾಗಿ ನಾನು ಆ ಮನೆಯ
ಸೊಸೆಯಲ್ಲ ಮಗಳೆಂದು
ಬದುಕಿದ್ದಕ್ಕಾಗಿ ಕ್ಷಮಿಸಿ ನನ್ನ
ನಿಶ್ಚಿತ ಎಸ್( ಎಸ್. ಎನ್)
ನಿಶ್ಚಿತಾರ್ಜುನ್



