ಕಾವ್ಯ ಸಂಗಾತಿ
ನಾಗರಾಜ ಬಿ ನಾಯ್ಕ
“ಸುಂದರಚಿತ್ರಕೆ”


ಹಗಲು ಬಿಡಿಸಿದ
ಸುಂದರ ಚಿತ್ರಕೆ
ಗರಿಗಳು ನೂರು
ನಗೆಯ ನವಿಲುಗಳು
ಹಾರೋ ಹಕ್ಕಿಗಳು
ತೇಲೋ ಮೋಡಗಳ
ಒಲವಿನ ಸೂರು
ಇಳೆಯ ಮಂಟಪಕೆ
ಚಿನ್ನದ ರೇಖೆಗಳು
ಬೆಳಕಿನ ತೇರು
ಬಳ್ಳಿ ಬಳುಕಿನಲಿ
ಮರದ ಸೊಂಪಿನಲಿ
ಹಕ್ಕಿಗಾನ ಜೋರು
ಮಣ್ಣ ರಾಶಿಯಲಿ
ನೀರ ಹನಿಗಳಲಿ
ಚೆಂದ ಕವಿತೆ ಸಾಲು
ದಿನದ ಬದುಕಿನಲಿ
ನೂರು ತೆರೆ ಬರಲಿ
ಬದುಕು ಚೆಂದ ನೋಡು
ನಾಗರಾಜ ಬಿ ನಾಯ್ಕ.



