ಕಾವ್ಯ ಸಂಗಾತಿ
ಗೀತಾ ಆರ್
“ಸೌಂದರ್ಯ”


ಕಪ್ಪು ಸೀರೆಯುಟ್ಟ ಅಂಬರದಂತೆ ನೀ…
ಕತ್ತಲೆಯನು ಒಡಲಲ್ಲಿ ತುಂಬಿಕೊಂಡು
ತಂಗಾಳಿಗೆ ತೂಗುವಾ ಗಿಡ ಬಳ್ಳಿಗಳಂತೆ
ತೂಗುತ್ತಿವೆ ನೀ ತೊಟ್ಟ ವಾಲೆ ಜುಮುಕಿ
ಮಿಂಚುತ್ತಿರುವ ನಿನ್ನಾ ಆ ನಯನಗಳು
ನಕ್ಷತ್ರದಂತೆ ಫಳಫಳ ಹೊಳೆಯುತ್ತಿರಲು
ಹುಣ್ಣಿಮೆ ರಾತ್ರಿಯ ಚಂದಿರನ ಕಂಡಂತೆ
ಬೆಳದಿಂಗಳ ಕಂಡೆ ನಾ ನಿನ್ನ ನಗುವಿನಲ್ಲಿ
ದೂರ ಬೆಟ್ಟದಲಿ ಬೆಳ್ಳಿ ಚಂದ್ರನ ಕಂಡಂತೆ
ಕಂಡೆ ನಾ ನಿನ್ನ ಮುತ್ತಿನ ಮೂಗುತಿಯಲಿ
ನಿನ್ನ ಆ ತಿದ್ದಿ ತೀಡಿರುವ ಹುಬ್ಬಿನಲ್ಲಿ ನಾ
ಕಂಡೆ ಕಾಮನ ಬಿಲ್ಲಿನಂತೆ ಅತಿ ಸುಂದರ
ಹಣೆಯಲ್ಲಿ ನೀ ಇಟ್ಟಿರುವ ಕಪ್ಪು ಬೊಟ್ಟು
ನಿನ್ನಾ ಸೌಂದರ್ಯಕೆಲ್ಲಾ ದೃಷ್ಟಿ ಬೊಟ್ಟು…
—————–
ಗೀತಾ ಆರ್




ಹೆಣ್ಣಿನ ಮುಖದ ಸೌಂದರ್ಯ ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ.