ಕಾವ್ಯ ಸಂಗಾತಿ
ಬಾಪು ಖಾಡೆ,
“ಬದುಕೆಂಬ ಕಡಲು”


ಬದುಕೆಂಬ ಶರಧಿಯಲ್ಲಿ
ಸಾಗುತಿರುವೆ ಓ ದೇವ
ಮುಳುಗದಂತೆ ಬಾಳದೋಣಿ
ತಲುಪಿಸು ದಡವ
ಅಪ್ಪಳಿಸುವ ಕಷ್ಟದಲೆಗೆ
ತತ್ತರಿಸಿದೆ ಈ ಜೀವ
ಎದೆಗುಂದದೇ ಮುನ್ನಡೆಯಲು
ಗುರಿ ತೋರು ಮಹಾದೇವ
ಬವಣೆಗಳ ಬಿರುಮಳೆಗೆ
ಕರಗಿ ನೀರಾಗಿದೆ ಈ ಹೃದಯ
ಸಹಿಸಿಕೋ ಸಿಗಬಹುದು
ಮುತ್ತು ಹವಳ ಓ ಗೆಳೆಯ
ಬಾಪು ಖಾಡೆ




