ಕಾವ್ಯ ಸಂಗಾತಿ
ಡಾ.ದಾನಮ್ಮ ಝಳಕಿ ಅವರ ಕವಿತೆ
“ರೈತ”


ಕೋಳಿಕೂಗುವ ಮುಂಚೆ ಸದ್ದಿಲ್ಲದೇ ಎದ್ದವನು,
ಮಣ್ಣಿನ ಮಡಿಲೇ ತನ್ನ ಮನೆ ಎಂದವನು.
ಬಿಸಿಲು ಮಳೆಗಾಳಿಗೂ ತಲೆಬಾಗದವನು,
ಜಗಕ್ಕೆಲ್ಲ ಅನ್ನದಾತನಾದನವನು.
ವಜ್ರ ವೈಡೂರ್ಯ ಇಲ್ಲ
ಸುಖಸುಪ್ಪತ್ತಿಗೆ ಕಂಡಿಲ್ಲ
ಖಜಾನೆಯಲಿ ಹಣವಿಲ್ಲ
ರಂಗುರಂಗಿನ ಉಡುಗೆ ತೊಟ್ಟಿಲ್ಲ
ಆದರೂ ಅವನಿಲ್ಲದೇ ಅನ್ನವಿಲ್ಲ
ರೈತನೆಂದು ಜರಿಯಬೇಡ
ಅನ್ನದಾತನ ಮರೆಯಬೇಡ
ಬಡವನೆಂದು ಕರಿಯಬೇಡ
ಜಗಕೆಲ್ಲ ಅನ್ನದಾತನವನು ಮರೆಯಬೇಡ
ಬಿತ್ತಿದ ಬೀಜ ಬೆವರ ಹನಿಯಲ್ಲಿ
ಕಟ್ಟಿದ ಕನಸುಗಳ ದವಸಧಾನ್ಯದಲಿ
ಬರೆದ ಕಥೆಯ ಸಾಲು ಮಣ್ಣಿನಲಿ
ಬದುಕಿದ ಜಗದೊಳು ತ್ಯಾಗದಲಿ
ಸಾಲದ ಸವಾಲುಗಳ ಹೊರೆ
ಹಸಿವು ಮರೆತು ದುಡಿತಕ್ಕೆ ಮೊರೆ
ಜನಕನಾದ ಜೀವಿಜಂತುಗಳಿಗೆ
ತನ್ನ ತೊಂದರೆ ಮರೆತು ನಾಡು ಪೋಷಿಸಿದ
ಒಂದು ಹನಿ ನೀರಿಗೂ ಪ್ರಾರ್ಥನೆ
ಭೂತಾಯಿ ಹಸಿರಿಗೆ ಚಿಂತನೆ
ಕೈ ಬಿಡದೇ ಶಕ್ತಿಯ ಆರಾಧನೆ,
ರೈತನ ಮನಸೇ ನಿಜವಾದ ತಪೋಭೂಮಿ.
ಮಣ್ಣಿನ ಮಗನೆಂದು ಗೌರವಿಸೋಣ,
ಅವನ ಬೆವರಿನ ಬೆಲೆ ಅರಿತು ನಮನಿಸೋಣ.
ಹುಟ್ಟಿದ ಮನುಜನ ಹಸಿವನ್ನು ತಣಿಸುವನು,
ಅದಕ್ಕಾಗಿಯೇ ರೈತ ದೇವನೆಂದು ಸ್ಮರಿಸೋಣ
ಡಾ.ದಾನಮ್ಮ ಝಳಕಿ




ಸೂಪರ್
ರೈತ……ಕವನ
ಅಕ್ಕಮಹಾದೇವಿ
ಅಕ್ರಮಹಾದೇವಿ
ಧನ್ಯವಾದಗಳು
ರೈತ ಕವನ ಚೆನ್ನಾಗಿದೆ.
ಈ ರೈತ ಕವಿತೆ ಸಂಗೀತ,ರಾಗ ಕೊಟ್ಟು ಮಾಡಬಹುದೆ ? ….ಕ್ರುತಿಸ್ವಾಮ್ಯಕ್ಕೆ ಅಂತಿದೆ. ಮೆಸೇಜ್ ಮಾಡಿ 7353937903