ಗಜಲ್ ಸಂಗಾತಿ
ಎ.ಹೇಮಗಂಗಾ
ಗಜಲ್


ಯಾರು ಎಷ್ಟೇ ಅವಮಾನಿಸಲಿ ನೋಯದಿರು ಜೀವವೇ
ಯಾರು ಎಷ್ಟೇ ಮೂದಲಿಸಲಿ ಅಂಜದಿರು ಜೀವವೇ
ಕಷ್ಟ ಸುಖಗಳೆಂದೂ ಬಾಳ ನಾಣ್ಯದೆರಡು ಮುಖಗಳು
ಯಾರು ಎಷ್ಟೇ ಹೀಯಾಳಿಸಲಿ ಅಳುಕದಿರು ಜೀವವೇ
ಗೋಮುಖ ವ್ಯಾಘ್ರಗಳು ನಿನ್ನ ಸುತ್ತ ಮುತ್ತಲೇ ಇವೆ
ಯಾರು ಎಷ್ಟೇ ಕೆಡುಕೆಣಿಸಲಿ ಹೆದರದಿರು ಜೀವವೇ
ನಂಬಿಕೆಯ ಮರದ ಬುಡಕ್ಕೇ ಕೊಡಲಿ ಏಟು ಬಿದ್ದಿದೆ
ಯಾರು ಎಷ್ಟೇ ಘಾಸಿಗೊಳಿಸಲಿ ಬೆದರದಿರು ಜೀವವೇ
*ಹೇಮ* ನಿನ್ನಷ್ಟಕ್ಕೆ ನೀನು ನಡೆಯುತಲಿರು ಗುರಿಯತ್ತ
ಯಾರು ಎಷ್ಟೇ ಅಣಕಿಸಲಿ ಕುಸಿಯದಿರು ಜೀವವೇ
ಎ. ಹೇಮಗಂಗಾ



