ಗಜಲ್ ಸಂಗಾತಿ
ಅಶ್ಫಾಕ್ ಪೀರಜಾದೆ
ಗಜಲ್


ಸಮಯದ ಕಾಲಡಿಯಲಿ ಕುಳಿತು ಮನಸು ತಪ ಮಾಡುತಿದೆ
ಕನಸುಗಳ ಸ್ಮಶಾನದಲ್ಲಿ ಬದುಕು ಬೆಳಕು ಕಾಯುತಿದೆ
ಪುಸ್ತಕದ ಪುಟಗಳಲ್ಲಿ ಅಕ್ಷರಗಳಿಲ್ಲದ ಅವ್ಯಕ್ತ ಕತೆಯಿದು
ಹೃದಯ ಮಂಟಪದಲಿ ಅನವರತ ಖಾಲಿತನ ಕಾಡುತಿದೆ
ಆಶಾಕಿರಣ ಮಿನುಗುವದನ್ನ ಒಳಗಣ್ಣಿನಿಂದ ನೋಡಬಹುದು
ಮೋಡದ ಮರೆಯಲಿ ಸ್ವರ್ಗದ ಬಾಗಿಲು ತೆರೆಯುತಿದೆ
ಆತ್ಮವೇ ಆವಿಯಾಗು ಕುದಿ ನೀರಿಗೆ ಬಿದ್ದ ಬಿಸಿಲಂತೆ
ಭಾವನದಿ ತನ್ನ ಪಯಣ ಸಾಗರದತ್ತ ಬೆಳೆಸುತಿದೆ.
ಅಮ್ಮನ ಮಡಿಲ ಮಗು ಕುಲುಕುಲು ನಗುವಂತೆ
ಮಣ್ಣಿನಾಳದಲಿ ಬೀಜವೊಂದು ಚಿಗುರೊಡೆಯುತಿದೆ
ಮೌನ ಗರ್ಭದಿ ಸಿಹಿ ಮಾತೊಂದ ಮೊಳಕೆಯೊಡೆಯಲಿ,
ಅನುರಾಗ ಸಂಭ್ರಮಿಸಲಿ ಚೈತ್ರಮಾಸ ಬರುತಿದೆ.
ಅಶ್ಫಾಕ್ ಪೀರಜಾದೆ




Superb Annaji.
Thanks Bro