ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ವಾರ್ಷಿಕ ವಿಶೇಷಾಂಕ

ಮಾಳೇಟಿರ ಸೀತಮ್ಮ ವಿವೇಕ್,

ಮದದಿಂದ ಮಧು ಹೀರುವ ಮನುಜ

ಸ್ವಾರ್ಥ ಅಜ್ಞಾನದೊಳಗೆ ಬೇವ
ಮಾನವಗೆ ಒಳಿತು ಕೆಡಕಿನ ಪರಿಜ್ಞಾನವಿಲ್ಲ//
ಬುದ್ಧಿ ಇದೆ ಎನುವ ಮನುಜಗೆ
ಮನೋನಿಗ್ರಹದ ಒಳಜ್ಞಾನವೇ ಇಲ್ಲ//

ಪ್ರಕೃತಿಪೂರಕವಾಗಿ ಒಲವು ನಲಿವಿಂದ
ಜೀವಿಸುವುದನೇ ಕೊಂದು ಬಿಡುವ//
ತನ್ನಂತೆ ಜೀವವಿದ್ದು ನಿಷ್ಠೆಯಿಂದ
ಬದುಕುವುದನೆ ಆಕ್ಷಣ ಸಿದ್ಧಿಗೆ ಬಲಿಪಡೆವ//

ಎಲ್ಲೆಲ್ಲಿಯು ಸೂರು ಕಟ್ಟಿ ಇರುವುದೆಲ್ಲ
ತನದೇ ಎಂಬಂತೆ ವರ್ತಿಸುವ//
ಉಪಕಾರಿಗಳನೂ ಗುರುತಿಸದೆ
ಟೊಂಕಕಟ್ಟಿ ಕೊಂದು ಅಸುರನಾಗುವ//

ಪರಿಶ್ರಮ ಕಂಡರೂ ಜೀವಜಗದ ಚೈತನ್ಯವರಿಯದೆ
ಪುಟ್ಟ ದೇಹದ ಮಧುಕರನನೂ ಕಾಡುವ//
ಮಕರಂದ ಹೀರಿ ಮಧು ಸೇರಿಸಿ ತನ್ನ ಸಂಸಾರ ಪೊರೆವುದರ ರಸವನೆ ಪೂರ್ಣ ಹಿಂಡುವ//

ವಿಕರಾಲ ವಿಷ ಸಿಂಪಡಿಸಿಯೂ
ಸರ್ವನಾಶ ಗೈವ ಕಾರ್ಕೋಟಕ ಮನದವ //
ಉಸಿರಾಡಲು ಅಡ್ಡಿ ಪಡಿಸದ ಪ್ರಕೃತಿಯನೇ
ಛೇದಿಸಿ ಕಾಟಕೊಡುವ ಕೃತಘ್ನನವ //

ಬುವಿಯನು ಹಸನಾಗಿರಿಸುವುದನೇ
ಮದದಿ ಮರ್ದಿಸಿ ತಿಂಬ ಮತಿಹೀನ//
ನಂಬಿಕೆಗಳ ಅಡಿಯಾಳ, ಸ್ವಾಭಿಮಾನದಿ
ತಾನೇ ಉತ್ತು, ಬಿತ್ತಿ, ಬೆಳೆದು ಉಣ್ಣದ ಗುಣವಿಹೀನ //



ಮಾಳೇಟಿರ ಸೀತಮ್ಮ ವಿವೇಕ್,

About The Author

1 thought on “ಮಾಳೇಟಿರ ಸೀತಮ್ಮ ವಿವೇಕ್, ಮದದಿಂದ ಮಧು ಹೀರುವ ಮನುಜ”

  1. ನಿಮ್ಮ ಈ ಬರಹ ಪ್ರಸ್ತುತ ಸನ್ನಿವೇಶಕ್ಕೆ ಆಗತ್ಯ ಅನಿ ಸಿದೆ,ಆದರೆ ಒಳಿತು ಮತ್ತು ಕೆಡುಕುಗಳು ಇವುಗಳ ಬಗ್ಗೆ ಸಾಮಾನ್ಯ ಜನತೆಗೆ ತಲುಪಿಸುವಲ್ಲಿ ಸರಕಾರ ಮತ್ತು ಸಾಮಾಜಿಕ ಕಳಕಳಿ ಇರುವ ಸಂಘ ಸಂಸ್ಥೆಗಳು ಇದರ ಸದಾ ಕ ಬಾಧಕಗಳ ಬಗ್ಗೆ ಹೇಳಿ ಅರಿವು ಮೂಡಿಸುವ ಕೆಲಸವನ್ನು ಮಾಡ ಬೇಕು,,ಪ್ರಸ್ತುತ ಸನ್ನಿವೇಶ ಹೇಗೆ ಇದೆ ಎಂದರೆ,ಈ ದಿನ ನಾವು ಬದುಕ ಬೇಕು ಆಸ್ಟೆ ಮುಂದಿನ ಪೀಳಿಗೆ ಬಗ್ಗೆ ಯಾರಿಗೂ ಚಿಂತೆ ಇಲ್ಲ,ನಾವು ಆಹಾರ ಪದರ್ತಗಳನ್ನ ಕಡಿಮೆ ಅವಧಿಯಲ್ಲಿ ಬೇಳೆಯತಿವಿ,ಅದೇ ರೀತಿ ನಮ್ಮ ಜೀವಿತ ಅವಧಿ ಕಡಿಮೆ ಆಗಿದೆ,ಪರಿಸರ ನಾಶ ಮಾಡಿ ಬದುಕುವ ಮನುಷ್ಯ ತನ್ನ ತಾನೇ ನಾಶ ಮಾಡಿಕೊಂಡಂತೆ,ಪರಿಸರ ಅಂದರೆ ಕ್ರಿಮಿ ಕೀಟ , ಪ್ರಾಣಿ ಪಕ್ಷಿಗಳು,ಕಣ್ಣಿಗೆ ಕಾಣದ ಏಷ್ಟೋ ಜೀವ ಸಂಕುಲ ಜ್ಯೋಟೆಗೆ ಮಾನವ ಪ್ರಾಣಿ ಸೇರಿದಂತೆ ಎನ್ನುವ ಭಾವನೆ ಪ್ರತಿಯೊಬ್ಬರಿಗೂ ಬರುವ ವರೆಗೆ ಈ ಜಾಗವನ್ನು ಕಾಪಾಡಲು ಸಾದ್ಯವಿಲ್ಲ,ನಾವು ಪ್ರಕೃತಿಗೆ ಅನುಗುಣವಾಗಿ ಬದುಕಬೇಕು,ಸರಕಾರ ಸಂಘ ಸಂಸ್ಥೆಗಳು ಕೇವಲ ಲಾಭದ ಉದ್ದೇಶ ಹೊಂದಿವೆ

Leave a Reply

You cannot copy content of this page

Scroll to Top