ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಹೇಳಿ ಬಿಡು ಈಗಲೇ

ಪಕ್ಕದಲ್ಲೇ ಬರುತಿರುವ
ನೀನು ಸಿಕ್ಕಲೇ ಇಲ್ಲ..
ಪಕ್ಕದಲ್ಲೇ ನುಡಿಯುತಿರುವ
ನಿನ್ನ ದನಿ ದಕ್ಕಲೇ ಇಲ್ಲ…

ಒಲ್ಲೆ ಎನ್ನುವವರ ಕರೆದು
ಮಣೆ ಹಾಕಿ ಮಾತಾಡಿಸುತ
ಜೊತೆ ಬರುವೆನೆಂದವರ ಬದಿಗೆ
ತಳ್ಳಿ ನಡೆಯುತಿಹೆಯಲ್ಲ…

ಉಗಿಬಂಡಿ ಉರುಳುತಿಹ
ಎರಡು ಹಳಿಗಳ ತೆರದಿ
ಜೊತೆಯಲ್ಲೇ ಸಾಗಿದರೂ
ಸಂಧಿಸಲಾರದ ಸಂಧಿಗ್ಧತೆ…

ಪರಸ್ಪರ ನೋಡಬಹುದಿತ್ತು
ಅದಕ್ಕೂ ದಪ್ಪ ತೆರೆ ಎಳೆದುಬಿಟ್ಟೆ
ಕೊನೆ ಪಕ್ಷ ಮಾತಾಡಬಹುದಿತ್ತು
ಮೌನ ಆಳ ಕಂದಕವ ಕೊರೆದಿಟ್ಟೆ…

ಕಣ್ಣು ತುಂಬಿಕೊಳ್ಳಬಹುದಿತ್ತು
ದಪ್ಪ ಬಟ್ಟೆ ಕಟ್ಟಿ ಬಿಟ್ಟೆ…
ಗಾವುದ ದೂರವೂ ಇಲ್ಲ.
ಕೈ ಚಾಚಿದರೆ ನಿಲುಕುವಷ್ಟು ಸಮೀಪ…
ಸಾವಿರ ಮೈಲು ಯೋಜನ ದೂರ ತಳ್ಳಿಬಿಟ್ಟೆ …

ನಿತ್ಯ ನನ್ನ ಮನೆಯಂಗಳದಲ್ಲೇ
ಸುಳಿದಾಡುತಿರುವೆ..ಸತ್ಯವಿದು..
ಹಿಂದೆ ಮುಂದೆ ಸುಳಿಯುತಿರುವೆ..
ನಿನಗೂ ತೊರೆಯುವ ಮನವಿಲ್ಲ..
ಮತ್ತೇಕೆ ಈ ಮುನಿಸು
ಈ ಮೌನ .. ಈ ದೂರ…

ಕಾರಣವಿಲ್ಲದೆ ಶಿಕ್ಷೆ..
ಪ್ರಶ್ನಿಸಿದಾಗ ಗಡೀಪಾರು..
ಕರಿನೀರು…ಭಯಂಕರ…
ಪ್ರೀತಿ ಕೋಟೆ ಸಾಮ್ರಾಜ್ಯದ

ಹೃದಯ ಸಾಮ್ರಾಟನ ಆಜ್ಞೆ
ಉಲ್ಲಂಘಿಸುವರಾರು?
ಅನ್ಯಾಯ ಅಲ್ಲವೇ..?
ವಿದಾಯದ ಮೊದಲೊಂದು
ಭೇಟಿ ,ಮಾತು, ಕಾರಣ ಬೇಕಿತ್ತು….

ನಿನ್ನ ಹೃದಯಕ್ಕೂ ಬರೆ ಇಟ್ಟಾರೂ
ಯಾರಾದರೂ ಜೋಕೆ…
ನಿನ್ನ ಮನಸಿಗೂ ತೆರೆ ಎಳೆದು
ಸುಟ್ಟಾರೂ ಜೋಕೆ….

ನನ್ನ ಹೃದಯ ಒಡೆದು ಅತ್ತದ್ದು ಸಾಕೇ…
ಇನ್ನೂ ನೋವು ನೀಡಿ ಬಳಲಿಸುವುದು
ಬಾಕಿ ಇದ್ದರೆ ಹೇಳಿ ಬಿಡು ಈಗಲೇ…
ಒಡೆದ ಹೃದಯ ಚೂರುಗಳ ಹೆಕ್ಕಿ
ಜೋಡಿಸಿ ಇಡುವೆ ಮತ್ತೆ ನಿನ್ನ ಮುಂದೆ….

——————————-

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

About The Author

4 thoughts on “ಇಂದಿರಾ ಮೋಟೆಬೆನ್ನೂರ ಹೇಳಿ ಬಿಡು ಈಗಲೇ”

  1. ಬಹಳ ಸುಂದರವಾಗಿ ಮೂಡಿಬಂದಿದೆ ನಿಮ್ಮ ಕವನ ಮೇಡಂ ( Angelina G)

  2. Indira motebennur.

    ಸ್ಪಂದಿಸಿದ ಹೂ ಮನಕೆ ವಂದನೆಗಳು…ಏಂಜಲೀನಾ ಮೇಡಂ….

  3. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಸುಂದರ ಭಾವ ಮ್ಯಾಡಮ್ ಕವನ ಚೆನ್ನಾಗಿದೆ

    1. Indira motebennur. Belagavi

      ಸ್ಪಂದನೆಗೆ ಆತ್ಮೀಯ ವಂದನೆಗಳು ಮೀನಾಕ್ಷಿ ಮೇಡಂ….

Leave a Reply

You cannot copy content of this page

Scroll to Top