ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಹಕ್ಕಿ ಹಾಡುತಿದೆ …..!!

ಜನರ ಜಂಜಡಗಳ ಕಂಡು
ಮುಗಿಲ ನೋಡುವ ರೈತರ
ಕೊರಗನು ಕಂಡು,
ಒಣಗಿದ ಪೈರನು ಕಂಡು
ಹಕ್ಕಿ ಹಾಡುತಿದೆ !!

ಜನರ ಸಮಸ್ಯೆಗಳ ಸರಮಾಲೆಯ
ನೋಡಿ
ರಾಜಕಾರಣೀಗಳ ಭರವಸೆಗಳ
ಮಾತಿನ ಮೋಡಿ;
ಪ್ರಕೃತಿಯೇ ಮುನಿಸನು ಕಂಡು
ಹಕ್ಕಿ ಹಾಡುತಿದೆ !!

ದೇಶದ ಅನ್ನವನುಂಡು ದ್ರೋಹ
ಬಗೆಯುವ ಮಾರೀಚರ ಕಂಡು,
ಸಹಕರಿಸುವ ಮೀರ್ ಸಾಧಿಕ್ ರ
ನೋಡಿ ;
ನ್ಯಾಯಾದಾನದ ವಿಳಂಬವ ಕಂಡು
ಹಕ್ಕಿ ಹಾಡುತಿದೆ !!

ಸಂವಿಧಾನದ ಆಶಯಗಳ ಗಾಳಿಗೆ ತೂರಿ;
ಪ್ರಜಾಪ್ರಭುತ್ವದ ಮೌಲ್ಯವ ಮಾರಿ,
ಅಧಿಕಾರದ ಮೋಹದ ನಶೆಯೇರಿದವರ
ಕಂಡು ;
ಹಕ್ಕಿ ಹಾಡುತಿದೆ !!

ಆಧುನಿಕ ಸಮಾಜದಲ್ಲೂ ಧಮನೀತರ
ಬಡಿದು ತುಳಿದು ಸುಟ್ಟರೂ,
ಪ್ರತಿಭಟಿಸದ ಮಾನವೀಯತೆ ಇಲ್ಲದ ಜನರ
ಕಂಡು;
ಬುದ್ದಿ ಜೀವಿಗಳ ಮೌನವ ಕಂಡು
ಹಕ್ಕಿ ಹಾಡುತಿದೆ !!

ಜನರ ಕಷ್ಟಗಳಿಗೆ ಧ್ವನಿಯಾಗದ ಮಾಧ್ಯಮಗಳ
ಕಂಡು;
ಮೊಸಳೆ ಕಣ್ಣೀರು ಸುರಿಸುವ ನಾಯಕರ
ದಂಡನು ನೋಡಿ;
ಭಾರತವೆಂಬ ಪುಣ್ಯ ಭೂಮಿಯು ಉಳಿಯುವುದೆಗೆಂದು
ಹಕ್ಕಿ ಹಾಡುತಿದೆ !!


ಕಾಡಜ್ಜಿ ಮಂಜುನಾಥ

About The Author

Leave a Reply

You cannot copy content of this page

Scroll to Top