ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿದ್ಯಾರ್ಥಿ ವಿಭಾಗ

ಅಳಕಿನ ಎದೆಯಲ್ಲಿ

ಬಾರ್ಗವಿ ಎಸ್.ನಾಯ್ಕ

ಬೆಳಗಿನ ಚಳಿಗೆ ಹೊದಿಕೆಯ ಹೊದ್ದು
ಮುಪ್ಪಿನೊಂದಿಗೆ ಒಪ್ಪಂದ ಬರೆದ
ಮುದುಕಿ ಒಬ್ಬಳು ಮುದುರಿ ಕುಳಿತಿರುವಳು

ತನ್ನದೇ ಹದಿಹರೆಯವ ನೆನೆದು
ನಗುತ ನಲುಗುತ್ತಿರುವಳು…..
ಸುಕ್ಕುಗಟ್ಟಿದ ಚರ್ಮವ ಹೊತ್ತು
ಕುಗ್ಗಿ ಹೋಗಿ ಮುಗ್ಗುತ್ತಿರುವಳು
ಒಳಗೊಳಗೆ, ಹೆಪ್ಪುಗಟ್ಟಿದ ಮೌನವ ಹೊತ್ತು

ಜೀವನದ ದೋಣಿಯ ಮೇಲೆ
ಕುಳಿತು ದಣಿದಿರುವಳು ಆದರೂ,
ನೂಕುತ್ತಿರುವಳು ನೌಕೆಯ ….

ಅನುಭವದ ಆಳವಿದ್ದರು ಜೀವನದ
ಜಿಗುಪ್ಸೆಯೊಂದುಮೊಳೆ ಹೊಡೆದು
ಕುಳಿತಿದೆ ಅವಳ ಅಳುಕಿನ ಎದೆಯಲ್ಲಿ
ಕಣ್ಣೆರಡು ಕಾಣದು ಹಣ್ಣಾದ ಮುದುಕಿಗೆ
ಮಣ್ಣಾಗಲು ಎಣಿಸುತ್ತಿರುವಳು ಎರಡೆರಡು ದಿನಗಳ


ಕಾವ್ಯ ಸಂಗಾತಿ

ವಿದ್ಯಾರ್ಥಿ ವಿಭಾಗ

ಅಳಕಿನ ಎದೆಯಲ್ಲಿ

About The Author

19 thoughts on “ಭಾರ್ಗವಿ ಎಸ್. ನಾಯ್ಕ-ಅಳಕಿನ ಎದೆಯಲ್ಲಿ”

  1. Superb sister… I think u r Rafeek sir std.. Best of luck… Keep writing✍️ dr…. God bless u..

Leave a Reply

You cannot copy content of this page

Scroll to Top