ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿಲೀಷಾ ಪ್ರೀಮಾ

ಜೀವನ

ಗುರಿ ಎನ್ನುವ ಕನಸಿಗೆ
ಕಷ್ಟ ಎನ್ನುವ ಮುಳ್ಳನ್ನು
ಧೈರ್ಯ ಎಂಬ ಸಾಹಸದಿಂದ
ಎದುರಿಸಿ ಜೀವನವನ್ನು ಮುನ್ನಡೆಸು

ತಿಮಿಂಗಿಲ ಎನ್ನುವ ಕಷ್ಟವನ್ನು
ಚಿಕ್ಕ ಮೀನಾಗಿ ಜೀವಿಸುವ ನೀನು ಸಮುದ್ರದಂತಿರುವ ಜೀವನದಲ್ಲಿ
ಹಿಜಾಡಿ ಗೆದ್ದು ದಡ ಸೇರು

ಪರರು ಏನೋ ಹೇಳಿದರು ಎಂದು ತಲೆಕೆಡಿಸದೆ
ನಿನ್ನ ಜೀವನದ ಗುರಿಯನ್ನು
ತಲೆಎತ್ತಿ ಸಮಾಜದಲ್ಲಿ ನಡೆದು
ಗೆದ್ದು ನಿನ್ನ ಜೀವನವನ್ನು ಹಸನಾಗಿಸು

ಸಾಮಾಜಿಕ ಜಾಲತಾಣ ಎನ್ನುವ ಮೋಹವನ್ನು ಹಿಂದಿಕ್ಕಿ
ಪುಸ್ತಕ ಎನ್ನುವ ಜ್ಞಾನ ಪ್ರೇಮವನ್ನು ಪಡೆದು
ಜೀವನದ ಪುಟದಲ್ಲಿ
ಹೊಸ ಅಧ್ಯಯವ ಪ್ರಾರಂಬಿಸಿ ಜಯಿಸು

ಸತ್ಯ ಧರ್ಮ ಎನ್ನುವ ಸಮಾಜದ ಗಾಳಿಯಲ್ಲಿ
ಅಸತ್ಯದ ಗುಡುಗನ್ನು ಎದುರಿಸಿ
ಮಳೆ ಎನ್ನುವ ಪ್ರೀತಿಯ ಹೂಮಳೆ ಸುರಿಸಿ
ಜೀವನದ ಸಮುದ್ರದಲ್ಲಿ ಗುರಿಯನ್ನು ಸೇರು


ನಿಲೀಷಾ ಪ್ರೀಮಾ

About The Author

Leave a Reply

You cannot copy content of this page

Scroll to Top