ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಅಸಂಗತ

ಬೇಸಿಗೆಯ ಮಧ್ಯಾಹ್ನ
ಊಟಕ್ಕಿಲ್ಲದ ಉಪ್ಪಿನಕಾಯಿ
ಕನಸಲ್ಲಿ ಕಂಡ ಚಿತ್ರಾಂಗದೆ
ಗದೆ ಎತ್ತಿ ಬೀಸಿದಂತೆ

ಝಳಝಳ ಬಿಸಿಲುಣಿಸುವ
ಮರೀಚಿಕೆ, ಒಂಟೆ .
ಒಂಟಿ ಪ್ರಯಾಣ
ನನಸ ಕಾಣಲಿಲ್ಲ ಪೀಠಾರೋಹಿಸಲಿಲ್ಲ

ಡುಬ್ಬದಿಂದ ಅಮೃತ ಸಿಗದೆ
ದಿನವೆಲ್ಲ ಬೆವರು ಕುಡಿದದ್ದೆ ಬಂತು
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ

ಗರ್ಭಸ್ತ ಭ್ರೂಣ ಕಿರಿಕಣ್ಣು
ಕೈಮೈ ಮಡಿಚಿ ಕೊಂಡು
ಇಲ್ಲಿಗೆ ಬಂದಾಗ ಮನುಷ್ಯ
ಅವ್ಯಕ್ತ

ಲಕ್ಷ ಲಕ್ಷ ಕೋಟಿ ದೂರ
ಭೂಮ್ಯಾಕಾಶಗಳ ಪರಿಧಿಯಲ್ಲಿ ಹತ್ತಿರ ಹತ್ತಿರ
ಪರಿತ್ಯಕ್ತ
ಹಾಗೂ

ಅಸಂಗತ
ಎಂದೇ ಹುಟ್ಟು ಅಕಸ್ಮಾತ್ !
ಬದುಕಿದಾಗ ಸತ್ತಂತೆ
ಇದ್ದೂ ಇಲ್ಲದಂತೆ

ನಾಟ್ಯ, ಹಾಡು ಕೂಡ
ಹಾವು ಏಣಿಯ ಪ್ರಭೇದ
ಅಸಂಗತ
ಅನಂತ


About The Author

12 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಅಸಂಗತ”

  1. ಬಹಳ ಸಂಕೀರ್ಣವಾದ ಹಾಡು “ಅಸಂಗತ”

    ಅನಂತ ಆನಂದವನ್ನು ನೀಡುತ್ತದೆ

    ಧನ್ಯವಾದಗಳು

    1. D N Venkatesha Rao

      ಧನ್ಯವಾದಗಳು ಮಂಜಣ್ಣ .
      ಕವನ ಹೇಗೆ ಇರಲಿ, ನಿಮ್ಮ ಹೊಗಳುವಿಕೆ ತರುವ ಆನಂದ, ಆಹ್ಲಾದಕರ!

    1. D N Venkatesha Rao

      ಧನ್ಯವಾದಗಳು. ನಿಮ್ಮ ಪ್ರಶಂಸೆಗೆ ಒಂದು ಸಲ್ಯೂಟ್!

  2. Dr K B SuryaKumar

    ಕುಂತಿ ಮಕ್ಕಳಿಗೆ ಕೊನೆಗೂ ಸಿಕ್ಕಿತು ರಾಜ್ಯ,
    ನಮಗೂ ಸಿಕ್ಕಿತು ಒಂದು ಅಸಂಗತ ಕಾವ್ಯ.
    ಆಳಕ್ಕೆ ಹೋದಂತೆ, ಕಾಣುವುದು ಭಾವ,
    ಮುಂದುವರೆಯಲಿ ನಿಮ್ಮ ಆದ್ಯಾತ್ಮ ದ ಕಾವ.

  3. D N Venkatesha Rao

    ಧನ್ಯವಾದಗಳು ಸೂರ್ಯ
    ಅಸಂಗತಗಳ ಸಂಗತಿಗಳ ಹೇಳಿದ್ದಕ್ಕೆ !!

Leave a Reply

You cannot copy content of this page

Scroll to Top