ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೇ-ದಿನದ ವಿಶೇಷ

ಹೆಚ್. ಎಸ್. ಪ್ರತಿಮಾ ಹಾಸನ್

ಕೂಲಿ ಕಾರ್ಮಿಕರ ಪಾಡು

ಎಲ್ಲೆಡೆಯೂ ದುಡಿಮೆಯೆ ದೇವರು ಎನ್ನುತಲಿ
ಶ್ರದ್ದೆಯಲಿ ಕೆಲಸವನು ಮಾಡುವರು ಭಕ್ತಿಯಲಿ
ನಂಬಿಕೆಯ ಉಳಿಸಿಕೊಳ್ಳುತಲಿ ಜೀವನವ ನಡೆಸುತಲಿ
ದಿನಕೂಲಿ ಮಾಡುತಲಿ ಶ್ರಮಿಸುತ ಬದುಕುತಲಿ//1//

ಸ್ವಾಭಿಮಾನ ತೋರುವರು ಲಿಂಗಬೇದವಿಲ್ಲದೆಯೆ
ಮೈಯಲ್ಲಿ ಬೇವರು ಸುರಿಸುತಲಿ ದುಡಿಯುತಲಿಯೆ
ಪ್ರೀತಿ ಪ್ರೇಮಕ್ಕೆ ದಾರಿಯು ಎಲ್ಲೆಡೆಯೂ ಎನ್ನುತಲಿ
ಅಂತರವ ತೋರದೆಯೇ ಬದುಕ ತೋರುತಲಿ //2//

ಸಮಯವನು ಪಾಲಿಸುತ ನಡೆಯುವರು ಬದುಕಿನಲಿ
ಹಲವು ಸಮಸ್ಯೆಯನು ಎದುರಿಸುತ ನಡೆಯುತಲಿ
ನಂಬಿಕೆಯ ಭರವಸೆಯ ಸರಮಾಲೆ ಹೊಂದಿರಲು
ಬಾಳುವರು ಸಂತಸದಿ ಜೀವನದ ದಾರಿಯಲಿ ಸಾಗುತಲಿ //3//

ಕೂಲಿ ಕಾರ್ಮಿಕರ ಪಾಡು ಕೇಳಲಾಗುವುದಿಲ್ಲ
ಸಂಘರ್ಷದ ಬದುಕು ಅವರದು ನಿಲ್ಲುವುದಿಲ್ಲ
ಬ್ರಹ್ಮ ಲಿಖಿತ ಯಾರಿಂದಲೂ ತಡೆಯಲಾಗುವುದಿಲ್ಲ
ಜೀವನವಿದುವೇ ಬಾಳಿ ತೋರಿಸಲೇ ಬೇಕಲ್ಲ //4//


ಹೆಚ್. ಎಸ್. ಪ್ರತಿಮಾ ಹಾಸನ್.

About The Author

Leave a Reply

You cannot copy content of this page

Scroll to Top