ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ ರೇಮಾಸಂ

ಗಜಲ್

ಬಿಕ್ಕುತಿದೆ ಹೃದಯವಿದು ಲೆಕ್ಕ ಹಾಕದಷ್ಟು
ಹಿಚುಕುತಿರುವರು ಕತ್ತನು ಸಾಯುವಷ್ಟು //

ಬೇಡದ ಬಯಕೆಯು ತಂದಿದೆ ಗೋಳನು
ಕಾಡಿದರು ಹುಚ್ಚು ಬೇಡಿಕೆಗಾಗಿ ಸಾಕಷ್ಟು//

ಜತನದಿಂದ ಕಾಯ್ದಿಟ್ಟ ಮುಗ್ಧ ವ್ ಮನಸ್ಸಿಗೆ
ಚುಚ್ಚು ಮಾತಿನಲಿ ಇರಿದರು ಬಹಳಷ್ಟು //

ರಾತ್ರಿ ಕಂಡ ಕನಸಿನಲಿ ತಡಕಾಡಿದ್ದನ್ನು
ಹಗಲು ಹುಡುಕಿದರೂ ಸಿಗಲಿಲ್ಲ ಕಂಡಷ್ಟು//

ಬೆಳಗುವ ದೀಪವು ತಾಯಿಗೆ ಕೇಳಿತಲ್ಲ
ಬೆಳಕು ಕೊಡಲು ಬತ್ತಿಗೆ ಎಣ್ಣೆ ಬೇಕಷ್ಟು//

————————[

About The Author

Leave a Reply

You cannot copy content of this page

Scroll to Top