ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೊ ರಾಜನಂದಾ ಘಾರ್ಗಿ

ತಾರೆಗಳ ತಂದು

ನನ್ನೆದೆಯ ಬಾನಿನಂಗಳದಿ
ಚಂದಿರನಿಂದು ಉದಯಿಸಿದ
ತಾರೆಗಳ ತಂದು ಜೊಡಿಸುತ
ಚುಕ್ಕೆಗಳ ರಂಗೋಲಿ ಬಿಡಿಸಿದ

ಮೊಡಗಳ ಮರೆಯಲಿ ಅಡಗುತ
ಕಣ್ಣು ಮುಚ್ಚಾಲೆ ಆಡುತಲಿದ್ದ
ಅಲೆಗಳಲಿ ಜೀಕುತ ತೆಲುತ
ಭಾವತರಂಗಗಳನ್ನು ಎಬ್ಬಿಸಿದ

ತಂಗಾಳಿಯಲಿ ಕಿರಣಗಳನೆದ್ದಿ
ಮನಕೆ ತಂಪನು ಸಿಂಚಯಿಸಿದ
ಹಾಲ್ಗಡಲಲಿ ಮಿಂದೆದ್ದು ಬಂದು
ಮನದಿ ಬೆಳಕು ಸಿಂಪಡಿಸಿದ

ಬೆಳದಿಂಗಳಲಿ ಮಿಂದೆದ್ದ ಧರಣಿ
ಜೋಗುಳವ ಹಾಡುತಲಿರಲು
ಮೋಡಗಳಲಿ ಪಯಣಿಸಿದ ಶಶಿ
ಪಡುವಣದತ್ತ ಜಾರಿ ಪವಡಿಸಿದ


About The Author

2 thoughts on “ಪ್ರೊ ರಾಜನಂದಾ ಘಾರ್ಗಿಕವಿತೆ-ತಾರೆಗಳ ತಂದು”

Leave a Reply

You cannot copy content of this page

Scroll to Top