ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಎ . ಹೇಮಗಂಗಾ

ಮನದಾಳದ ನೋವುಗಳ ಹೊರದೂಡಲು ಬರೆಯುತ್ತೇನೆ ನಾನು
ಬೆನ್ನೇರಿದ ಭೂತ ವಿಳಿಸಿ ಹಗುರಾಗಲು ಬರೆಯುತ್ತೇನೆ ನಾನು

ಋತು ಬದಲಾದರೂ ಕಾಲ ನಿಂತಲ್ಲೇ ನಿಂತಂತೆ ಅನಿಸಿತೇಕೆ ?
ಸುಪ್ತವಾಗಿಹ ಭಾವಗಳ ಎಚ್ಚರಿಸಲು ಬರೆಯುತ್ತೇನೆ ನಾನು

ಇಟ್ಟ ಪ್ರತಿ ಹೆಜ್ಜೆಯಲೂ ನೆತ್ತರು ಒಸರಿದೆ ಮುಳ್ಳ ಹಾದಿಯಲಿ
ಕಲ್ಪನೆಗಳ ತೊರೆಯಲಿ ಮೀಯಲು ಬರೆಯುತ್ತೇನೆ ನಾನು

ಆಘಾತದಿ ನರಳಿದ ಹೃದಯದ ತುಂಬ ಪೆಟ್ಟಿನ ಕುರುಹುಗಳೇ !
ಮಾಯದ ಗಾಯಕೆ ಮುಲಾಮು ಲೇಪಿಸಲು ಬರೆಯುತ್ತೇನೆ ನಾನು

ಬರೆದು ಸಾಧಿಸುವುದಾದರೂ ಏನೆಂದು ಹಲುಬದಿರು ಹೇಮ
ಬದುಕಲ್ಲದ ಬದುಕಲಿ ನನ್ನಿರುವಿಕೆ ತೋರಲು ಬರೆಯುತ್ತೇನೆ ನಾನು


About The Author

1 thought on “ಗಜಲ್”

  1. ADIL PASHA ( ದಿಲ್ ಜೀ )

    ಹೃದಯಾಂತರಾಳದ ಮಡುಗಟ್ಟಿದ ನೋವನ್ನು ಸುಪ್ತ ಪರದೆಯ ಹಿಂದೆ ತೋರುವ ಈ ನಿಮ್ಮ ಗಝಲ್ ತುಂಬಾ ಚೆನ್ನಾಗಿದೆ ಮೇಡಂ..

Leave a Reply

You cannot copy content of this page

Scroll to Top