ಗಜ಼ಲ್
ಗಜ಼ಲ್ ರಾಹುಲ ಮರಳಿ ನಿನ್ನ ನೋಟದಿ ನಶೆಯ ಅನುಭವಿಸುತಿರಲು ಮದಿರೆ ಬೇಕಾ ಸಖಿಮಧುಬಟ್ಟಲಿನ ಸುಖವು ನಿನ್ನ ಅಧರದಲಿರಲು ಮದಿರೆ ಬೇಕಾ ಸಖಿ ಹುಣ್ಣಿಮೆ ಚಂದಿರನಂತೆ ಹೊಳೆವ ನಿನ್ನ ಸುಂದರ ಮೊಗವು ಕಣ್ಮುಂದಿದೆಏಕಾಂತದ ತಂಪಾದ ಹೊತ್ತಲಿ ನಿನ್ನೊಟ್ಟಿಗಿರಲು ಮದಿರೆ ಬೇಕಾ ಸಖಿ ಎರಡು ಕಾಮನ ಬಿಲ್ಲಿನ ನಡುವಿನ ನಾಸಿಕವು ಸಂಪಿಗೆಯಂತಿದೆರತ್ನದ ಮೂಗುತಿ ನಿನ್ನತ್ತ ಆಕರ್ಷಿಸುತ್ತಿರಲು ಮದಿರೆ ಬೇಕಾ ಸಖಿ ಶಂಖುವಿನಂತಹ ಸುಂದರ ಕರ್ಣಗಳಲಿ ಓಲೆ ನಲಿದಾಡುತಿದೆಮನದ ಆಲಾಪನೆ ಕೇಳುವ ಕರ್ಣಗಳಿರಲು ಮದಿರೆ ಬೇಕಾ ಸಖಿ ನಕ್ಷತ್ರದ ಹೊಳಪಿನಂತೆ ಹೊಳೆಯುವ ನಿನ್ನ ಅಕ್ಷಿಗಳ ತುಂಟಾಟಹುದುಗಿದ ಮನ್ಮಥನ ಗುಣವ ಕೆರಳಿಸುತಿರಲು ಮದಿರೆ ಬೇಕಾ ಸಖಿ ಇಬ್ಬರ ಬೆರಳುಗಳು ಬೆಸೆದು ಭಾವನೆಗಳ ಬಂಧ ಹೆಚ್ಚಿಸುತಿವೆಪ್ರಿಯತಮೆಯು ಮೈಮನವ ಅರ್ಪಿಸುತಿರಲು ಮದಿರೆ ಬೇಕಾ ಸಖಿ ಯೌವನದ ಶಾಖ ‘ಜೀವಕವಿಯ’ ರೋಮಗಳನೂ ರಂಗೇರಿಸುತಿದೆಮನದ ಕಾಮನೆ ಪೂರೈಸುವ ರತಿ ಜೊತೆಗಿರಲು ಮದಿರೆ ಬೇಕಾ ಸಖಿ *************************

