ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

colorful abstract

ರತ್ನರಾಯಮಲ್ಲ

ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದು
ದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು

ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದು
ಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು

ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದು
ವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು

ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆ
ನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು

ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’
ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು

***************************

About The Author

Leave a Reply

You cannot copy content of this page

Scroll to Top