Day: August 1, 2020
-

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ
ಅಂಕಣಬರಹ ಪುಸ್ತಕ- ಬಾನಸಮುದ್ರಕೆ ಗಾಳನೋಟ ಲೇಖಕರು- ಪ್ರವೀಣ ಬೆಲೆ ೮೦/- ಪ್ರಕಾಶನ-ಸಲೀಲ ಪುಸ್ತಕ ಚಿಕ್ಕವನಿರುವಾಗ ಬಟ್ಟೆಯ ಸ್ಟ್ಯಾಂಡ್ನಲ್ಲಿರುವ ಬಟ್ಟೆಗಳನ್ನೆಲ್ಲ ಒಂದೆಡೆ ಗುಡ್ಡೆಹಾಕಿಕೊಂಡು ಬೆಚ್ಚಗೆ ಮಲಗುತ್ತಿದ್ದ ಮಗನಿಗೆ ಈಗ ಆತ ಹಾಗೆ ಮಾಡುತ್ತಿದ್ದ ಎಂದರೆ ನಂಬುವುದಿಲ್ಲ. ಮಲಗುವಾಗ ನಾನು ಬೆಳ್ಳಿಗ್ಗೆ ಬೇಗ ಏಳಬೇಕಾದಾಗಲೆಲ್ಲ ಅವನ ಪಕ್ಕ ನನ್ನ ಉಪಯೋಗಿಸಿದ ಉಡುಪುಗಳನ್ನು ಇಡುತ್ತಿದ್ದೆ. ಅದನ್ನೇ ತಬ್ಬಿಕೊಂಡು ಆತ ಹಾಯಾಗಿ ಮಲಗಿಬಿಡುತ್ತಿದ್ದ. ಕೆಲವೊಮ್ಮೆ ಬಟ್ಟೆ ಇಡದಿದ್ದಾಗ ಎದ್ದು ಅಳಲು ಪ್ರಾರಂಭಿಸುತ್ತಿದ್ದ. ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟ ಎನ್ನುವ ಸಂಕಲನದ ಮೊದಲ ಕವನವನ್ನು…
-

ಧ್ಯಾನ
ಕವಿತೆ ಸುನೀತ ಕುಶಾಲನಗರ ಎಲ್ಲೆಡೆ ಗವ್ ಎನ್ನುವಾಗಲೂಅದೇನೋ ಧ್ಯಾನಮನೆಯೊಳಗಿದ್ದರೂ ನುಗ್ಗಿಬರುವ ಕವಿತೆ ಆಕಾಶದಂತೆ ಆವರಿಸಿನಿತ್ಯ ಬೆಳದಿಂಗಳುಋತುಚಕ್ರ ಉರುಳಿದಂತೆಋತುಸ್ರಾವ ವ್ಯತ್ಯಾಸಬಣ್ಣದ ಕನಸುಗಳಿಗೆಅದೆಷ್ಟು ಕೂಸುಗಳ ಕೇಕೆಜತೆಯಾದ ಕ್ಷಣ ಕ್ಷಣವೂಕಣ ಕಣಕೂ ಹಿತಮತ್ತೊಮ್ಮೆ ಬದುಕಿಬಿಡೆಂದುಚಾಚುವ ಕೈಕಣ್ಣ ಸುತ್ತಿದ ಬಳೆಯಾಕಾರದಕಪ್ಪನೂ ನೇವರಿಸುವಕೂದಲ ಬಣ್ಣದ ಲೇಪನಕೆಹೊಸ ಹೊಳಪುಭೂತ ಭವಿಷ್ಯದಹಂಗ ತೊರೆವ ವರ್ತಮಾನತೀರಾ ಖಾಸಗಿ ಬದುಕೇಆದರೂ ಸದ್ದಿಲ್ಲದೆಮುಟ್ಟುಗೋಲಾಗುವ ಮುಟ್ಟಿಗೂಹುಟ್ಟುತ್ತಿದೆ ಹೊಸಹುರುಪುದಿನ,ದಿನಾಂಕಗಳಗಡಿದಾಟಿ ಬರುವಲವಲವಿಕೆಯ ಮತ್ತು. ******************
-

ಕೊನೆಯಲ್ಲಿ
ಕವಿತೆ ನಂದಿನಿ ಹೆದ್ದುರ್ಗ ಕಳಚಿಕ್ಕೊಳ್ಳುತ್ತಲೆ ಹೋಗುತ್ತದೆಹೀಗೇಒಂದೊಂದೇ ಒಂದೊಂದೇ ಬಂಧ. ಬಿಡಿಸಲಾಗದ್ದು ಎನ್ನುವಾಗಲೇಹೊರಡುತ್ತದೆ ಬಿಟ್ಟು ಕಣ್ಮರೆಯಾಗುವುದೋಕಣ್ಣಳತೆಯಲ್ಲೇ ಇದ್ದೂಬೇಕೆನಿಸದೆ ಹೋಗುವುದೊಕಣ್ಣು ಕೈಯಿಗೆ ನಿಲುಕಿದರೂಎದೆಗೆ ಇಳಿಯದೇ ಹೋಗುವುದೊಬೇಕೆನಿಸಿದರೂ ಝಾಡಿಸಿಹೊರಡುವುದೊ.. ಕಳಚುತ್ತಲೇ ಹೋಗುತ್ತದೆ…ಇದ್ದಿತೆಂಬುದರ ಕುರುಹುಕ್ರಮೇಣ ಇಲ್ಲವಾಗಿ.. ಒಂಟಿ ಕೊಂಡಿಯೊಂದುಕೊರಳೆತ್ತಿ ನೋಡುತ್ತಿದೆಈಗಸುತ್ತೆಲ್ಲಾ ಕ್ಷೀಣವಾಗಿ *************************
-

ಕರ್ಟನ್ನಿನ ಮೇಲೊಂದು ಕೇತಕಿ ಹೂವು
ಬದುಕಿನ ಬಗ್ಗೆ ಮಾತನಾಡುವಾಗಲೆಲ್ಲ ನನಗೆ ಕರ್ಟನ್ನುಗಳು ನೆನಪಾಗುತ್ತವೆ; ಬದುಕಿನ ಪ್ರತಿಯೊಂದು ಅಧ್ಯಾಯವೂ ಬೇರೆಬೇರೆ ಬಣ್ಣ-ವಿನ್ಯಾಸಗಳನ್ನು ಹೊತ್ತ ಸುಂದರವಾದ ಕರ್ಟನ್ನಿನಂತೆ ಭಾಸವಾಗುತ್ತದೆ. ಕಿಟಕಿಗಳೇ ಇಲ್ಲದ ಮನೆಯಲ್ಲಿ ಬೆಳಕಿಗೊಂದು ಅವಕಾಶವನ್ನು ಒದಗಿಸುವುದಾದರೂ ಹೇಗೆ; ಹಾಗೆ ಕಿಟಕಿಯೊಂದು ಒದಗಿಸಿದ ಅವಕಾಶವನ್ನು ಸ್ವಂತದ್ದಾಗಿಸಿಕೊಳ್ಳಲಿಕ್ಕೆ ಕರ್ಟನ್ನುಗಳ ಸೃಷ್ಟಿಯೂ ಆಗಿರಬೇಕು! ಬೆಳಕಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಿಟಕಿ, ಕಿಟಕಿಯೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವ ಕರ್ಟನ್ನು ಎಲ್ಲವೂ ಸೇರಿ ಬದುಕಿಗೊಂದು ಸ್ವಂತಿಕೆ, ಜೊತೆಗಿಷ್ಟು ಬಣ್ಣಗಳು ಲಭ್ಯವಾಗಿದ್ದಿರಬೇಕು. ದುಃಸ್ವಪ್ನಗಳನ್ನೆಲ್ಲ ದೂರವಾಗಿಸುವ ಬೆಳಕು ಕಿಟಕಿಯನ್ನು ಸ್ಪರ್ಶಿಸುವ ಸಮಯಕ್ಕೆ ಸರಿಯಾಗಿ ಕಣ್ತೆರೆವ ಕರ್ಟನ್ನಿನ ಎಲೆ,…
